ವಿಜಯಪುರ:
ಗರ್ಭಿಣಿ ಮಹಿಳೆಯೊಬ್ಬಳು ಬಸ್ ನಿಲ್ದಾಣದಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಮಹಾದೇವಿ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ. ತುಂಬು ಗರ್ಭಿಣಿಯಾಗಿದ್ದ ಈ ಮಹಿಳೆ ವಿಜಯಪುರ ಜಿಲ್ಲೆಯ ಬಾಗೇವಾಡಿ ನಿವಾಸಿ.
ಹೆರಿಗೆಗಾಗಿ ಬಾಗಲಕೋಟೆಗೆ ತೆರಳಲು ನಿಡಗುಂದಿ ಬಸ್ ನಿಲ್ದಾಣಕ್ಕೆ ಬಂದಿದ್ದ ಮಹಾದೇವಿ, ಸುಮಾರು ಒಂದು ಗಂಟೆ ಕಾಯ್ದರೂ ಬಸ್ಸು ಬಂದಿರಲಿಲ್ಲ. ಈ ಮಧ್ಯೆ ಹೆರಿಗೆ ನೋವು ಹೆಚ್ಚಾಗಿದೆ. ಆಗ ಆಕೆಯ ಜೊತೆಗಿದ್ದ ಮಹಿಳೆಯರು ಗರ್ಭಿಣಿ ಸುತ್ತ ಸೀರೆ ಕಟ್ಟಿ ಮರೆ ಮಾಡಿ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ.
ಹೆರಿಗೆ ನಂತರ ಸ್ಥಳೀಯರ ಸಹಾಯದೊಂದಿಗೆ ಮಹಿಳೆ ಮಹಾದೇವಿ ವಡ್ಡರ ಮತ್ತು ಹೆಣ್ಣು ಮಗುವನ್ನು ರಾಂಪೂರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಗಿದೆ. ತಾಯಿ ಮತ್ತು ಮಗು ಆರೋಗ್ಯದಿಂದ ಇದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ