ಟೋಕಿಯೋ:
ಟೋಕಿಯೋದಲ್ಲಿ ನಡೆಯುತ್ತಿರುವ ಒಲಂಪಿಕ್ಸ್ ಗೂ ಸಹ ಕರೋನಾ ವೈರಸ್ ಭೀತಿ ಎದುರಾಗಿದೆ. ಟೋಕಿಯೋ ಒಲಂಪಿಕ್ಸ್ ನ ಆಯೋಜಕರು ಈ ಬಗ್ಗೆ ಮಾತನಾಡಿದ್ದು,ಒಲಂಪಿಕ್ಸ್ ಗೇಮ್ಸ್ ಗೆ ಕರೋನಾ ವೈರಸ್ ಭಯ ಅತಿ ಹೆಚ್ಚಾಗಿ ಕಾಡುತ್ತಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ತೋಷಿರೊ ಮ್ಯುಟೊ ಹೇಳಿದ್ದಾರೆ.ಒಲಂಪಿಕ್ಸ್ ವೇಳೆಗೆ ಚೀನಾದಲ್ಲಿನ ಪರಿಸ್ಥಿತಿ ಸುಧಾರಣೆಯಗಾಗುವ ಭರವಸೆ ಇದೆ ಎಂದು ತೋಷಿರೊ ಮ್ಯುಟೊ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈಗಾಗಲೇ 20 ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಕರೋನಾ ವೈರಸ್ ಕಾಣಿಸಿಕೊಂಡಿದೆ. 500 ಹೆಚ್ಚು ಜನ ಇದಕ್ಕೆ ಬಲಿಯಾಗಿದ್ದರೆ 24,000 ಕ್ಕಿಂತ ಹೆಚ್ಚು ಜನರಿಗೆ ಸೋಂಕು ತಗುಲಿದೆ. ಜಪಾನ್ ನಲ್ಲಿ 10 ಜನರಿಗೆ ಈ ಸೋಂಕು ತಗುಲಿದೆ. ಅದೃಷ್ಟವಶಾತ್ ಈವರೆಗೂ ಯಾವುದೇ ಜೀವ ಹಾನಿ ಸಂಭವಿಸಿಲ್ಲ.