ಕುಣಿಗಲ್
ಚಾಲಾಕಿಕಳ್ಳರೇ ಇರಬೇಕು, ಪಟ್ಟಣದ ಮುಖ್ಯ ರಸ್ತೆ ಹಳೆ ಬಿ.ಎಂ.ರಸ್ತೆಯಲ್ಲಿರುವ ಪುರಸಭೆ ಪಕ್ಕ ಎಸ್.ಬಿ.ಐ ಪಕ್ಕ ಇರುವ ಎರಡು ಅಂಗಡಿಯ ಮೇಲಿನ ಸೀಟು ಕತ್ತರಿಸಿ ಒಳಹೋಗಿ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ.
ಪಟ್ಟಣದ ಹೃದಯ ಭಾಗದಲ್ಲಿದ್ದು ನಿತ್ಯ ಜನನಿಬಿಡ ಸ್ಥಳ ಖಾಸಗಿ ಬಸ್ ನಿಲ್ದಾಣದ ಸಮೀಪ, ಮುಖ್ಯ ರಸ್ತೆಯ ಪಕ್ಕದಲ್ಲಿಯೇ ಇದ್ದ ಬಸವೇಶ್ವರ ಆಗ್ರೋ ಸೆಂಟರ್ ಮತ್ತು ಕಿಷನ್ ಆಟೋಮೊಬೈಲ್ಸ್ ಸೆಂಟರ್ನ ಮೇಲಿನ ಸೀಟನ್ನು ಕತ್ತರಿಸಿ ಒಳಹೊಕ್ಕ ಖದೀಮರು ಬಸವೇಶ್ವರ ಆಗ್ರೋ ಸೆಂಟರ್ನಲ್ಲಿದ್ದ ಸುಮಾರು 20ಸಾವಿರಕ್ಕೂ ಹೆಚ್ಚು ಬೆಲೆ ಬಾಳುವ ಎರಡು ಹೊಸ ಮೊಬೈಲ್ ಮತ್ತು 20 ಸಾವಿರಕ್ಕೂ ಹೆಚ್ಚು ನಗದು ಹಣವನ್ನು ಹಾಗೂ ಪಕ್ಕದ ಕಿಷನ್ ಆಟೋಮೊಬೈಲ್ ಅಂಗಡಿಯಲ್ಲಿದ್ದ ಸುಮಾರು 1,500 ರೂ. ನಗದು ಸೇರಿದಂತೆ ರಾತ್ರೋರಾತ್ರಿ ಕಳ್ಳರು ತಮ್ಮ ಕೈಚಳಕವನ್ನು ತೋರಿಸುವ ಮೂಲಕ ಈ ಎರಡು ದೊಡ್ಡ ಆರ್ಸಿಸಿ ಮಳಿಗೆಗಳಲ್ಲಿ ಮುಂಭಾಗದ ಮೇಲ್ಛಾವಣಿ ಸೀಟಿನಿಂದ ಕೂಡಿದ್ದನ್ನು ಗಮನಿಸಿದ ಕಳ್ಳರು ಈ ಎರಡು ಅಂಗಡಿಯ ಮೇಲ್ಛಾವಣಿಯನ್ನು ಒಬ್ಬರು ನುಸುಳುವಷ್ಟು ಕತ್ತರಿಸಿ ಒಳಹೊಕ್ಕು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ಈ ಬಗ್ಗೆ ಕುಣಿಗಲ್ ಪೊಲೀಸರು ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.