ಹರಪನಹಳ್ಳಿ:
ಗಾಳಿ ಯಂತ್ರಗಳ ಗ್ರೀನ್ ವಿಪ್ರೋ ಕಂಪನಿ 2015-16 ನೇ ಸಾಲಿನಿಂದ ಸತತ ನಾಲ್ಕು ವರ್ಷಗಳ ಕಾಲ ತೆರಿಗೆ ಕಟ್ಟದೆ ವಂಚನೆ ಮಾಡಿದೆ ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಂಜಣ್ಣ ಆರೋಪಿಸಿದ್ದಾರೆ.
ಕೂಲಹಳ್ಳಿ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿಬರುವ ಗ್ರೀನ್ ವಿಪ್ರೋ ಕಂಪನಿಯ ಅನುಮತಿ ಪಡೆದಿರುವ 16 ಫ್ಯಾನ್‍ಗಳ ಹತ್ತಿರ ಟೆಂಟ್ ಹಾಕಿಕೊಂಡು ಗ್ರಾಮ ಪಂಚಾಯತಿಯ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಮತ್ತು ಸಾರ್ವಜನಿಕರು ಬುಧವಾರ ಪ್ರತಿಭಟನೆಯನ್ನು ಮಾಡಿದರು.
ಪಂಚಾಯಿತಿ ಉಪಾಧ್ಯಕ್ಷ ಮಂಜಣ್ಣ ಮಾತನಾಡಿ ಗ್ರೀನ್ ವಿಪ್ರೋ ಕಂಪನಿ 2015 ಮತ್ತು 16 ನೇ ಸಾಲಿನಲ್ಲಿ 16 ಫ್ಯಾನ್ ಗಳನ್ನು ಅನುಮತಿ ಪಡೆದಿರುತ್ತಾರೆ ಆದರೆ ಆರಂಭದಲ್ಲಿ ಗ್ರಾಮ ಪಂಚಾಯಿತಿಗೆ 5 ಲಕ್ಷ ರೂಪಾಯಿಗಳನ್ನು ಮಾತ್ರ ತೆರಿಗೆ ಕಟ್ಟಿರುತ್ತಾರೆ. ಎರಡು ಫ್ಯಾನ್ ಗಳನ್ನು ಅನುಮತಿ ಇಲ್ಲದೆ ನಿರ್ಮಾಣ ಮಾಡುವುದಲ್ಲದೆ ತೆರಿಗೆ ಪಾವತಿಸದೆ ವಂಚನೆ ಮಾಡಿದ್ದಾರೆ ಎಂದರು.
ಎಚ್ .ರಾಜಪ್ಪ ಮಾತನಾಡಿ. ಗ್ರೀನ್ ವಿಪ್ರೋ ಕಂಪನಿಗೆ ಹಲವು ಬಾರಿ ನೋಟಿಸ್ ನೀಡಿದರೂ ಕೂಡ ಯಾವುದೇ ರೀತಿಯ ಉತ್ತರ ನೀಡಿಲ ಕಂಪನಿಯ ಕಾನೂನು ಸಲಹೆಗಾರರನ್ನು ವಿಚಾರಿಸಿದರೆ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳೋಣ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಗ್ರಾಮ ಪಂಚಾಯಿತಿಯ ಒಂದು ಎಕರೆಗೆ ಶೇಕಡಾ ಎರಡರಷ್ಟು ತೆರಿಗೆಯನ್ನು ಪಾವತಿಸಿ ಮತ್ತು ಒಂದು ಫ್ಯಾನಿಗೆ ವರ್ಷಕ್ಕೆ ಹತ್ತು ಸಾವಿರ ರೂಪಾಯಿಯಂತೆ ತೆರಿಗೆ ಪಾವತಿಸಿ ಎಂದು ಹೈಕೋರ್ಟ್ ಆದೇಶಿಸಿದ್ದರೂ ಕೂಡ ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿ ಪಂಚಾಯಿತಿಗೆ ತೆರಿಗೆ ಹಣವನ್ನು ಸಂದಾಯ ಮಾಡಿರುವುದಿಲ್ಲ. ಆದ್ದರಿಂದ ಕಂಪನಿ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಆಗ್ರಹಸಿದರು.
ಗ್ರೀನ್ ವಿಪ್ರೋ ಕಂಪನಿ 16 ಫ್ಯಾನುಗಳ ತೆರಿಗೆ ಮತ್ತು ಕಂದಾಯ ತೆರಿಗೆ ನಾಲ್ಕು ವರ್ಷಗಳಿಂದ ಸುಮಾರು 30 ಲಕ್ಷ ಬಾಕಿ ಉಳಿಸಿಕೊಂಡಿದೆ ಎಂದು ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಆನಂದ ನಾಯ್ಕ್ ಹೇಳಿದರು.ಪ್ರತಿಭಟನೆಯಲ್ಲಿ ಪಿ ವೆಂಕಟೇಶ್, ಮಂಜಣ್, ರಾಜಪ್ಪ . ಶಿವಕುಮಾರ್ ನಾಯ್ಕ್, ಗೂಳಪ್ಪ, ಗ್ರಾಮ ಪಂಚಾಯತಿಯ ಸದಸ್ಯರು ಸಾರ್ವಜನಿಕರು ಸಿಬ್ಬಂದಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ