ಹಾಸನ :
ಟ್ರಾಕ್ಟರ್ ಮಾಲೀಕ ಸಾಲ ನೀಡಲಿಲ್ಲ ಎಂಬ ಕಾರಣಕ್ಕೆ ಚಾಲಕನೇ ಮಾಲೀಕನನ್ನು ಕೊಂದು ಹಾಕಿದ ಘಟನೆ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಜಾವಗಲ್ ಬಳಿ ನಡೆದಿದೆ.
ವಡ್ಡರಹಟ್ಟಿಯ ನಾಗೇಶ್ ಸಿದ್ಧಾಬೋವಿ(47) ಕೊಲೆಯಾದ ಮಾಲೀಕ . ಟ್ರ್ಯಾಕ್ಟರ್ ಚಾಲಕ ರಂಗಸ್ವಾಮಿ ಮಾಲೀಕರಾದ ನಾಗೇಶ್ ಬಳಿ 2 ಸಾವಿರ ರೂ. ಸಾಲ ಕೇಳಿದ್ದನು. ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳ ಆರಂಭವಾಗಿದೆ. ಮೊದಲು ಮೃತ ನಾಗೇಶ್, ರಂಗಸ್ವಾಮಿ ಮೇಲೆ ಕೈ ಮಾಡಿದ್ದಾನೆ. ಇದರಿಂದ ಕೆರಳಿದ ಆರೋಪಿ ರಂಗಸ್ವಾಮಿ ಚೂಪಾದ ಹಾರೆಯಿಂದ ಚುಚ್ಚುತ್ತಿದ್ದಂತೆ ನಾಗೇಶ್ ಸ್ಥಳದಲ್ಲೇ ಕುಸಿದು ಬಿದ್ದಿದ್ದು, ತೀವ್ರ ರಕ್ತಸ್ರಾವದಿಂದ ಪ್ರಾಣ ಬಿಟ್ಟಿದ್ದಾನೆ.
ಸದ್ಯ ಆರೋಪಿ ರಂಗಸ್ವಾಮಿಯನ್ನು ಪೊಲೀಸರು ಬಂಧಿಸಲಾಗಿದ್ದು, ಅರಸೀಕೆರೆ ತಾಲೂಕು ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ