ಜೀವನದಲ್ಲಿ ಆಚಾರ ವಿಚಾರಗಳನ್ನು ರೂಢಿಸಿಕೊಂಡಾಗ ಮಾತ್ರ ನೆಮ್ಮದಿ ಸಾಧ್ಯ : ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ

ತಿಪಟೂರು :

     ನಮ್ಮ ಪೂರ್ವಜರು ಜಾತ್ರೆ, ಉತ್ಸವ, ಹಬ್ಬ ಮೊದಲಾದ ಆಚರಣೆಗಳ ಮೂಲಕ ಸಂಘ ಜೀವನದ ಸಾಮರಸ್ಯಗಳನ್ನು, ಬಂಧು ಬಾಂದವರ ಬಾಂಧವ್ಯಗಳನ್ನು, ಸಂಸ್ಕøತಿ, ಆಚಾರ-ವಿಚಾರ, ಸುಖ, ಶಾಂತಿ, ನೆಮ್ಮದಿಯನ್ನು ಕಾಣುತ್ತಿದ್ದರು ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.

    ತಾಲ್ಲೂಕಿನ ದಸರಿಘಟ್ಟದ ಕೆರೆಗೆ ಹೇಮವತಿ ನಾಲೆಯಿಂದ ಏತ ನೀರಾವರಿಯ ಮೂಲಕ ತುಂಬಿದ ಹಿನ್ನಲೆಯಲ್ಲಿ ಆಯೋಜಿಸಿದ್ದ ತೆಪ್ಪೋತ್ಸವ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು.

      ಸಂಸಾರದ ಸಾಗರದಲ್ಲಿ ಸಹ ಕಷ್ಟಗಳು ನಿವಾರಣೆಯಾಗಲು ದೈವೀಭಕ್ತಿ ಅಗತ್ಯ. ಸುಖ ಹಾಗೂ ದುಃಖಗಳು ಬಂದಾಗ ದೇವರ ಸ್ಮರಣೆ ಮಾಡಬೇಕು. ಜಗತ್ತಿನ ಸೃಷ್ಠಿಕರ್ತ ಪರಮಾತ್ಮನಾದ್ದರಿಂದ ಮನುಷ್ಯನಾದವನು ಧರ್ಮದಾನಗಳಿಂದ ಬದುಕಬೇಕು. ಮನುಷ್ಯನಲ್ಲಿ ಕಷ್ಟಕಾರ್ಪಣ್ಯಗಳು ದೂರವಾಗಲು ಭಗವಂತನ ನಾಮಸ್ಮರಣೆ ಅತಿಮುಖ್ಯವಾಗಿದೆ. ಹಿರಿಯರಲ್ಲಿ ಗೌರವ, ಗುರುಗಳಲ್ಲಿ ಭಕ್ತಿ ಭಾವಗಳನ್ನು ಬೆಳೆಸಿಕೊಂಡು ಇಳಿವಯಸ್ಸಿನ ತಂದೆ-ತಾಯಿಗಳಿಗೆ ಆಸರೆಯಾಗಿರುತ್ತಿದ್ದರು.

      ನಾಗರೀಕತೆ ಬೆಳೆದಂತೆ ಜನಶೈಲಿಗಳು ಬದಲಾಗಿ ಕುಟುಂಬಗಳು ಒಡೆದು ನೆಮ್ಮದಿಯನ್ನು ಕಳೆದುಕೊಂಡು ನರಳಾಡುತ್ತಿದ್ದಾರೆ. ಮಾನವೀಯತೆ ಮತ್ತು ಜೀವನ ಮೌಲ್ಯಗಳು ಮಾಯವಾಗುತ್ತಿವೆ. ಆದುದರಿಂದ ನಾವೆಲ್ಲರೂ ದೇವರು, ಧರ್ಮ, ಆಚಾರ, ನೈತಿಕತೆಗಳಲ್ಲಿ ನಂಬಿಕೆಯಿರಿಸಿ, ಪೂಜೆ, ಪ್ರಾರ್ಥನೆಗಳಂತಹ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸಚ್ಛಾರಿತ್ರ್ಯ ವುಳ್ಳವರಾಗಬೇಕು. ಅಂತರಂಗ, ಬಹಿರಂಗ ಗಳೆರಡರಲ್ಲೂ ಪರಿಶುದ್ಧತೆಯನ್ನು ಕಂಡುಕೊಂಡು ಭೇದಗಳನ್ನು ಮರೆತು ಒಂದೇ ಕುಟುಂಬದವರಂತೆ ಧಾರ್ಮಿಕ ಕಾರ್ಯಗಳಲ್ಲಿ ಭಕ್ತಿ ಶ್ರದ್ಧೆಯಿಂದ ಭಾಗವಹಿಸಿ ಜೀವನದಲ್ಲಿ ಮುಕ್ತಿಯನ್ನು ಕಂಡುಕೊಳ್ಳ ಬೇಕು. ಪರೋಪಕಾರ, ಸಮಾಜಸೇವೆಗಳಂತಹ ಸತ್ಕಾರ್ಯಗಳಲ್ಲಿ ಸಕ್ರಿಯರಾಗಿ ಸಾರ್ಥಕ್ಯವನ್ನು ಕಂಡುಕೊಂಡು ಭಗವಂತನ ಕೃಪಾಕಟಾಕ್ಷ್ಯಕ್ಕೆ ಪಾತ್ರರಾಗಬೇಕೆಂದು ತಿಳಿಸಿದರು.

     ಈ ಸಂದರ್ಭದಲ್ಲಿ ದಸರಿಘಟ್ಟ ಶ್ರೀ ಕ್ಷೇತ್ರ ಆದಿಚುಂಚನಗಿರಿ ಶಾಖಾ ಮಠದ ಚಂದ್ರಶೇಖರನಾಥ ಸ್ವಾಮೀಜಿ, ಕುಂಬಳಗೂರು ಆದಿಚುಂಚನಗಿರಿ ಶಾಖಾಮಠ ಪ್ರಸನ್ನನಾಥ ಸ್ವಾಮೀಜಿ, ಮಂಗಳೂರಿನ ಶ್ರೀ ಧರ್ಮಪಾಲನಾಥ ಸ್ವಾಮೀಜಿ, ಹಾಸನ ಶಾಖಾಮಠದ ಶಂಭುನಾಥ ಸ್ವಾಮೀಜಿ, ಚಿಕ್ಕಬಳ್ಳಾಪುರ ಮಂಗಳನಾಥ ಸ್ವಾಮೀಜಿ, ಕಬ್ಬಳ್ಳಿ ಶಾಖಾಮಠದ ಶಿವಪುತ್ರನಾಥ ಸ್ವಾಮೀಜಿ, ಆಚರಹಳ್ಳಿಯ ಅನ್ನದಾನೇಶ್ವರನಾಥ ಸ್ವಾಮೀಜಿ, ಶಾಸಕ ಬಿ.ಸಿ.ನಾಗೇಶ್, ಮುಖಂಡ ಲೋಕೇಶ್ವರ್, ಜಿ.ಪಂ.ಸದಸ್ಯ ಜಿ.ನಾರಾಯಣ್, ಟ್ರಸ್ಟಿಗಳಾದ ಸಿದ್ದಪ್ಪ, ರಾಮಕೃಷ್ಣಪ್ಪ, ಶ್ರೀ ರಂಗ ಆಸ್ಪತ್ರೆಯ ಡಾ.ವಿವೇಚನ್, ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಚಿದಾನಂದ್ , ಸೇರಿದಂತೆ ದಸರಿಘಟ್ಟ ಗ್ರಾಮಸ್ಥರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link