ಮೈಸೂರು
ರಾಜ್ಯದ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗುತ್ತಿದೆ ಇದಕ್ಕೆ ಕಾರಣ ಏನೆಂದು ನೋಡಿದರೆ ಪೌರತ್ವ ತಿದ್ದುಪಡಿ ನೀತಿ ವಿರುದ್ಧದ ಪ್ರತಿಭಟನೆ ಎನ್ನಲಾಗಿದೆ ಸಾಂಸ್ಕೃತಿಕ ನಗರಿ ರಾಜ್ಯದಲ್ಲಿ ಅತ್ಯಂತ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ನಗರ. ಪ್ರಾಣಿ ಸಂಗ್ರಹಾ ಲಯ , ಅರಮನೆ ಸೇರಿದಂತೆ ಅನೇಕ ಪ್ರವಾಸಿ ತಾಣಗಳು ಇಲ್ಲಿದ್ದು, ಇವುಗಳನ್ನೆ ಲ್ಲ ಕಣ್ತುಂಬಿಕೊಳ್ಳಲು ಡಿಸೆಂಬರ್ ನಲ್ಲಿ ರಾಜ್ಯ, ಹೊರ ರಾಜ್ಯ, ದೇಶ-ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ.
ಆದರೆ ಈ ಬಾರಿ ಇಲ್ಲಿ ಪ್ರವಾಸೋದ್ಯಮ ಕಳೆಗುಂದಿದೆ. ಆರ್ಥಿಕ ಹಿಂಜರಿತದ ನಡುವೆಯೂ ಅಲ್ಪ ಸ್ವಲ್ಪ ಚೇತರಿಕೆ ಕಾಣುತಿದ್ದ ಪ್ರವಾಸೋದ್ಯಮ ಕಳೆದ ಎರಡು ವಾರಗಳಿಂದ ಮಕಾಡೆ ಮಲಗಿದೆ.
ದೇಶದಲ್ಲಿ ಎನ್ಆರ್ಸಿ ಹಾಗೂ ಸಿಎಎ ವಿರೋಧಿ ಪ್ರತಿಭಟನೆಗಳು ಆರಂಭವಾದ ಬಳಿಕ ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ ಎನ್ನಲಾಗುತ್ತಿದೆ. ರಾಜ್ಯದಲ್ಲೂ ಸಿಎಎ ಮತ್ತು ಎನ್ಆರ್ಸಿ ವಿರೋಧಿ ಪ್ರತಿಭಟನೆಗಳು ನಡೆಯುತ್ತಿರುವುದರಿಂದ ಪ್ರವಾಸಿ ತಾಣ ಮೈಸೂರಿಗೆ ಭೇಟಿ ನೀಡಲು ಪ್ರವಾಸಿಗರೂ ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದಿದೆ. ಪ್ರತಿಭಟನೆಗಳಿಂದ ಶೇ 20ರಿಂದ 40ರಷ್ಟು ಪ್ರವಾಸಿಗರು ಭೇಟಿ ನೀಡಿಲ್ಲ ಎನ್ನುತ್ತಿದೆ ಮೈಸೂರು ಹೋಟೆಲ್ ಅಸೋಸಿಯೇಷನ್.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
