ಜೀವ ಬಿಟ್ಟೇವು ಗ್ರಾಮ ಬಿಡೆವು :ರಾಜಣ್ಣ ..!

ತುಮಕೂರು :

     ಬಳ್ಳಾರಿಯಿಂದ ಬಂದ ಕೆಲವರು ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ತಂಗನಹಳ್ಳಿ ಗ್ರಾಮದಲ್ಲಿ ಜಲ್ಲಿ ಕ್ರಷರ್ ಮಾಡುವುದಕ್ಕೆ ಯೋಜನೆ ಮಾಡಿದ್ದಾರೆ ಇದರಿಂದ ಗ್ರಾಮವನ್ನು ಒಕ್ಕಲೆಬ್ಬಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಪ್ರತಿಭಟನೆ ನಡೆಸಿದ ತಂಗನಹಳ್ಳಿ ಗ್ರಾಮದ ಜನರು ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.

     ಜಲ್ಲಿ ಕ್ರಷರ್ ಮಾಡುವುದಕ್ಕೆ ಬಳ್ಳಾರಿ ಕಡೆಯಿಂದ ಜೊತೆಯಾಗಿ ೪ ಜನ  ಬಂದು, ತಂಗನಹಳ್ಳಿ ಗ್ರಾಮವನ್ನು ಹಾಳು ಮಾಡುವುದಕ್ಕೆ ನೋಡುತ್ತಿದ್ದಾರೆ, ಸುಮಾರು ೪೦ಕ್ಕಿಂತ ಹೆಚ್ಚು ಎಕರೆ ಜಮೀನನ್ನು ಖರೀದಿ ಮಾಡಿ ಈಗ ಸುಮಾರು ೪೦೦ ಎಕರೆ ಖರೀದಿ ಮಾಡಲು ಬಾಯಿ ಹಾಕುತ್ತಿದ್ದಾರೆ. ನಮ್ಮ ಗ್ರಾಮವೇ ಅವರ ಪಾಲಾಗುತ್ತಿದೆ. ದಯವಿಟ್ಟು ಎಲ್ಲ ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳುತ್ತೇವೆ ನಮ್ಮ ಊರನ್ನು ನಮಗೆ ಉಳಿಸಿಕೊಡಿ. ಗಲಾಟೆ ಮಾಡಿ ಅವರನ್ನು ಅಲ್ಲಿಂದ ಹೊರಗೆ ಕಳಿಸುವುದಕ್ಕೆ ನಾವು ರೆಡಿಯಾಗಿದ್ದೇವೆ, ಆದರೆ ನಾವು ಕಾನೂನನ್ನು ಕೈಗೆತ್ತಿಕೊಳ್ಳುವಂತಹ ಕೆಲಸವನ್ನು ಮಾಡುವುದಿಲ್ಲ ಎಂದು ಆಕ್ರೋಷ ವ್ಯಕ್ತಪಡಿಸಿದರು.

     ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಳ್ಳುತ್ತಿದ್ದೇವೆ. ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳುತ್ತಿದ್ದೇವೆ. ಜಲ್ಲಿ ಕ್ರಷರ್ ಮಾಡುವುದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಸುಮಾರು ೧೫೦ಕ್ಕಿಂತ ಹೆಚ್ಚಿನ  ಮನೆಗಳಿವೆ. ಶಾಲೆ ಇದೆ, ದೇವಸ್ಥಾನಗಳಿವೆ ನಾವು ಬೇರೆ ಕಡೆ ಹೋಗುವುದಿಲ್ಲ, ಎಲ್ಲರೂ ಕಡಿಮೆ ಜಮೀನು ಹೊಂದಿರುವ ಸಣ್ಣ ರೈತರು, ಅದನ್ನು ನಂಬಿಕೊಂಡು ಜೀವನ ಮಾಡುತ್ತಿದ್ದೇವೆ. ಈಗ ಅದನ್ನು ಕೂಡ ಲಪಟಾಯಿಸಲು ನೋಡುತ್ತಿದ್ದಾರೆ ಅದಕ್ಕೆ ಆಸ್ಪದ ನೀಡಬೇಡಿ ಎಂದರು ಗ್ರಾಮ ಪಂಚಾಯಿತಿ ಸದಸ್ಯರಾದ ರಾಜಣ್ಣನವರು.

     ಬಳ್ಳಾರಿಯಿಂದ ಬಂದಿರುವ ಈ ೪ ಜನರ ಲಾಭಕ್ಕಾಗಿ ೪೦೦ ಜನಕ್ಕೆ ತೊಂದರೆಯನ್ನು ನೀಡುತ್ತಿದ್ದಾರೆ. ನಮ್ಮ ಪ್ರಾಣವನ್ನು ಬೇಕಾದರೂ ಬಿಡುತ್ತೇವೆ ಅಲ್ಲಿ ಅವಕಾಶವನ್ನು ನೀಡುವುದಿಲ್ಲ. ಇದಕ್ಕೂ ಮುನ್ನ ಡ್ಯಾಮ್  ನಿರ್ಮಾಣ ಮಾಡುವುದಕ್ಕೆ ನಮ್ಮ ಗ್ರಾಮವನ್ನು ಕೇಳಿದ್ದರು. ಸಾವಿರಾರು ಜನರಿಗೆ, ಲಕ್ಷಾಂತರ ಜನರಿಗೆ ಇದರಿಂದ ಅನುಕೂಲವಾಗುತ್ತದೆ ಎಂದು ನಾವೆಲ್ಲರು ಬಿಟ್ಟುಕೊಡಲು ತಯಾರಿದ್ದೆವು. ನಂತರ ಡ್ಯಾಮ್ ಸ್ಥಳಾಂತರ ಮಾಡಲಾಯಿತು ಸರಿ ಎಂದು ಸುಮ್ಮನಾಗಿದ್ದೆವು. ದಯವಿಟ್ಟು ಎಲ್ಲಾ ಅಧಿಕಾರಿಗಳು, ರಾಜಕಾರಣಿಗಳು ಇದರ ಬಗ್ಗೆ ಗಮನ ನೀಡಿ ತಮಗೆ ಅನುಕೂಲ ಮಾಡಿಕೊಡಬೇಕಾಗಿ ವಿನಂತಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link