ದೆಹಲಿ :
ಇಪಿಎಫ್ ಒ ಕಾರ್ಮಿಕರಿಗೆ ಶೀಘ್ರವೇ ಬಿಗ್ ಶಾಕ್ ಎದುರಾಗಲಿದ್ದು, ಇಪಿಎಫ್‌ಒ ಶೀಘ್ರದಲ್ಲೇ ಬಡ್ಡಿದರಗಳನ್ನು ಕಡಿತಗೊಳಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.
ಗುತ್ತಿಗೆ ಕಾರ್ಮಿಕರ ಭವಿಷ್ಯ ನಿಧಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಈ ಹಣಕಾಸು ವರ್ಷದಲ್ಲಿ ತನ್ನ ಚಂದಾದಾರರಿಗೆ ನೀಡುವ ಬಡ್ಡಿದರವನ್ನು 15-25 ಬೇಸಿಸ್ ಪಾಯಿಂಟ್‌ಗಳಿಂದ ಕಡಿಮೆ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ. ಆರ್ಥಿಕ ಹಿಂಜರಿತದ ಹಿನ್ನೆಲೆ, ಸರ್ಕಾರಿ ಭದ್ರತೆಗಳು ಸೇರಿದಂತೆ ಸ್ಥಿರ ಠೇವಣಿ ಮತ್ತು ಸಾರ್ವಜನಿಕ ಭವಿಷ್ಯ ನಿಧಿ ಮತ್ತು ಸರ್ಕಾರಿ ಭವಿಷ್ಯ ನಿಧಿಯಂತಹ ಉತ್ಪನ್ನಗಳ ಮೇಲಿನ ಕಡಿಮೆ ಬಡ್ಡಿದರಗಳ ವಿರುದ್ಧವೂ ಈ ನಿರ್ಧಾರವು ಬರುತ್ತದೆ ಎನ್ನಲಾಗಿದೆ.
2018-2019ರ ಅವಧಿಯಲ್ಲಿ ಪಿಎಫ್ ಖಾತೆದಾರರಿಗೆ ಶೇಕಡಾ 8.65 ಬಡ್ಡಿ ದರ ಸಿಕ್ತಿದೆ. ಆರ್ಥಿಕ ಮಂದಗತಿಯಿಂದಾಗಿ ಇಪಿಎಫ್ ಒ ಬಡ್ಡಿ ದರದಲ್ಲಿ ಇಳಿಕೆ ಮಾಡುವ ಬಗ್ಗೆ ಚಿಂತನೆ ನಡೆಸುತ್ತಿದೆ.
ಲಕ್ಷಾಂತರ ಕಾರ್ಮಿಕರು ತಮ್ಮ ಸಂಬಂಳದ ಒಂದು ಭಾಗವನ್ನು ಪಿಎಫ್ ರೂಪದಲ್ಲಿ ಜಮಾ ಮಾಡುತ್ತಾರೆ. ಕೆಲಸ ಬಿಟ್ಟ ಮೇಲೆ ಈ ಹಣವನ್ನು ಬಡ್ಡಿ ಸಮೇತ ಪಡೆಯುತ್ತಾರೆ. ಭವಿಷ್ಯಕ್ಕಾಗಿ ಠೇವಣಿಯಿಡುವ ಈ ಹಣಕ್ಕೆ ಹೆಚ್ಚಿನ ಬಡ್ಡಿ ಸಿಗುತ್ತಿತ್ತು. ಆದ್ರೆ ಲಕ್ಷಾಂತರ ಗ್ರಾಹಕರಿಗೆ ಇಪಿಎಫ್‌ಒ ಶಾಕ್ ನೀಡುವು ಸಾಧ್ಯತೆಯಿದೆ. ಮಾರ್ಚ್ 31ರೊಳಗೆ ಬಡ್ಡಿ ದರ ಇಳಿಕೆ ಮಾಡುವ ಸಾಧ್ಯತೆ ಹೆಚ್ಚಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ