ನವದೆಹಲಿ:
ಡೋಪ್ ಪರೀಕ್ಷೆಯಲ್ಲಿ ವಿಫಲರಾದ ಕಾರಣ ಭಾರತದ ಬಾಕ್ಸರ್ ಸುಮಿತ್ ಸಂಗ್ವಾನ್ ಮೇಲೆ ಒಂದು ವರ್ಷದ ನಿಷೇಧವನ್ನು ಗುರುವಾರ ಹೇರಿದೆ.
ನಿಷೇಧಿತ ಉದ್ದೀಪನಾ ಮದ್ದು ಸೇವಿಸಿದ್ದು ಸಾಬೀತಾಗಿರುವ ಕಾರಣ ಭಾರತದ ಬಾಕ್ಸರ್ ಸುಮಿತ್ ಸಂಗ್ವಾನ್ ಮೇಲೆ ರಾಷ್ಟ್ರೀಯ ಉದ್ದೀಪನಾ ಮದ್ದು ತಡೆ ಘಟಕ (ನಾಡಾ) ಗುರುವಾರ ಒಂದು ವರ್ಷ ನಿಷೇಧ ಹೇರಿದೆ. ಅವರ ಅಮಾನತು ಅವಧಿಯು 2019 ರ ಡಿಸೆಂಬರ್ 26 ರ ಗುರುವಾರದಿಂದ ಪ್ರಾರಂಭವಾಗುತ್ತದೆ.
2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಸುಮಿತ್, ಏಷ್ಯನ್ ಕ್ರೀಡಾಕೂಟದಲ್ಲಿ ಬೆಳ್ಳಿಯ ಪದಕ ಜಯಿಸಿದ್ದರು. ತಕ್ಷಣದಿಂದಲೇ ನಿಷೇಧ ಜಾರಿಯಾಗಿರುವ ಕಾರಣ ಅವರು ಒಲಿಂಪಿಕ್ ಅರ್ಹತಾ ಟ್ರಯಲ್ಸ್‌ನಲ್ಲಿ ಭಾಗವಹಿಸುವ ಅವಕಾಶ ಕಳೆದುಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ