ಹೊಸಪೇಟೆ :
ವಿಜಯನಗರ ಕ್ಷೇತ್ರದ ಶಾಸಕ ಆನಂದಸಿಂಗ್ ಶುಕ್ರವಾರ ಇಲ್ಲಿನ ನ್ಯಾಯಾಲಯದ ಆವರಣಕ್ಕೆ ದಿಡೀರ್ ಭೇಟಿ ನೀಡಿ ನ್ಯಾಯಾಲಯದ ಹೆಚ್ಚುವರಿ ಕಟ್ಟಡಗಳ ನಿರ್ಮಾಣಕ್ಕೆ ಬೇಕಾದ ಸ್ಥಳ ಪರಿಶೀಲನೆ ನಡೆಸಿದರು.ಶಾಸಕರು ಬರುತ್ತಿದ್ದಂತೆ ಇಲ್ಲಿನ ವಕೀಲರ ಸಂಘದ ಅಧ್ಯಕ್ಷ ಟಿ.ಹನುಮಂತಪ್ಪ ಹಾಗು ಅವರ ಸಹಚರರು ಅವರಿಗೆ ಹೂಮಾಲೆ ಹಾಕಿ ಬರ ಮಾಡಿಕೊಂಡರು.
ಬಳಿಕ ವಕೀಲರೊಂದಿಗೆ ನ್ಯಾಯಾಲಯದ ಕಾಂಪೌಂಡ್ ಸುತ್ತ ಸುತ್ತಿದ ಶಾಸಕರು, ಕಾಂಪೌಂಡ್ನಿಂದ ಪಶು ಸಂಗೋಪನಾ ಇಲಾಖೆಯ ಸುಮಾರು 80 ಅಡಿ ಉದ್ದದ ವರೆಗೆ ನ್ಯಾಯಾಲಯಗಳ ಕಟ್ಟಡಗಳನ್ನು ನಿರ್ಮಾಣಕ್ಕೆ ಅಗತ್ಯವಾದ ಸ್ಥಳವನ್ನು ಪರಿಶೀಲನೆ ಮಾಡಿದರು. ಈ ಕುರಿತು ಪಶು ವೈಧ್ಯಾಧಿಕಾರಿ ಬಸವರಾಜ ಬೆಣ್ಣೆಯವರೊಂದಿಗೆ ಮಾತುಕತೆ ನಡೆಸಿದರು.ಈ ಸಂಧರ್ಭದಲ್ಲಿ ಮುಖಂಡ ಧರ್ಮೇಂದ್ರಸಿಂಗ್, ವಕೀಲರಾದ ಕೆ.ಪ್ರಹ್ಲಾದ್, ಎರಿಸ್ವಾಮಿ, ಎಲ್.ಎಸ್.ಆನಂದ, ಗುಜ್ಜಲ ನಾಗರಾಜ, ಶಿವಕುಮಾರ್ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
