ದಾವಣಗೆರೆ :
ವೃದ್ದ ದಂಪತಿಗಳು ಆಟೋದಲ್ಲಿ ಬ್ಯಾಗ್ ಬಿಟ್ಟು 39 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ದಾವಣಗೆರೆ ನಗರದ ಕೆಆರ್ ಮಾರ್ಕೆಟ್ ಬಳಿಯ ವೈಶ್ಯಾ ಬ್ಯಾಂಕ್ ಬಳಿ ಗುರುವಾರ ನಡೆದಿದೆ.
ಮಾಣಿಕ್ಯಾ ವಾಸಗರ್(70) ತಿಲಕವತಿ(65) ಹಣ ಕಳೆದುಕೊಂಡ ದಂಪತಿಗಳು.
ದಾವಣಗೆರೆ ನಗರದ ಬೇತೂರು ರಸ್ತೆಯ ಮನೆಯಿಂದ ಕೆಆರ್ ಮಾರ್ಕೆಟ್ ಬ್ಯಾಂಕಿಗೆ ಆಟೋದಲ್ಲಿ ಬಂದಿದ್ದ ಸಂದರ್ಭ ಈ ಘಟನೆ ನಡೆದಿದ್ದು, ತಮ್ಮ ಜಮೀನು ಮಾರಾಟ ಮಾಡಿದ ಹಣವನ್ನು ಬ್ಯಾಂಕ್ ನಲ್ಲಿಡಲು ಬಂದಿದ್ದ ದಂಪತಿ ಬ್ಯಾಂಕ್ ನ ಬಳಿ ಇಳಿಯುವಾಗ ಹಣವಿದ್ದ ಬ್ಯಾಗ್ ನ್ನು ಆಟೋದಲ್ಲಿಯೇ ಬಿಟ್ಟು ಬ್ಯಾಂಕಿನ ಒಳಗೆ ಹೋಗಿದ್ದಾರೆ. ನಂತರ ಹಣವನ್ನು ನೆನಪಿಸಿಕೊಂಡು ವಾಪಾಸ್ ಬಂದು ನೋಡುವಷ್ಟರಲ್ಲಿ ಆಟೋ ನಾಪತ್ತೆಯಾಗಿದೆ.
ಹಣವನ್ನು ಕಳೆದುಕೊಂಡ ಮಾಣಿಕ್ಯ ವಾಸಗರ್ ಬಸವನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಷ್ಟು ಹಣವನ್ನು ಕಳೆದುಕೊಂಡ ಈ ದಂಪತಿ, ಆಟೋ ಚಾಲಕ ತಮ್ಮ ಬ್ಯಾಗನ್ನು ಮರಳಿ ನೀಡಿದರೆ ಸೂಕ್ತ ಬಹುಮಾನ ನೀಡುತ್ತೇವೆ ಎಂದು ಮನವಿ ಮಾಡಿಕೊಂಡಿದ್ದಾರೆ.
ದಾವಣಗೆರೆ ನಗರದ ಬಸವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
