ನೆಲಮಂಗಲ :
ಕಾರ್ ನಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ ಕುಣಿಗಲ್ ಸರ್ಕಲ್ ನಲ್ಲಿರುವ ಗ್ಯಾರೇಜ್ ಬಳಿ ನಡೆದಿದೆ.
ನೆಲಮಂಗಲ ಟೌನಿನ ಕುಣಿಗಲ್ ಸರ್ಕಲ್ ಬಳಿ ಇರುವ ಅರುಣ್ ಗ್ಯಾರೇಜಿನ ಮುಂದೆ ನಿಲ್ಲಿಸಿರುವ ಕಾರಿನಲ್ಲಿ ಶವ ಕೊಳತೆ ವಾಸನೆ ಬರಲಾರಂಭಿಸಿದೆ. ರಸ್ತೆಯಲ್ಲಿ ಓಡಾಡುವರೊಬ್ಬರು ಕೆಟ್ಟ ವಾಸನೆ ಬಂದಿದ್ದರಿಂದ ಕಾರಿನ ಬಳಿ ತೆರಳಿ ಪರೀಕ್ಷಿಸಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಚಳಿ ತಡೆಯಲಾರದೇ ಕೆಟ್ಟು ನಿಂತಿದ್ದ ಕಾರ್ ಒಳಗೆ ಹೋದ ಅಪರಿಚಿತ ವ್ಯಕ್ತಿ ಮೃತಪಟ್ಟಿರಬಹುದೆಂದು ಹೇಳಲಾಗಿದ್ದು, ಸುತ್ತಲಿನ ಸಿಸಿ ಟಿವಿ ಕ್ಯಾಮೆರಾ ಪರಿಶೀಲಿಸಿ ತನಿಖೆ ನಡೆಸಲು ಪೊಲೀಸರು ಮುಂದಾಗಿದ್ದಾರೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ