ಎಂ ಎನ್ ಕೋಟೆ
ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಹೋಬಳಿಯ ಅಳಿಲಘಟ್ಟ ಮಜರೆ ಯರೇಕಾವಲ್ನಲ್ಲಿ ಶನಿವಾರ ಮಧ್ಯಾಹ್ನ ರೈತರ ರಾಗಿ ಬಣವೆಗೆ ಬೆಂಕಿ ಬಿದ್ದು ಸುಮಾರು 40 ಸಾವಿರ ರೂ. ನಷ್ಟ ಉಂಟಾಗಿದೆ. ಇಂತಹ ಆರ್ಥಿಕ ದುಸ್ಥಿತಿಯಲ್ಲಿ ಬಡವರು ಕಷ್ಟ ಪಟ್ಟು ಬೆಳೆದ ರಾಗಿ ಬಣವೆಗೆ ಬೆಂಕಿ ಬಿದ್ದಿರುವುದರಿಂದ ಬಡ ಕುಟುಂಬ ಬೀದಿಪಾಲಾಗಿದೆ.
ದನಕರುಗಳಿಗೆ ಮೇವು ಇಲ್ಲದಂತೆ ಆಗಿದೆ. ಶನಿವಾರ ಮಧ್ಯಾಹ್ನ ಹಠಾತ್ ಬಣವೆಗೆ ಬೆಂಕಿ ಬಿದ್ದಿದ್ದು ಕಿಡಿಗೇಡಿಗಳು ಇಟ್ಟಿದ್ದರಾ ಅಥವಾ ಆಕಸ್ಮಿಕವಾಗಿ ಬೆಂಕಿ ಬಿದ್ದಿದೆಯೊ ಗೊತ್ತಿಲ್ಲ. ರೈತರ ದÀನಕರುಗಳಿಗೆ ಮೇವು ಇಲ್ಲದಂತೆ ಆಗಿದೆ. ಬಸವರಾಜು ಎಂಬುವರ ಕುಟುಂಬ ಬೀದಿ ಪಾಲಾಗಿದೆ. ಸುಮಾರು 20 ಸಾವಿರ ರೂ. ಖರ್ಚು ಮಾಡಿ ರಾಗಿ ಬೆಳೆಯನ್ನು ಬೆಳೆದಿದ್ದು, ರಾಗಿ ಬಣವೆಗೆ ಬೆಂಕಿ ಬಿದ್ದಿರುವುದು ಜನ ಮತ್ತು ಜಾನುವಾರುಗಳಿಗೆ ತೊಂದರೆ ಉಂಟಾಗಿದೆ.
ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಭೇಟಿ ನೀಡಿದ್ದಾರೆ. ಸಂಬಂಧ ಪಟ್ಟ ಅಧಿಕಾರಿಗಳು ಭೇಟಿ ನೀಡಿ ನೊಂದ ರೈತರಿಗೆ ಸೂಕ್ತ ಪರಿಹಾರ ಕೊಡಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








