ಆಹಾರ ಪದಾರ್ಥಗಳ ನಿರ್ವಹಣೆ ಲೋಪಕ್ಕೆ ಗರಂ

ಚಿತ್ರದುರ್ಗ

     ನಿನ್ನೆಯಿಂದ ಚಿತ್ರದುರ್ಗ ನಗರದಲ್ಲಿ ಪ್ರಾರಂಭವಾಧ ಸಂಸದ ಎ,ನಾರಾಯಣಸ್ವಾಮಿಯವರ ಹಾಸ್ಟಲ್‍ಗಳ ಬೇಟಿ ಮತ್ತು ಪರಿಶೀಲನಾ ಕಾರ್ಯ ಭಾನುವಾರವಾದ ಇಂದು ಸಹಾ ಮುಂದುವರೆದಿತ್ತು.

    ನಗರದ ಗಾಂಧಿನಗರ, ಬಿವಿಕೆ ಬಡಾವಣೆ ಮತ್ತು ದವಳಗಿರಿ ಬಡಾವಣೆಯಲ್ಲಿನ ಹಾಸ್ಟಲ್‍ಗಳಿಗೆ ಇಂದು ಬೆಳಿಗ್ಗೆಯಿಂದಲೇ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ ಸಂಸದರು. ಇಲ್ಲಿ ಕೆಲವು ನ್ಯೂನತೆಗಳು ಕಂಡು ಬಂದಿದೆ ಸರಿಯಾದ ರೀತಿಯಲ್ಲಿ ದಾಖಲೆಗಳನ್ನು ಇಟ್ಟಿಲ್ಲ ಆಹಾರ ಧಾನ್ಯ ಬಂದಿದ್ದು ಖರ್ಚಾಗಿದ್ದು ಸಹಾ ನಮೂದಿಸಿಲ್ಲ ಅಲ್ಲದೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಸ್ಟಲ್‍ಗೆ ಭೇಟ ನೀಡಿದ ಮಾಹಿತಿಯನ್ನು ಸಹಾ ಸರಿಯಾದ ರೀತಿಯಲ್ಲಿ ಇಟ್ಟಿಲ್ಲ ಎಂದು ಸಂಬಂಧಪಟ್ಟವರನ್ನು ತರಾಟೆಗೆ ತೆಗೆದುಕೊಂಡು ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಇಡುವುದನ್ನು ಕಲಿಯಿರಿ ಎಂದು ನಿರ್ದೆಶಿಸಿದರು.

     ವಿದ್ಯಾರ್ಥಿಗಳಿಗೆ ಅಗತ್ಯವಾಗಿ ಗ್ರಂಥಾಲಯ ಬೇಕಿದೆ ಇದಕ್ಕೆ ಹೊಂದಿಕೊಂಡಂತೆ ಇ-ಗ್ರಂಥಾಲಯವು ಮತ್ತು ಜಿಮ್ ಸಹಾ ಅಗತ್ಯ ಇದೆ ಇದನ್ನು 2-3 ಹಾಸ್ಟಲ್‍ಗಳು ಒಂದೇ ಕಡೆ ಇರುವ ಕಡೆಯಲ್ಲಿ ನಿರ್ಮಾಣ ಮಾಡಿದರೆ ಎಲ್ಲರಿಗೂ ಸಹಾ ಅನುಕೂಲವಾಗಲಿದೆ ಹಾಸ್ಟಲ್‍ಗೆ ಒಂದರಂತೆ ನೀಡಲು ಸಾಧ್ಯವಿಲ್ಲ ಇದರ ಬದಲಾಗಿ ಈ ರೀತಿಯಾದ ಕ್ರಮವನ್ನು ಕೈಗ್ಗೊಳ್ಳಿ ಅಲ್ಲದೆ ಜಿಮ್ ನಿರ್ಮಾಣ ಮಾಡುವ ಮೊದಲು ಅದರ ನೀಲಿ ನಕಾಶೆಯನ್ನು ತೋರಿಸಿ ನಂತರ ಕಾಮಗಾರಯನ್ನು ಪ್ರಾರಂಭ ಮಾಡಬೇಕೆಂದು ಅಧಿಕಾರಿಗಳಿಗೆ ಸಂಸದ ನಾರಾಯಣಸ್ವಾಮಿ ಸೂಚಿಸಿದರು.

     ಇಂದು ಭೇಟಿ ಮಾಡಿದ ಕೆಲವು ಹಾಸ್ಟಲ್‍ಗಳು ಸೊರುತಿದೆ ಕಟ್ಟಡವನ್ನು ನಿರ್ಮಾಣ ಮಾಡಿ ಇನ್ನೂ ಕಡಿಮೆ ಅವಧಿ ಆಗಿದ್ದರು ಸಹಾ ಕಟ್ಟಡ ಸೊರುತ್ತಿದೆ ಇದರ ಬಗ್ಗೆ ತನಿಖೆಯಾಗಬೇಕು ಅಲ್ಲದೆ ಯಾಕೆ ಸೊರುತ್ತಿದೆ ಕಾಮಗಾರಿಯ ಗುಣಮಟ್ಟದ ಬಗ್ಗೆ ತನಿಖೆಯ ಬಗ್ಗ ಪರಿಶೀಲನೆ ಮಾಡಿ ವರದಿಯನ್ನು ನೀಡುವಂತೆ ಹಾಗೇಯೇ ಕೆಲವು ಹಾಸ್ಟಲ್‍ಗಳಲ್ಲಿರುವ ಜನರೇಟ್ ಸಹಾ ಕಾರ್ಯ ಮಾಡುತ್ತಿಲ್ಲ ಇದರ ಬಗ್ಗೆಯೂ ಸಹಾ ದಾಖಲಾತಿಯನ್ನು ಪರಿಶೀಲಿಸುವಂತೆ ತಿಳಿಸಿ ಇನ್ನು ಗ್ಯಾರಿಂಟಿ ಸಮಯ ಇದ್ದರೆ ಅದನ್ನು ಸರಿಪಡಿಸುವ ಕಾರ್ಯವನ್ನು ಮಾಡಬೇಕು ಇದಕ್ಕೂ ಮೊದಲು ಅದರ ಗುಣಮಟ್ಟವನ್ನು ಪರೀಕ್ಷೆ ಮಾಡಬೇಕಿದೆ ಎಂದು ಅಧಿಕಾರಿಗೆ ನಿರ್ದೆಶನ ನೀಡಿದರು.

     ಹಾಸ್ಟಲ್‍ಗಳಿಗೆ ಬರುವ ವಿವಿಧ ಮಟ್ಟದ ಅಧಿಕಾರಿಗಳ ಭೇಟಿ ಮತ್ತು ಆಹಾರ ದಾಸ್ತಾನುಗಳ ಬಗ್ಗೆ ಪೂರ್ಣ ಪ್ರಮಾಣದ ಮಾಹಿತಿ ಸದಾ ಇರಬೇಕಿದೆ ನಾವು ಕೇಳಿದಾಗ ಮಾಡುವುದಲ್ಲ ಇದಲ್ಲದೆ ಅಧಿಕಾರಿಗಳು ಸಹಾ ಕಾಲಕಾಲಕ್ಕೆ ಭೇಟಿ ನೀಡುವುದರ ಮೂಲಕ ಪರೀಶೀಲನೆ ಮಾಡಬೇಕಿದೆ ಜ.8 ರಂದು ಇದರ ಬಗ್ಗೆ ಪೂರ್ಣ ಪ್ರಮಾಣದಲ್ಲಿ ಚರ್ಚೆ ಮಾಡಲಾಗುವುದು ಅಷ್ಟರೊಳಗೆ ವರದಿಯನ್ನು ತಯಾರು ಮಾಡುವಂತೆ ತಿಳಿಸಿ ಹಾಸ್ಟಲ್‍ಗಳಲ್ಲಿ ಸರಿಯಾದ ರೀತಿಯಲ್ಲಿ ದಾಖಲಾತಿಗಳನ್ನು ಸಹಾ ಇಟ್ಟಿಲ್ಲ, ಶೌಚಾಲಯಗಳನ್ನು ಸರಿಯಾದ ಸ್ಥಿತಿಯಲ್ಲಿ ಇಡಬೇಕಿದೆ ಎಂದು ಸಂಸದ ನಾರಾಯಣಸ್ವಾಮಿ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ಭಾಜಪ ಅಧ್ಯಕ್ಷ ಕೆ.ಎಸ್.ನವೀನ್, ಜಿ.ಪಂ.ಸದಸ್ಯ ಗುರುಮೂರ್ತಿ, ಪದಾzಧಿಕಾರಿಗಳು ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ನಾಗರಾಜ್, ಪರಮಶ್ವರಪ್ಪ ಸೇರಿದಂತೆ ಹಾಸ್ಟಲ್ ವಾರ್ಡನ್‍ಗಳಿ ಇತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link