ಹೈದರಾಬಾದ್ :
ತೆಲುಗು ಚಿತ್ರರಂಗದ ಮೇರು ನಟರಾದ ಚಿರಂಜೀವಿ ಮತ್ತು ನಟ ರಾಜಶೇಖರ್ ನಡುವಿನ ಮನಸ್ತಾಪ ಚಿತ್ರರಂಗಕ್ಕೆ ಹೊಸತೇನಲ್ಲ.ಸದ್ಯಕ್ಕೆ ಇಬ್ಬರ ನಡುವಿನ ಮನಸ್ತಾಪ ಆಗಾಗ ಟಾಲಿವುಡ್ ನಲ್ಲಿ ಪುಟಿದೇಳುತ್ತಲೇ ಇರುತ್ತದೆ.ಆದರೆ ಎಂಧಿಗೂ ಒಂದೇ ವೇದಿಕೆಯಲ್ಲಿ ಸಂಧಿಸದ ಇಬ್ಬರು ಮಾ ಡೈರಿ ವೇದಿಕೆಯಲ್ಲಿ ಚಿರಂಜೀವಿ ಮತ್ತು ರಾಜಶೇಖರ್ ಮಧ್ಯೆ ವಾಗ್ವಾದ ನಡೆದಿದೆ.
ಮೂವಿ ಆರ್ಟಿಸ್ಟ್ ಅಸೋಸಿಯೇಷನ್ (ಮಾ) ನೇತೃತ್ವದಲ್ಲಿ ನಡೆದ ‘ಮಾ’ ಡೈರಿ ಬಿಡುಗಡೆ ಕಾರ್ಯಕ್ರಮದಲ್ಲಿ ಚಿರಂಜೀವಿ ಎದುರಿಗೆ ತೆಲುಗು ಚಿತ್ರರಂಗದ ಬಗ್ಗೆ ನಟ ರಾಜಶೇಖರ್ ತಮ್ಮಲ್ಲಿದ್ದ ಅಸಮಾಧಾನವನ್ನ ಹೊರಗೆ ಹಾಕಿದರು.








