ಬೆಂಗಳೂರು
ಬಿಹಾರದಿಂದ ರೈಲಿನಲ್ಲಿ ಗಾಂಜಾವನ್ನು ಟ್ರಾಲಿ ಬ್ಯಾಗ್‌ಗಳಲ್ಲಿ ಸಾಗಿಸಿಕೊಂಡು ಬಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಅಂತರ ರಾಜ್ಯ ಡ್ರಗ್ ಪೆಡ್ಲರ್ ನನ್ನು ಸಿಸಿಬಿ ಪೊಲೀಸರು ಬಂಧಿಸಿ 10 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.ಬಿಹಾರದ ಮದುಬಾನಿ ಜಿಲ್ಲೆಯ ಸತೀಶ್ ಕುಮಾರ್ (26) ಬಂಧಿತ ಆರೋಪಿಯಾಗಿದ್ದಾನೆ. ಬಂಧಿತನಿಂದ 5 ಲಕ್ಷ ಮೌಲ್ಯದ 10 ಕೆ.ಜಿ. ಗಾಂಜಾ, ಮೊಬೈಲ್ ವಶಪಡಿಸಿಕೊಳ್ಳಲಾಗಿದೆ
ಮಾರತ್ ಹಳ್ಳಿಯ ಪಾಪಯ್ಯಲೇಔಟ್ ನಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ ಆರೋಪಿಯು ತಲೆ ಮರೆಸಿಕೊಂಡಿರುವ ಸಂಜಯ್ ಕುಮಾರ್ ಸಿಂಗ್ ಎಂಬಾತನ ಜೊತೆ ಸೇರಿಕೊಂಡು ಬಿಹಾರದಿಂದ ಗಾಂಜಾವನ್ನು ಲಗೇಜ್ ಟ್ರಾಲಿ ಬ್ಯಾಗ್‌ನಲ್ಲಿ ತುಂಬಿಕೊಂಡು ವಾಸನೆ ಬರದಂತೆ ಸುಗಂಧ ದ್ರವ್ಯಗಳನ್ನು ಸಿಂಪಡಿಸಿಕೊಂಡು ರೈಲಿನಲ್ಲಿ ನಗರಕ್ಕೆ ಸಾಗಿಸಿಕೊಂಡು ಬರುತ್ತಿದ್ದರು.
ತಪಾಸಣೆ ಹೆಚ್ಚಿಲ್ಲದ ರೈಲ್ವೆ ನಿಲ್ದಾಣಗಳಲ್ಲಿ ಇಳಿದು ಅಲ್ಲಿಂದ ಕೆಆರ್‌ಪುರಂಗೆ ಬಂದು ಸುತ್ತಮುತ್ತಲ ಪ್ರದೇಶಗಳಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದರು. ತಲೆಮರೆಸಿಕೊಂಡಿರುವ ಆರೋಪಿಯ ಸಹಚರ ಸಂಜಯ್ ಕುಮಾರ್ ಸಿಂಗ್ ಗಾಗಿ ಶೋಧ ನಡೆಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








