ಸಂಗೊಳ್ಳಿ ರಾಯಣ್ಣ ರೆಲ್ವೆ ನಿಲ್ದಾಣಕ್ಕೆ ನೀಡಿದ್ದ ಭದ್ರತೆ ಹೆಚ್ಚಳ..!

ಬೆಂಗಳೂರು

   ಕಳ್ಳರು ಸುಲಿಗೆಕೋರರು ಇನ್ನಿತರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವವರನ್ನು ಪತ್ತೆಮಾಡಲು ಸಹಕಾರಿಯಾಗಿರುವ ಮುಖ ಚರ್ಯೆ ಗುರುತು ಪತ್ತೆ(ಫೇಸ್ ರೆಕಗ್ನಿಷನ್ ಸಿಸ್ಟಂ)ವ್ಯವಸ್ಥೆಯನ್ನು ನಗರದ ಸಂಗೊಳ್ಳಿ ರಾಯಣ್ಣ ಸಿಟಿ ರೈಲ್ವೆ ನಿಲ್ದಾಣದಲ್ಲಿ ಅಳವಡಿಸಲಾಗಿದೆ

   ನಗರದ ಸಿಟಿ ರೈಲು ನಿಲ್ದಾಣವಲ್ಲದೇ ಮಹಾರಾಷ್ಟ್ರದ ಮನ್ಮಾಡ್ ಹಾಗೂ ಭುಸಾವಲ್ ರೈಲು ನಿಲ್ದಾಣಗಳಲ್ಲಿ ಫೇಸ್ ರೆಕಗ್ನಿಷನ್ ತಂತ್ರಜ್ಞಾನವನ್ನು ಅಳವಡಿಸಲಾಗುತ್ತದೆ.ಈಗಾಗಲೇ ಈ ವ್ಯವಸ್ಥೆಯನ್ನು ಕಂಟೋನ್ಮೆಂಟ್ ಬಂಗಾರಪೇಟೆ, ಬೆಳಗಾವಿ, ಹಾಸನ, ಶಿವಮೊಗ್ಗ, ವಾಸ್ಕೋ, ಸತ್ಯಸಾಯಿ ಪ್ರಶಾಂತಿ ನಿಲಯಂ ನಿಲ್ದಾಣಗಳಲ್ಲಿ ಅಳವಡಿಸಲಾಗಿದೆ. ದೇಶದ 200 ರೈಲು ನಿಲ್ದಾಣಗಳಲ್ಲಿ ಇದರ ಅಳವಡಿಕೆಯ ಗುರಿ ಹೊಂದಲಾಗಿದೆ.

ಸರ್ವೇಕ್ಷಣಾ ವ್ಯವಸ್ಥೆ

   ನಿರ್ಭಯಾ ನಿಧಿ ಅಡಿಯಲ್ಲಿ ರೈಲ್ವೆಗೆ 250 ಕೋಟಿ ರೂ ದೊರೆತಿದ್ದು, ಹಲವು ರೈಲ್ವೆ ನಿಲ್ದಾಣಗಳಲ್ಲಿ ವಿಡಿಯೋ ಸರ್ವೇಕ್ಷಣಾ ವ್ಯವಸ್ಥೆ ಅಳವಡಿಸಲಾಗಿದೆ.ಆಧುನಿಕ ಕ್ಯಾಮರಾಗಳನ್ನು ನಿಲ್ದಾಣಗಳಲ್ಲಿ ಅಳವಡಿಸಿ ಅವುಗಳನ್ನು ಆರ್‌ಪಿಎಫ್‌ನ ಕಂಟ್ರೋಲ್ ರೂಂಗೆ ಸಂಯೋಜಿಸಲಾಗುತ್ತದೆ. ಈ ಮೂಲಕ ಪ್ರಯಾಣಿಕರ ಚಲನವಲನಗಳನ್ನು ಸುಲಭವಾಗಿ ಪತ್ತೆ ಮಾಡಬಹುದಾಗಿದೆ.

    ಅಪರಾಧ ಹಾಗೂ ಅಪರಾಧಿಗಳ ಪತ್ತೆ ಜಾಲ ತಂತ್ರಜ್ಞಾನದಲ್ಲಿ ಶಂಕಿತರ ಮುಖಚಹರೆಗಳು ಲಭ್ಯವಿದೆ. ಈ ತಂತ್ರಜ್ಞಾನದ ಜೊತೆ ಫೇಸ್ ರೆಕಗ್ನಿಷನ್ ಸಿಸ್ಟಂ ಅನ್ನು ಸಂಯೋಜಿಸುವುದು ರೈಲ್ವೆಯಲ್ಲಿನ ಭದ್ರತೆ ನೋಡಿಕೊಳ್ಳುವ ರೈಲ್ವೆ ರಕ್ಷಣಾ ದಳದ ಉದ್ದೇಶವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link