ಹುಳಿಯಾರು:
ಹುಳಿಯಾರಿನಲ್ಲಿ ಕಳೆದ ಒಂದು ತಿಂಗಳಿಂದ ಸ್ಥಗಿತಗೊಂಡಿದ್ದ ಹೈವೆ ರಸ್ತೆಯ ಕಾಮಗಾರಿಯು ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಅವರ ಪ್ರತಿಭಟನೆಯ ಫಲವಾಗಿ ಮತ್ತೆ ಆರಂಭವಾಗಿದೆ.ವಿಶಾಕಪಟ್ಟಣಂ ನಿಂದ ಮಂಗಳೂರಿನವರೆವಿಗೆ 234 ನ್ಯಾಷನಲ್ ರಸ್ತೆಯ ಶಿರಾದಿಂದ ಹುಳಿಯಾರು ಭಾಗದ ರಸ್ತೆ ಕಾಮಗಾರಿಯು 2 ವರ್ಷಗಳಿಂದ ನಡೆಯುತ್ತಿದ್ದು ಹುಳಿಯಾರು ಪಟ್ಟಣದ ಕಾಮಗಾರಿಯು ಕಳೆದ 6 ತಿಂಗಳಿಂದ ನಡೆಯುತ್ತಿತ್ತಲ್ಲದೆ ಒಂದು ತಿಂಗಳಿಂದ ಕಾಮಗರಿಯೇ ಸ್ಥಗಿತಗೊಂಡಿತ್ತು.
ಪರಿಣಾಮ ಅರ್ಧಕ್ಕೆ ನಿಂತ ರಸ್ತೆಯಿಂದ ಧೂಳು ಎದ್ದು ಹೈವೆ ಪಕ್ಕದ ನಿವಾಸಿಗಳಿಗೆ, ಪಾದಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ಭಾರಿ ತೊಂದರೆಯಾಗಿತ್ತು. ಅಲ್ಲದೆ ಚರಂಡಿ ಕಾಮಗಾರಿಯೂ ಸಹ ಅಪೂರ್ಣವಾಗಿ ಹೈವೆ Z್ಪರಂಡಿಯ ಕೊಳಚೆ ನೀರು ರಸ್ತೆಗೆ ಹರಿದು ಓಡಾಡುವವರಿಗೆ ಅಸಹ್ಯ ಹುಟ್ಟಿಸುತ್ತಿತ್ತು.
ಸಾರ್ವಜನಿಕರು ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಈ ಬಗ್ಗೆ ದೂರು ನೀಡಿದರೂ ಸ್ಪಂಧಿಸುತ್ತಿರಲಿಲ್ಲ, ಜನಪ್ರತಿನಿಧಿಗಳು ಇದೇ ರಸ್ತೆಯಲ್ಲಿ ಓಡಾಡುತ್ತಿದ್ದರೂ ಜಾಣ ಕುರುಡು ಪ್ರದರ್ಶಿಸುತ್ತಿದ್ದರು. ಹಾಗಾಗಿ ಇಲ್ಲಿನ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಅವರಿಗೆ ಪ್ರತಿಭಟನೆ ಹಮ್ಮಿಕೊಳ್ಳುವಂತೆ ಸಾರ್ವಜನಿಕರು ಒತ್ತಡ ಏರುತ್ತಿದರು.
ಹಾಗಾಗಿ ಕಳೆದ ಎರಡು ದಿನಗಳ ಇಂದಷ್ಟೆ ಮಾಜಿ ಶಾಸಕರು ಪ್ರತಿಭಟನೆಗೆ ಧುಮುಕಿದರಲ್ಲದೆ ಬರೋಬ್ಬರಿ 1 ಗಂಟೆಗಳ ಕಾಲ ಹೆದ್ದಾರಿ ತಡೆದರು. ಅಲ್ಲದೆ ಹೈವೆ ಎಂಜಿನಿಯರ್ ಹಾಗೂ ಗುತ್ತಿಗೆದಾರರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಪರಿಣಾಮ 5 ದಿನಗಳಲ್ಲಿ ಕಾಮಗಾರಿ ಆರಂಭಿಸುವುದಾಗಿ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಭರವಸೆ ನೀಡಿ ಹೋಗಿದ್ದರು.
ಅದರಂತೆ ಈಗ ಪುನಃ ಕಾಮಗಾರಿ ಆರಂಭ ಮಾಡಿದ್ದು ಒಂದೇ ದಿನನಲ್ಲಿ ಧೂಳು ಏಳುತ್ತಿದ್ದ ರಸ್ತೆಗೆ ಡಾಂಬರ್ ಹಾಕುವ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಮಾಡಿದ್ದಾರೆ. ಅಲ್ಲದೆ ಅಪೂರ್ಣಗೊಂಡಿರುವ ಚರಂಡಿ ಕಾಮಗಾರಿಯನ್ನೂ ಸಹ ತಕ್ಷಣ ಒತ್ತುವರಿ ತೆರವು ಮಾಡಿ ಆರಂಭಿಸುವುದಾಗಿಯೂ ಅಲ್ಲಿಯವರೆವಿಗೂ ಚರಂಡಿ ನೀರು ರಸ್ತೆ ಹರಿಯದಂತೆ ಎಚ್ಚರ ವಹಿಸುವುದಾಗಿ ಭರವಸೆ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ