ಘಜ್ನಿ:
ಅಫ್ಗಾನಿಸ್ತಾನದ ದೆಹ್ಯಾಕ್ ಜಿಲ್ಲೆಯಲ್ಲಿ ಸೋಮವಾರ ವಿಮಾನವೊಂದು ಪತನಗೊಂಡಿದ್ದು, ಸುಮಾರು 83 ಪ್ರಯಾಣಿಕರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.ಈ ಬೋಯಿಂಗ್ ವಿಮಾನವು ಅರಿಯಾನ ಆಫ್ಘಾನ್ ಏರ್ಲೈನ್ಗೆ ಸೇರಿದ್ದಾಗಿದ್ದು, ಸ್ಥಳೀಯ ಕಾಲಮಾನ ಮಧ್ಯಾಹ್ನ 1:10ರ ಸುಮಾರಿಗೆ ಘಜನಿ ಪ್ರಾಂತ್ಯದ ದೇಹ್ ಏಕ್ ಜಿಲ್ಲೆಯ ಸಾಡೋ ಖೇಲ್ ಏರಿಯಾದಲ್ಲಿ ಪತನವಾಗಿದೆ ಎಂದು ಘಜನಿ ನಗರದಲ್ಲಿರುವ ಪ್ರಾಂತೀಯ ಗವರ್ನರ್ ಕಚೇರಿಯ ವಕ್ತಾರ ಆರೀಫ್ ನೂರಿ ಹೇಳಿದ್ದಾರೆ.
ಘಜ್ನಿಯ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾರ, ಹೇರತ್ ನಿಂದ ಕಾಬೂಲ್ ಗೆ ಪ್ರಯಾಣ ಬೆಳೆಸುತ್ತಿದ್ದ ವಿಮಾನ ಏಕಾಏಕಿ ಪತನಗೊಂಡಿದೆ. ಈ ಅವಘಡಕ್ಕೆ ಸೂಕ್ತ ಕಾರಣ ಇನ್ನೂ ತಿಳಿದುಬಂದಿಲ್ಲ.ವಿಮಾನದಲ್ಲಿ ಒಟ್ಟು 83 ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದ್ದು, ಈವರೆಗೂ ಯಾವುದೇ ಸಾವು-ನೋವುಗಳು ಆಗಿರುವ ಬಗ್ಗೆ ವರದಿಯಾಗಿಲ್ಲ. ವಿಮಾನವು ತಾಲಿಬಾನ್ ಏರಿಯಾದಲ್ಲಿ ಪತನವಾಗಿದೆ ಎಂದು ಹೇಳಲಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








