ಕಾಂಪೌಂಡ್ ಸಮಸ್ಯೆ : ಸ.ನಂ 539ರಲ್ಲಿ ಸರ್ವೆ ಕಾರ್ಯ

ಹರಪನಹಳ್ಳಿ
    ಪಟ್ಟಣದ ಶ್ರೀ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ, ಕಾಳಮ್ಮ ದೇವಸ್ಥಾನ ಹಾಗೂ ಜೈನ ಬಸದಿ ವ್ಯಾಪ್ತಿಗೆ ಒಳಪಡುವ ಹಾಗೂ ಎಡಿಬಿ ಕಾಲೇಜ್ ಕಾಂಪೌಡ್ ನಿರ್ಮಿಸಲು ವಿನಾಕಾರಣ ತೊಂದರೆ ಕೊಡುತ್ತಿದ್ದಾರೆಂದು ಆದೇಶದ ಮೇರೆಗೆ ಸ.ನಂ.539 ಪೂರ್ಣ ಅಳತೆ ಮಾಡಿ ಅವರವರ ಅಸ್ತಿತ್ವದ ಹದ್ದು ಬಸ್ತಿಗೆ ಸರ್ವೆ ಮಾಡುವ ಉದ್ದೇಶದಿಂದ ಗುರುವಾರ ಸರ್ವೆ ಕಾರ್ಯ ನಡೆಯಿತ್ತು.

    ಬಹುದಿನಗಳಿಂದ ನೆನಗುದಿಯಲ್ಲಿದ್ದ ಅಸ್ತಿತ್ವದ ಹಕ್ಕು ಪಡೆಯಲು ದೇವಸ್ಥಾನಗಳ ಸಮಿತಿ ಹಾಗೂ ಸಾರ್ವಜನಿಕರಲ್ಲಿದ್ದ ಗೊಂದಲಗಳನ್ನು ನಿವಾರಿಸಲು ಸರ್ವೆ ಕಾರ್ಯಕ್ಕೆ ಎಲ್ಲಾ ಸಮುದಾಯದ ಭಕ್ತರು, ಕಾಲೇಜು ಆಡಳಿತ ಸಿಬ್ಬಂದಿ ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

    1951ರಲ್ಲಿ ಸ.ನಂ.539ರಲ್ಲಿ ಒಟ್ಟು 204.97 ಎಕರೆ ಜಮೀನಿದೆ. ಅದರಲ್ಲಿ ಆಂಜನೇಯಸ್ವಾಮಿಗೆ, ಕಾಳಮ್ಮ ಹಾಗೂ ಜೈನ ಬಸದಿಗೆ 15.41 ಎಕರೆ ಜಮೀನು ಮಂಜೂರು ಮಾಡಲಾಗಿದೆ. ಅದರಂತೆ ಕಟ್ಟಿ ಸೇತುರಾಮಚಾರ್ಯ ಅವರಿಗೆ 6.60, ಹೆಚ್.ಎಂ.ಚಂದ್ರಯ್ಯ ಅವರಿಗೆ 5.43 ಎಕರೆ ಹಾಗೂ ಹಸ್ತಿಮಲ್ ಜೈನ್ ಅವರಿಗೆ 2.12 ಎಕರೆ ಜಮೀನನ್ನು ನೀಡಲಾಗಿದೆ. ದಿ.ಹಸ್ತಿಮಲ್ ಜೈನ್ ಅವರು ಎಡಿಬಿ ಕಾಲೇಜಿಗೆ ತಮ್ಮ ಜಮೀನನ್ನು ದಾನವಾಗಿ ನೀಡಿದ್ದಾರೆ.

     ಇಂದು ನಡೆದ ಜಿಪಿಎಫ್ ತಂತ್ರಜ್ಞಾನದ ಸರ್ವೆ ಕಾರ್ಯದಲ್ಲಿ ಸ.ನಂ.539 ರ ಗಡಿ ರೇಖೆಯನ್ನು ಗುರುತಿಸಲಾಗಿದೆ. ಈ ಗಡಿ ರೇಖೆಯೊಳಗೆ ಗುರುಭವನ, ಅಯ್ಯನ ಕೆರೆ ಅಂಗಳ, ಹಿರೆಕೆರೆ ಅಂಗಳ, ಕೋಟೆಯ ಅಗಳತ (ಕಂದಕ), ನಟರಾಜ ಬಡವಾಣೆಯ ಕೆಲ ಭಾಗ, ಸರ್ಕಾರಿ ಬಾಲಕಿಯರ ಶಾಲೆ ಹಿಂದುಗಡೆ ಪ್ರದೇಶ ಇನ್ನೂ ಕೆಲ ಪ್ರದೇಶಗಳ ಕಲ್ಲುಗಳ ಮೇಲೆ ಕೆಂಪು ಬಣ್ಣ ಬಳಿದು ಗುರಿತಿಸಲಾಗಿದೆ. ಸಂಜೆವರೆಗೆ ಶೇ. 70ರಷ್ಟು ಸರ್ವೆ ಕಾರ್ಯ ನಡೆಯಿತು. ಉಳಿದರೆ ನಾಳೆ ಅಥವಾ ಮುಂದಿನ ದಿನಗಳಲ್ಲಿ ಮಾಡುವುದಾಗಿ ಸರ್ವೆ ಸಿಬ್ಬಂದಿ ಹೇಳಿದರು.

       ಸ.ನಂ.539ರಲ್ಲಿ ಉಳಿದ ಜಮೀನಿನಲ್ಲಿ ಒತ್ತುವರಿಯಾಗಿದೆ ಎಂದು ಈ ಹಿಂದೆ ಆರ್‍ಟಿಐ ಕಾರ್ಯಕರ್ತ ಶ್ರೀಧರ ಹಾಗೂ ವಕೀಲರಾದ ಇದ್ಲಿ ರಾಮಪ್ಪ ಲೋಕಾಯಕ್ತಕ್ಕೆ ದೂರು ಸಲ್ಲಿಸಿದ್ದರು. ಸರ್ವೆ ಕಾರ್ಯ ವೀಕ್ಷಿಸಲು ಜನರು ಸೇರಿದ್ದರು. ಅಕ್ರಮ ಹಾಗೂ ಒತ್ತುವರಿ ಮಾಡಿಕೊಂಡವರ ಸ್ಥಿತಿ ಕೌತಕವಾಗಿ ಆತಂಕವನ್ನು ಎದರು ನೋಡುತ್ತಿದ್ದರು. ಇನ್ನೂ ಕೆಲವರು ಜಾಗೃತರಾಗಿ ಮುಂದಿನ ಕ್ರಮಕ್ಕೆ ತಾಳೆ ಹಾಕುತ್ತಿದ್ದು ಕಂಡುಬಂತು.

      ಸರ್ವೆ ಕಾರ್ಯದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಹೆಚ್.ಕೆ.ಹಾಲೇಶ್, ಜೈನ ಸಮುದಾಯದ ಅಧ್ಯಕ್ಷ ನಾಭಿರಾಜ್, ಯು.ಪಿ. ನಾಗರಾಜ, ಈಡಿಗ ಸಮಾಜದ ನಾರಾಯಣಸ್ವಾಮಿ, ವೆಂಕಟೇಶ್ ಶರತ್, ವಾಲ್ಮೀಕಿ ಸಮಾಜದ ಪೂಜಾರ ಮಂಜುನಾಥ, ದ್ಯಾಮಜ್ಜಿ ಹನುಮಂತಪ್ಪ, ರಾಜು ಪೂಜಾರ, ಚಿಕ್ಕೇರಿ ವೆಂಕಟೇಶ್, ಗಿಡ್ಡಹಳ್ಳಿ ನಾಗರಾಜ, ಮುಖಂಡರಾದ ವಿ.ಪಿ. ದುರುಗದಯ್ಯ, ಮ್ಯಾಕಿ ದುರುಗಪ್ಪ, ವಾಗೀಶ್, ನಿಟ್ಟೂರು ದೊಡ್ಡ ಹಾಲಪ್ಪ, ಹೆಚ್.ವೆಂಕಟೇಸ್, ಆರ್.ದುರುಗಪ್ಪ, ಬಾಣದ ಗಂಗಪ್ಪ, ದ್ಯಾಮಜ್ಜಿ ದಂಡೆಪ್ಪ, ಕವಸರ ಮಹೇಶ್, ಮನೋಜಕುಮಾರ, ಅಜಯ್ಯಕುಮಾರ, ಚಂದ್ರಪ್ಪ ರಾಯಬಾಗಿ, ವಿಶ್ವ ಕರ್ಮ ಸಮಾಜದ ಬಡಗಿ ವೀರಭದ್ರಪ್ಪ, ಮಂಜುನಾಥಾಚಾರ್ಯ, ಸರ್ವೆ ಸಿಬ್ಬಂದಿಗಳಾದ ಜನಾರ್ದನ್, ರಘು, ಶಶಿಧರ ಹಾಗೂ ಇತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link