ಅನಿಷ್ಟಗಳನ್ನು ಮನುಷ್ಯ ತೇಜಿಸಿ ನಿಜವಾದ ಮಾನವನಾಗಬೇಕು-ಆಚಾರ್ಯ ಮಹಾಶ್ರಮಣ್‍ಜಿ

ಹೊಳಲ್ಕೆರೆ:

    ಮಾನವ ಜೀವ ಅತ್ಯಮೂಲ್ಯವಾದುದ್ದು. ಈ ಜೀವ ಸದ್ಬಳಕೆಯಾಗಬೇಕು. ಉತ್ತಮ ಸಂಸ್ಕಾರವನ್ನು ಪಡೆಯಬೇಕು. ದುಶ್ಚಟದ ವ್ಯಸನೀಯ ಆಗಬಾರದು ಈ ಅನಿಷ್ಟ ಪದ್ದತಿಯನ್ನು ದೂರ ಮಾಡಿ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕೆಂದು ರಾಷ್ಟ್ರ ಸಂತ ತೇರಾ ಪಂಥದ ಮಹಾ ಮುನಿಗಳಾದ ಆಚಾರ್ಯ ಮಹಾ ತಜ್ಞರಾದ ಮಹಾಶ್ರಮಣ್‍ಜಿ ಅವರು ಉಪದೇಶ ನೀಡಿದರು.

    ದೇಶದಲ್ಲಿ ನಾಲ್ಕು ವಿಭಾಗಗಳನ್ನು ವಿಂಗಡಿಸಿದ್ದು ಹೊಳಲ್ಕೆರೆ ಪ್ರದೇಶ ಉತ್ತರ ಕರ್ನಾಟಕದ ಗಡಿಯಾಗಿದ್ದು ಹೊಳಲ್ಕೆರೆಯ ಜೈನ ಸಮುದಾಯ ಜ್ಞಾನ ಗಂಗೋತ್ರಿ ಶಾಲಾ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಒಂದು ದಿನದ ಧಾರ್ಮಿಕ ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿ ಗುರುಗಳು ಮಾತನಾಡಿದರು.

    ಇದು ಕೇವಲ ಜೈನ ಸಮಾಜದ ಬಗ್ಗೆ ಮಾತ್ರವಲ್ಲ ಒಟ್ಟು ಇಡೀ ಮನುಕುಲದ ಚಿಂತೆಯಾಗಿದೆ. ಭಾರತೀಯ ಸಮಾಜದ ಪರಂಪರೆ ದೃಷ್ಟಿಯಲ್ಲಿಟ್ಟುಕೊಂಡು ಸಮಾಜ ಶಾಸ್ತ್ರೀಯ ಮನೋವೈಜ್ಞಾನಿಕ ನೆಲೆಯಮೇಲೆ ದೇಶದೆಲ್ಲಡೆ ತಮ್ಮ ಪರಿವಾರದ ಜೊತೆ ಪಾದ ಯಾತ್ರ ಮೂಲಕ ಅಹಿಂಸಾ ಧರ್ಮ ಪಾಲನೆಯನ್ನು ಮಾಡಲಾಗುತ್ತಿದೆ ಎಂದು ಗುರುಗಳು ತಿಳಿಸಿದರು.

     ಒಬ್ಬ ಮನುಷ್ಯ ಕುಟುಂಬದ ಜೊತೆ ಶಾಂತಿಯುತ ಸಹನೆ ಸಾಮರಸ್ಯವನ್ನು ಹೇಗೆ ಹೆಚ್ಚಿಸುವುದು ಕೌಟುಂಬಿಕ ಜೀವನ ನಿರ್ವಹಣೆ ಶಾಂತಿ ಸಹ ಜೀವನ ಭಾಷಾ ವಿವೇಕ ಸಂಬಂಧಗಳನ್ನು ಮಧುರವಾಗಿಸಿಕೊಳ್ಳಬೇಕು. ಮನುಷ್ಯ ತಮ್ಮ ಸುಖಕರ ಜೀವನವನ್ನು ಸಮನ್ವಯ ದೃಷ್ಟಿಕೋನದ ಶಾಂತಿಯ ಮಹಾಮಂತ್ರ ಜೊತೆಗೆ ಅಧ್ಯಾತ್ಮಿಕತೆಯನ್ನು ಚಾಚು ತಪ್ಪದೆ ಅನುಸರಿಸಬೇಕು. ಇದರಿಂದ ಅವನಿಗೆ ಪರಿಪೂರ್ಣ ಸಂಸ್ಕಾರ ದೊರೆಯುತ್ತದೆ ಎಂದರು.

     ಮನುಷ್ಯ ಪರಿಪೂರ್ಣ ಜೀವನ ಸಮಾಜದಲ್ಲಿ ಮತ್ತು ಕುಟುಂಬದಲ್ಲಿ ಗುರುತಿಸುಕೊಳ್ಳುವಲ್ಲಿ ಸಮ್ಮರ್ಥತೆಯನ್ನು ಬೆಳೆಸಿಕೊಳ್ಳಬೇಕು. ಯಾರಿಗೂ ಮೋಸ ವಂಚನೆ ದ್ರೋಹ ಮಾಡಬಾರದು. ಸಾಮಾಜಿಕ ಅಭಿವೃಧ್ದಿಯಲ್ಲಿ ಅಥವಾ ಸಾಮಾಜಿಕ ಮಾರ್ಗದಲ್ಲಿ ಭ್ರಷ್ಟಚಾರ ಅನೈತಿಕತೆ ಮುಂತಾದ ಅನಿಷ್ಟಗಳನ್ನು ಮನುಷ್ಯ ತೇಜಿಸಿ ಮಾನವನಾಗಬೇಕು.

     ಸಕಲ ಜೀವಿಗಳಲ್ಲಿ ಲೇಸನ್ನು ಬಯಸಬೇಕು. ಈ ಭೂಮಿ ಮೇಲೆ ಹುಟ್ಟಿರುವ ಪ್ರತಿಯೊಂದು ಜೀವಿಗಳಿಗೂ ಬದುಕಲು ಸ್ವಾತಂತ್ರ್ಯವಿದೆ. ಮನುಷ್ಯ ತನ್ನ ದುರುಳತನದಿಂದ ಜೀವಿಗಳಿಗೆ ಹಿಂಸೆಯನ್ನು ನೀಡಬಾರದು. ಅವು ನಮ್ಮಂತಹ ಜೀವಿಗಳು ಎಂಬ ಮನೋಜ್ಞಾನವನ್ನು ಬೆಳೆಸಿಕೊಳ್ಳಬೇಕು. ರಾಷ್ಟ್ರ ಪ್ರೇಮವನ್ನು ಕಾಪಾಡಬೇಕು. ಇಡೀ ಜೀವನ ಸಂಕುಲ ಒಂದೇ ಎಂಬ ದೂರದೃಷ್ಟಿಯನ್ನು ಪ್ರತಿಯೊಬ್ಬ ಮಾನವನು ಬೆಳೆಸಿ ತನ್ನ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು ಇದರಿಂದ ಮುಕ್ತಿ ಪಡೆಯಲು ಸಾಧ್ಯವಾಗುತ್ತದೆ ಎಂದು ಆಚಾರ್ಯ ಮಹಾಶ್ರಮಣ್ ತಮ್ಮ ಆಶಿರ್ವಾದದಲ್ಲಿ ತಿಳಿಸಿದರು.

    ಶ್ರೀಗಳು ದೇಶದೆಲ್ಲಡೆ ಸಂಚರಿಸಿ ಅಹಿಂಸಾ ಕ್ರಾಂತಿಯನ್ನು ಸಾರಲು ನೂರು ಜನರ ಶಿಷ್ಯ ಪಡೆಯಮೂಲಕ ಕಾಲ್ನಡಿಗೆಯಲ್ಲಿ ಸಂಚರಿಸುತ್ತಾರೆ. ಬೆಂಗಳೂರಿನಲ್ಲಿ ನಡೆದ ಚತುರ್ಮಾಸ ಕಾರ್ಯಕ್ರಮವನ್ನು ಪೂರ್ಣಗೊಳಿಸಿ ಮಲೆನಾಡು ವಿಭಾಗದಿಂದ ಉತ್ತರ ಕರ್ನಾಟಕದ ಹೆಬ್ಬಾಗಿಲು ಹೊಳಲ್ಕೆರೆಗೆ ಆಗಮಿಸಿ ಒಂದು ದಿನದ ಮಹಾ ಅಧ್ಯಾತ್ಮಿಕ ಸಮ್ಮೇಳನದಲ್ಲಿ ಸಹ್ರಸಸಹಸ್ರ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರಿಗೆ ದಿವ್ಯ ಸಂದೇಶವನ್ನು ನೀಡಿದರು.

    ಈ ಕಾರ್ಯಕ್ರಮದ ಸಂಪೂರ್ಣ ಮೇಲುಸ್ತುವಾರಿಯನ್ನು ಪಟ್ಟಣದ ಪೂರ್ಣಿಮ ಟೆಕ್ಸ್‍ಟೈಲ್ ವರ್ತಕರಾದ ದಿಲಿಪ್‍ಜೈನ್, ಮಹಾವೀರ್‍ಜೈನ್, ಚೇತನ್‍ಜೈನ್, ಅವರ ಕುಟುಂಬ ಮತ್ತು ಹೊಳಲ್ಕೆರೆ ಜೈನ ಸಮಾಜ ಆಯೋಜಿಸಿತ್ತು. ಶ್ರೀಗಳ ಪಾದ ಸ್ಪರ್ಶದಿಂದ ಹೊಳಲ್ಕೆರೆ ಪಟ್ಟಣ ಪವಿತ್ರವಾಗಿದೆ ಎಂದು ಆಯೋಜಕರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿ ಇಂತಹ ಗುರುಗಳ ದರ್ಶನವನ್ನು ಪಡೆದಿದ್ದೇ ನಮ್ಮ ಪೂರ್ವಜನ್ಮದ ಪುಣ್ಯ ಎಂದು ಸ್ಮರಿಸಿದರು.

   ಈ ಅಧ್ಯಾತ್ಮಿಕ ಕಾರ್ಯಕ್ರಮಕ್ಕೆ ಚಿತ್ರದುರ್ಗ, ಹಿರಿಯೂರು, ಚಿಕ್ಕಜಾಜೂರು ಬಳ್ಳಾರಿ, ದಾವಣಗೆರೆ, ಹೊಸಪೇಟೆ, ಕಂಬ್ಲಿ, ಕೊಪ್ಪಳ, ರಾಯಚೂರು, ಸಿಂದನೂರು, ಚಳ್ಳಕೆರೆ, ಮುಂತಾದ ಉತ್ತರ ಕರ್ನಾಟಕ ಸೇರಿದ ನಗರಗಳಿಂದ ಪುರುಷರು ಮತ್ತು ಮಹಿಳೆಯರು ಸಹಸ್ರ ಸಂಖ್ಯೆಯಲ್ಲಿ ಆಗಮಿಸಿ ಶ್ರೀಗಳನ್ನು ಸ್ವಾಗತಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link