ಬೆಳಗಾವಿ :
ಸಾವನ್ನಪ್ಪಿದ ಮಹಿಳೆಯ ಅಂತ್ಯ ಸಂಸ್ಕಾರದ ಸಂದರ್ಭದಲ್ಲಿ ಮೃತ ಮಹಿಳೆ ಕಣ್ಣುಬಿಟ್ಟು ಎದ್ದು ಕುಳಿತ ಅಚ್ಚರಿಯ ಘಟನೆ ಬೆಳಗಾವಿ ತಾಲೂಕಿನ ಮುಚ್ಚಂಡಿ ಗ್ರಾಮದಲ್ಲಿ ನಡೆದಿದೆ.
ಮಾಲು ಯಲ್ಲಪ್ಪ ಚೌಗುಲೆ (55) ಎಂಬ ಮಹಿಳೆ ಹಲವು ತಿಂಗಳಿಂದ ಮೆದುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಜನವರಿ 7 ರಂದು ಆರೋಗ್ಯದಲ್ಲಿ ಏರುಪೇರಾದ ಕಾರಣ ಕುಟುಂಬಸ್ಥರು ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆಸ್ಪತ್ರೆಯಲ್ಲಿ ಮಹಿಳೆಗೆ ವೆಂಟಿಲೇಟರ್ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಮಹಿಳೆ ಬದುಕುವುದು ಕಷ್ಟವೆಂದು ವೈದ್ಯರು ಹೇಳಿದ್ದರು. ಆದ್ದರಿಂದ ಆಯಂಬುಲೆನ್ಸ್ ನಲ್ಲಿ ಕುಟುಂಬಸ್ಥರು ಮಹಿಳೆಯನ್ನು ಮನೆಗೆ ಕರೆದೊಯ್ದಿದ್ದರು.
ಆದರೆ ಆಯಂಬುಲೆನ್ಸ್ ನಲ್ಲಿ ಮಾಲು ಯಾವುದೇ ಚಲನವಲನ ಮಾಡುತ್ತಿರಲಿಲ್ಲ. ಇದನ್ನು ಕಂಡು ಅವರು ಮೃತಪಟ್ಟಿದ್ದಾರೆ ಎಂದು ಭಾವಿಸಿದ ಕುಟುಂಬಸ್ಥರು ಬುಧವಾರ ರಾತ್ರಿ ಮುಚ್ಚಂಡಿ ಗ್ರಾಮದಲ್ಲಿ ಆಕೆಯ ಅಂತ್ಯಕ್ರಿಯೆಗೆ ತವರು ಮನೆಯ ಸೀರೆ, ಹೂವಿನ ಮಾಲೆಗಳನ್ನು ತಂದಿದ್ದ ಸಂಬಂಧಿಕರು ಅಂತ್ಯಕ್ರಿಯೆಯ ಸಿದ್ಧತೆ ಮಾಡಿಕೊಂಡಿದ್ದರು.
ಈ ವೇಳೆ ಇದ್ದಕ್ಕಿದ್ದಂತೆ ಕಣ್ಣು ಬಿಟ್ಟ ಲಾಲು ಯಲ್ಲಪ್ಪ ಚೌಗುಲೆಯನ್ನು ನೋಡಿ ಸಂಬಂಧಿಕರು ಮತ್ತು ಊರಿನವರು ಗಾಬರಿಯಾಗಿದ್ದಾರೆ. ಅಲ್ಲದೇ ಅಚ್ಚರಿಗೊಳಗಾಗಿರೋ ಕುಟುಂಬಸ್ಥರು ಇದು ಯಲ್ಲಮ್ಮ ದೇವಿ ಪವಾಡ ಅಂತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ