ಮಂಗಳೂರು ಗಲಭೆ ಮೃತರಿಗೆ ಮಮತಾ ಬ್ಯಾನರ್ಜಿಯಿಂದ 5 ಲಕ್ಷ ಪರಿಹಾರ!!

ಕೊಲ್ಕತ್ತಾ:

ಮಂಗಳೂರು ಗಲಭೆ ಸಂದರ್ಭದಲ್ಲಿ ಪೊಲೀಸರ ಗೋಲಿಬಾರ್ ಮೃತರಾದ  ಇಬ್ಬರ ಕುಟುಂಬಗಳಿಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಪರಿಹಾರ ಘೋಷಣೆ ಮಾಡಿದ್ದಾರೆ.

      ಸಿಎಎ ವಿರುದ್ಧದ ಪ್ರತಿಭಟನಾ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಮಮತಾ ಬ್ಯಾನರ್ಜಿ ಅವರು, ಕರ್ನಾಟಕ ಸರ್ಕಾರ ಸಿಎಎ ಪ್ರತಿಭಟನೆ ವೇಳೆ ಪೊಲೀಸರ ಗುಂಡಿಗೆ ಬಲಿಯಾದವರಿಗೆ ನೀಡುತ್ತೇವೆ ಎಂದಿದ್ದ ಪರಿಹಾರ ಹಣವನ್ನು ವಾಪಸ್ ಪಡೆದಿದೆ. ಬಿಜೆಪಿ ಸರ್ಕಾರ ಮೊದಲು ಕೊಟ್ಟ ಭರವಸೆಯನ್ನು ಈಡೇರಿಸಿಲ್ಲ. ಕರ್ನಾಟಕ ಸಿಎಂ ಅವರು ಕೊಟ್ಟ ಪರಿಹಾರವನ್ನು ವಾಪಾಸ್ ಪಡೆದಿರುವ ಹಲವು ಉದಾಹರಣೆಗಳಿದ್ದು, ಆದರೆ ನಾವು ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ನೆರವು ನೀಡುವುದಾಗಿ ತಿಳಿಸಿದರು.

      ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಡಿಸೆಂಬರ್ 19 ರಂದು ನಡೆದ ಪ್ರತಿಭಟನೆಯಲ್ಲಿ ಹಿಂಸಾಚಾರದಲ್ಲಿ ಇಬ್ಬರು ಭಾಗಿಯಾಗಿರುವುದು ತನಿಖೆಯಿಂದ ಸಾಬೀತಾದರೆ ಸರ್ಕಾರ ಅವರ ಕುಟುಂಬಗಳಿಗೆ ಒಂದು ರೂಪಾಯಿ ಕೂಡ ನೀಡುವುದಿಲ್ಲ ಎಂದು ಕರ್ನಾಟಕ ಮುಖ್ಯಮಂತ್ರಿ ಡಿಸೆಂಬರ್ 25 ರಂದು ಸುದ್ದಿಗಾರರಿಗೆ ತಿಳಿಸಿದ್ದರು.

      ಇದರ ಬೆನ್ನಲ್ಲೇ ಬೆನ್ನಿಗೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮೃತ ಜಲೀಲ್ ಹಾಗೂ ನೌಶೀನ್ ಅವರ ಕುಟುಂಬಗಳಿಗೆ ಪರಿಹಾರ ಘೋಷಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link