ಚಿತ್ರದುರ್ಗ ;
ಕೇಂದ್ರ ಸರ್ಕಾರದ ಕಾರ್ಮಿಕ ನೀತಿ, ಸರ್ಕಾರ ಸ್ವಾಮ್ಯದ ಕೈಗಾರಿಕೆಗಳ ಖಾಸಗೀಕರಣ, ಜನ ವಿರೋಧಿ ನೀತಿಯನ್ನು ವಿರೋಧಿಸಿ ಜ. 8 ರಂದು ಬಂದ್ ಬದಲಾಗಿ ಪ್ರತಿಭಟನೆಯನ್ನು ಹಮ್ಮಿಕೊಂಡಿರುವುದಾಗಿ ಕಾಂಗ್ರೇಸ್ ಸಮಿತಿಯ ರಾಜ್ಯ ಕಾರ್ಮಿಕ ಸಮಿತಿ ಅಧ್ಯಕ್ಷ ಎಸ್.ಎಸ್.ಪ್ರಕಾಶಂ ತಿಳಿಸಿದರು.
ಚಿತ್ರದುರ್ಗ ನಗರದ ಕಾಂಗ್ರೇಸ್ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಜನ ವಿರೋಧಿ ನೀತಿಗಳನ್ನು ಜಾರಿ ಮಾಡುವುದರ ಮೂಲಕ ಜನ ವಿರೋಧಿ ಆಡಳಿತವನ್ನು ನೀಡುತ್ತಿದೆ ಎಂದು ಟೀಕಿಸಿದರು
ಸರ್ಕಾರದಲ್ಲಿರುವ ಕಾರ್ಮಿಕರ ಸಾವಿರಾರು ಕೋಟಿ ರೂ.ಗಳನ್ನು ಬೇರೆ ಕಡೆಗೆ ವರ್ಗಾವಣೆ ಮಾಡುವ ಹುನ್ನಾರವನ್ನು ಮಾಡಿದೆ ಇದನ್ನು ಕಾರ್ಮಿಕ ವಿವಿಧ ಸಂಘಟನೆಗಳು ವಿರೋಧವನ್ನು ವ್ಯಕ್ತಪಡಿಸಿದ್ದು ಅಲ್ಲದೆ ನ್ಯಾಯಾಲಯವು ಸಹಾ ಇದನ್ನು ಕಾರ್ಮಿಕರ ಹಿತಕ್ಕಾಗಿ ಮಾತ್ರವೇ ಬಳಕೆ ಮಾಡುವಂತೆ ಸೂಚನೆ ಮಾಡಿದ್ದರ ಮೇರೆಗೆ ಸರ್ಕಾರ ಸುಮ್ಮನಿದೆ ಇಲ್ಲವಾಗಿದ್ದರೆ ಈ ವೇಳೆಗೆ ಕಾರ್ಮಿಕ ನಿಧಿ ಬೇರೆ ಕಡೆಗೆ ವರ್ಗವಾಗುತ್ತಿತು ಎಂದರು.
ಈ ಹಿಂದೆ ಸರ್ಕಾರ ಹಲವಾರು ವಿವಿಧ ರೀತಿಯ ಉದ್ಯಮವನ್ನು ಸ್ಥಾಪನೆ ಮಾಡುವುದರ ಮೂಲಕ ಕಾರ್ಮಿಕರ ಪರವಾಗಿ ಅಡಳಿತವನ್ನು ನಡೆಸಿದವು ಆದರೆ ಈಗಿನ ಮೋದಿ ನೇತೃತ್ವದ ಸರ್ಕಾರ ತನ್ನ ಹಿಡಿತದಲ್ಲಿದ್ದ ಕೈಗಾರಿಕೆ ಗಳನ್ನು ಖಾಸಗಿಕರಣ ಮಾಡುವುದರ ಮೂಲಕ ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಬೀದಿ ಪಾಲು ಮಾಡುತ್ತಿದೆ, ರೈಲ್ವೆಯನ್ನು ಲಾಭಕ್ಕಾಗಿ ನಡೆಸದೇ ಜನತೆಗೆ ಅನುಕೂಲಕ್ಕಾಗಿ ನಡೆಸಬೇಕೆಂಬುದು ಗಾಂಧೀಜಿಯವರ ಅಭೀಪ್ರಾಯ ವಾಗಿತ್ತು ಆದರೆ ಈಗಿನ ಸರ್ಕಾಎ ಅದರ ಮೇಲೂ ಕಣ್ಣು ಹಾಕಿ ಅದನ್ನು ಸಹಾ ಖಾಸಗೀಕರಣ ಮಾಡಲು ಮುಂದಾಗಿರುವುದು ದೇಶದ ದುರಂತ ಎಂದು ಪ್ರಕಾಶಂ ತಿಳಿಸಿದರು.
ಕಾಂಗ್ರೇಸ್ ಪಕ್ಷದಿಂದ ಕಾರ್ಮಿಕ ಸದಸ್ಯತ್ವ ಅಭೀಯಾನವನ್ನು ಹಮ್ಮಿಕೊಳ್ಳಲಾಗಿದೆ ಎಲ್ಲಿ ಕಾರ್ಮಿಕರು ಕೆಲಸವನ್ನು ಮಾಡುತ್ತಾರೆ ಅಲ್ಲಿಗೆ ನಮ್ಮ ಪದಾಧಿಕಾರಿಗಳು ಭೇಟಿ ನೀಡುವುದರ ಮೂಲಕ ಅವರಿಂದ ಮಾಹಿತಿ ಸಂಗ್ರಹ ಮಾಡಿ ಕಾರ್ಮಿಕ ಇಲಾಖೆಯಲ್ಲಿ ಸದಸ್ಯರಾಗುವಂತೆ ಮಾಡಲಾಗುವುದು, ಸದಸ್ಯತ್ವ ಶುಲ್ಕ ಇಲ್ಲದಿದ್ದರೆ ಪಕ್ಷದವತಿಯಿಂದಲೇ ತುಂಬಲಾಗುವುದು ಎಂದು ಪ್ರಕಾಶಂ ತಿಳಿಸಿದರು.
ಕೇಂದ್ರ ಸರ್ಕಾರದ ಈ ಜನ ಮತ್ತು ಕಾರ್ಮಿಕ ವಿರೋಧೀ ನೀತಿಯನ್ನು ಪ್ರತಿಭಟಿಸಿ ಜ.8 ರಂದು ದೇಶದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಬಂದ್ ಬದಲಾಗಿ ಪ್ರತಿಭಟನೆಯನ್ನು ನಡೆಸಲಾಗುತ್ತಿದೆ ಅಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 3ರವರೆಗೆ ಪ್ರತಿಭಟನೆಯನ್ನು ನೆಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುತ್ತದೆ ಎಂದರು ಗೋಷ್ಟಿಯಲ್ಲಿ ಜಿಲ್ಲಾಧ್ಯಕ್ಷ ಎಂ.ಕೆ. ತಾಜ್‍ಪೀರ್ ರಾಜ್ಯ ಉಪಾಧ್ಯಕ್ಷ ಎಂ.ಜಾಕೀರ್ ಹುಸೇನ್, ಮುಖಂಡರಾದ ತಿಪ್ಪೇಸ್ವಾಮಿ. ಕಾರ್ಮಿಕ ಸಂಘಟನೆಯ ಜಿಲ್ಲಾಧ್ಯಕ್ಷ ಸೈಯದ್ ಮೋಹಿದ್ದೀನ್ ಸೇರಿದಂತೆ ಇತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
