ಎಸ್‌ಸಿಒ ಶೃಂಗ ಸಭೆಗೆ ಭಾರತದಿಂಧ ಪಾಕ್ ಆಹ್ವಾನ..!

ನವದೆಹಲಿ:

     ದೆಹಲಿಯಲ್ಲಿ ನಡೆಯುವ ಎಸ್‌ಸಿಒ ದ ಶೃಂಗ ಸಭೆಗೆ ಭಾರತ, ಪಾಕಿಸ್ತಾನಕ್ಕೆ ಆಹ್ವಾನ ನೀಡಲಿದ್ದು, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ತಮ್ಮ ಸಂಪುಟದ ಸಚಿವರೊಬ್ಬರನ್ನು ಪ್ರತಿನಿಧಿಯಾಗಿ ಕಳುಹಿಸುವ ಸಾಧ್ಯತೆ ಇದೆ.

      ಎಸ್​ಸಿಒ ಶೃಂಗ ಸಭೆಯ ಆತಿಥ್ಯವಹಿಸಿರುವ ಭಾರತ, ಎಲ್ಲ ಎಂಟು ಸದಸ್ಯ ದೇಶಗಳಿಗೆ ಮತ್ತು ನಾಲ್ಕು ವೀಕ್ಷಕ ದೇಶಗಳಿಗೂ ಆಹ್ವಾನ ನೀಡಲಾಗುವುದು ಎಂದು ಗುರುವಾರ ಹೇಳಿದೆ. ಎಲ್ಲಗೂ ಆಹ್ವಾನ ನೀಡಲಾಗುವುದು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರು ತಿಳಿಸಿದ್ದಾರೆ.

    ಇನ್ನು ಇಸ್ಲಾಮಾಬಾದ್ ನ ಉನ್ನತ ಮೂಲಗಳ ಪ್ರಕಾರ,ಇಮ್ರಾನ್ ಅವರ ಬದಲಾಗಿ ಸಚಿವರೊಬ್ಬರು ಆಗಮಿಸುವ ನಿರೀಕ್ಷೆ ಇದೆ ಎನ್ನಲಾಗಿದೆ.ಚೀನಾ, ಕಜಕಿಸ್ತಾನ, ಕಿರ್ಗಿಸ್ತಾನ್, ರಷ್ಯಾ, ತಜಕಿಸ್ತಾನ್, ಉಜಕಿಸ್ತಾನ್, ಭಾರತ ಮತ್ತು ಪಾಕಿಸ್ತಾನ ಎಸ್​ಸಿಒನ ಎಂಟು ಸದಸ್ಯ ರಾಷ್ಟ್ರಗಳಾಗಿವೆ. ಅಘ್ಗಾನಿಸ್ತಾನ, ಇರಾನ್,  ಬೆಲಾರಸ್ ಮತ್ತು ಮಂಗೊಲಿಯಾ ನಾಲ್ಕು ವೀಕ್ಷಕ ರಾಷ್ಟ್ರಗಳಾಗಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link