ಕ್ಯುರೇಟಿವ್ ಅರ್ಜಿ ವಜಾ : ನಿರ್ಭಯಾ ‘ಹತ್ಯಾ’ಚಾರಿಗಳ ಗಲ್ಲು ಫಿಕ್ಸ್..!

ನವದೆಹಲಿ: 

     ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದ ನಿರ್ಭಯಾ ಅತ್ಯಾಚಾರ, ಕೊಲೆ ಪ್ರಕರಣದ ದೋಷಿಗಳಾದ ವಿನಯ್ ಕುಮಾರ್ ಶರ್ಮಾ ಮತ್ತು ಮುಖೇಶ್ ಮರಣ ದಂಡನೆ ಶಿಕ್ಷೆ ವಿರುದ್ಧ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದ್ದು, ಹತ್ಯಾ’ಚಾರಿಗಳಿಗೆ ಗಲ್ಲು ಫಿಕ್ಸ್ ಆಗಿದೆ.

      ನಿರ್ಭಯಾ ಪ್ರಕರಣದಲ್ಲಿ ಕೊನೆಯ ಕಾನೂನು ಅವಕಾಶ ಬಳಸಿಕೊಂಡು ಗಲ್ಲುಶಿಕ್ಷೆ ಪ್ರಶ್ನಿಸಿ ವಿನಯ್ ಕುಮಾರ್ ಮತ್ತು ಮುಖೇಶ್ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂಕೋರ್ಟ್ ನ ಜಸ್ಟೀಸ್ ಎನ್.ವಿ.ರಮಣ್ ನೇತೃತ್ವದ ಪಂಚಸದಸ್ಯ ಪೀಠ ಇಂದು ಸಾರಾಸಗಾಟಾಗಿ ತಳ್ಳಿ ಹಾಕಿ ದೆಹಲಿಯ ಪಟಿಯಾಲ ಕೋರ್ಟ್ ನೀಡಿದ್ದ ಆದೇಶವನ್ನು ಎತ್ತಿ ಹಿಡಿಯಿತು.

      ಇದರಿಂದಾಗಿ ಮುಖೇಶ್, ವಿನಯ್, ಅಕ್ಷಯ್ ಮತ್ತು ಪವನ್ ಈ ನಾಲ್ವರು ಆಪಾದಿತರಿಗೆ ದೆಹಲಿಯ ತಿಹಾರ್ ಜೈಲಿನಲ್ಲಿ 22ರಂದು ಬೆಳಗ್ಗೆ 7 ಗಂಟೆಗೆ ಗಲ್ಲಿಗೇರಿಸಲಾಗುತ್ತದೆ.

     ಅತ್ಯಾಚಾರಿ ಹಂತಕರನ್ನು ನೇಣುಗಂಬಕ್ಕೇರಿಸಲು ಅಗತ್ಯವಾದ ಎಲ್ಲ ಪೂರ್ವ ತಯಾರಿಗಳು ನಡೆಯುತ್ತಿದೆ. ಈಗಾಗಲೇ ಮೀರತ್‍ನಿಂದ ಬಂದಿರುವ ಹ್ಯಾಂಗ್ ಮ್ಯಾನ್ ವಧಾಸ್ಥಳದಲ್ಲಿ ಹಂತಕರನ್ನು ನೇಣಿಗೇರಿಸಲು ಪೂರ್ವಭಾವಿ ಸಿದ್ದತೆ ನಡೆಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link