ನವದೆಹಲಿ :
ಕೇಂದ್ರ ಸರ್ಕಾರ 2020-21ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದು, 5 ಲಕ್ಷದವರೆಗೆ ಯಾವುದೇ ತೆರಿಗೆ ಇಲ್ಲ ಎನ್ನುವ ಮೂಲಕ ಸಿಹಿ ಸುದ್ದಿ ನೀಡಿದೆ.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ ಮೊದಲ ಬಾರಿಗೆ ಮಂಡಿಸುತ್ತಿರುವ ಸಂಪೂರ್ಣ ಬಜೆಟ್ ಇದಾಗಿದ್ದು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಬಜೆಟ್ ಮಂಡನೆ ಮಾಡುತ್ತಿದ್ದಾರೆ.
ಇದೇ ವೇಳೆ ಕೇಂದ್ರ ಸರಕಾರದಿಂದ ತೆರಿಗೆದಾರರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದ್ದು, ವೈಯಕ್ತಿಕ ಅದಾಯ ತೆರಿಗೆಯಲ್ಲಿ ಇಳಿಕೆ ಮಾಡಲಾಗಿದ್ದು, ಹೊಸದಾಗಿ 5-7/5 ಲಕ್ಷ ಅದಾಯ ಹೊಂದಿರುವರು ಶೇ.10 ತೆರಿಗೆ ಕಟ್ಟಬೇಕು. 7.5-10 ಲಕ್ಷ ಅದಾಯಕ್ಕೆ ಶೇ15 ತೆರಿಗೆ, 10-12.5 ಲಕ್ಷ ಅದಾಯ ಹೊಂದಿರುವವರಿಗೆ ಶೇ20 ತೆರಿಗೆ . 12.5-15 ಲಕ್ಷ ಅದಾಯ ಹೊಂದಿರುವವರಿಗೆ ಶೇ 25 ರಷ್ಟು ತೆರಿಗೆ. 15 ಲಕ್ಷ ಮೇಲ್ಪಟ ಅದಾಯಕ್ಕೆ ಶೇ 30 ತೆರಿಗೆ ಕಟ್ಟಬೇಕು.
2020 ರ ಬಜೆಟ್ ಅನ್ನು ಮಂಡನೆ ಮಾಡುತ್ತಿದ್ದು, ಇದೇ ವೇಳೆ ವಿತ್ತ ಸಚಿವೆ ಸೀತಾರಾಮನ್ ಎಲ್ಐಸಿಯಲ್ಲಿ ತನ್ನ ಪಾಲಿನ ಒಂದು ಭಾಗವನ್ನು ಮಾರಾಟ ಮಾಡಲು ಪ್ರಸ್ತಾಪಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ