ತಿಪಟೂರು :ರಸ್ತೆಯಲ್ಲಿ ಕರೋನಾ ವೈರಸ್‍ಗಿಂತ ಅಪಾಯಕಾರಿ ಧೂಳು

ತಿಪಟೂರು :

     ನಗರದಲ್ಲಿ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿ ಹೋಗಿದ್ದು ದೂಳಿನಿಂದ ಕರೋನ ವೈರಸ್‍ಗಿಂತ ಹೆಚ್ಚಾಗಿ ಶ್ವಾಸಕೋಶಗಳು ಹಾಳುತ್ತಿವೆ ಎಂದು ಹೆದರಿದ ವರ್ತಕರು ತಮ್ಮ ಸ್ವಂತ ಹಣದಿಂದ ರಸ್ತೆಗೆ ನೀರು ಹಾಕಿಸುವ ಮೂಲಕ ಪ್ರತಿಭಟನೆಗೆ ಸಜ್ಜಾಗುತ್ತಿದ್ದಾರೆ.

     ನಗರದ ರಸ್ತೆಗಳೆಲ್ಲಾ ಹಾಳಾಗಿರುವುದು ಎಲ್ಲಾ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ತಿಳಿದಿದ್ದರರು ಸಾರ್ವಜನಿಕರ ಸಮಸ್ಯೆಗಳು ನಮಗೇಕೆ ಎಂದು ಮುಖಸಿಂಡರಿಸಿಕೊಂಡಿರುವ ಸಂದರ್ಭದಲ್ಲಿ ಹಾಲ್ಕುರಿಕೆ ರಸ್ತೆಯ ಗೋವಿನಪುರದ ಕೆಲ ವರ್ತಕರುಗಳು ಸೇರಿ ತಮ್ಮ ಸ್ವಂತ ಖರ್ಚಿನಿಂದ ಟ್ಯಾಂಕರ್ ಮೂಲಕ ನೀರುಹಾಕಿಸಿ ದೂಳನ್ನು ಶಮನ ಮಾಡಲು ಯತ್ನಿಸುತ್ತಿದ್ದಾರೆ.

    ಇದರ ಬಗ್ಗೆ ಅಂಗಡಿಯ ಮಾಲೀಕರು ಮಾತನಾಡಿ ಇಲ್ಲಿನ ದೂಳಿನಿಂದ ರಸ್ತೆಯೂ ಕಾಣದೇ ಅನೇಕರು ಗುಂಡಿಯಲ್ಲಿ ಬಿದ್ದು ಕೈಕಾಲು ಮುರಿದುಕೊಳ್ಳುವುದು ಮಾಮೂಲಿಯಾಗಿದೆ ಆದ್ದರಿಂದ ಸ್ವಲ್ಪವಾದರೂ ಜನರಿಗೆ ರಸ್ತೆಕಾಣಲಿ ಎನ್ನುವ ದೃಷ್ಠಿ ರಸ್ತೆಗೆ ನಮ್ಮ ಸ್ವಂತ ಹಣದಿಂz ನೀರನ್ನು ಹಾಕಿಸುತ್ತಿದ್ದೇವೆಂದು ಬೇಬಿ ತಿಳಿಸಿದರು.

    ಈ ರಸ್ತೆಯಲ್ಲಿ ಅನೇಕ ಭಾರಿವಾಹನಗಳು ಸಂಚರಿಸುತ್ತಿದ್ದು ಇದರಬಗ್ಗೆ ಆರ್.ಟಿ.ಓ ಇಲಾಖೆಯ ಅಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ, ಮತ್ತು ಈ ರಸ್ತೆಗೆ ಹೇಗೆ ಬೇಕೋ ಹಾಗೆ ತೇಪೆಕಾರ್ಯವನ್ನು ಮಾಡಿದ್ದರು ಅದು ಗುಣಮಟ್ಟದಿಂದ ಕೂಡಿರದೆ ಹಾಕಿದ ಕೆಲವೇ ಗಂಟೆಗಳಲ್ಲಿ ಕಿತ್ತು ಹೋಯಿತು. ಕೂಡಲೇ ರಸ್ತೆಯನ್ನು ಸರಿಪಡಿಸದಿದ್ದರೆ ಎಲ್ಲರೂ ಸೇರಿ ರಸ್ತೆತಡೆಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link