ಕ್ಯಾನ್‌ಬೆರಾ:
ನ್ಯೂಸೌತ್ ವೇಲ್ಸ್ ಮತ್ತು ಇನ್ನಿತರೆ ಬೆಟ್ಟ ಪ್ರದೇಶಗಳಲ್ಲಿ ಹತೋಟಿಗೆ ಸಿಗದಂತೆ ಉಲ್ಬಣಗೊಳ್ಳುತ್ತಿರುವ ಕಾಡ್ಗಿಚ್ಚಿನ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಈ ತಿಂಗಳ ಭಾರತ ಪ್ರವಾಸವನ್ನು ರದ್ದುಗೊಳಿಸುವ ಸಂಭವಿದೆ ಎನ್ನಲಾಗಿದೆ.
ಪೂರ್ವ ನಿಗದಿಯಂತೆ ಮಾರಿಸನ್ ಅವರು ಜನವರಿ 13 ರಿಂದ 16 ರವರೆಗೆ ಭಾರತ ಪ್ರವಾಸ ಕೈಗೊಳ್ಳಬೇಕಿತ್ತು ಆದರೆ ತಮ್ಮ ದೇಶದಲ್ಲಿ ಹತೋಟಿಗೆ ಸಿಗದೆ ಹಬ್ಬುತ್ತಿರುವ ಕಾಡ್ಗಿಚ್ಚು ಮತ್ತು ಇನ್ನಿತರೆ ಆಂತರಿಕ ಸಮಸ್ಯೆಯಿಂದಾಗಿ ತಮ್ಮ ಭಾರತ ಭೇಟಿಯನ್ನು ಮುಂದೂಡುವ ಸಾಧ್ಯತೆ ಹೆಚ್ಚಾಗಿದೆ ಎಂದು ಆಸ್ಟ್ರೇಲಿಯಾದ ಮಾಧ್ಯಮಗಳು ತಿಳಿಸಿವೆ ಮತ್ತು ಭಾರತದಲ್ಲಿ ಸದ್ಯ ಎದ್ದಿರುವ ಪೌರತ್ವ ಜ್ವಾಲೆಯಿಂದ ತಮ್ಮ ಭದ್ರತೆಗೆ ಹಾನಿಯಾಗಬಹುದು ಎಂಬುದು ಒಂದು ಕಾರಣ ಎನ್ನಲಾಗಿದೆ ಪ್ರಮುಖವಾಗಿ ಕಾಡ್ಗಿಚ್ಚು ಮತ್ತು ಆಂತರಿಕ ಸಮಸ್ಯೆ ಪರಿಹಾರದ ಕಾರಣ ನೀಡಿದ್ದಾರೆ ಎಂದು ತಿಳಿದು ಬಂದಿದೆ . ಇನ್ನು ನಿಗದಿಯಂತೆ ಪ್ರವಾಸವಾಗಿದ್ದರೆ ಎರಡೂ ದೇಶಗಳ ನಡುವೆ ಸಾವಿರಾರುಉ ಕೋಟಿ ಮೌಲ್ಯದ ವ್ಯಾಪಾರ ವ್ಯವಹಾರ ಮತ್ತು ದ್ವೈಪಕ್ಷೀಯ ಸಂಬಂಧದ ಕುರಿತಂತೆ ಮಾತುಕತೆ ನಡೆಯಬೇಕಿತ್ತು ಎಂದು ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ