ಭುವನೇಶ್ವರ್
ಇತ್ತೀಚಿನ ದಿನಗಳಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ತಪ್ಪಿಸಲು ದಂಡ ವಿಧಿಸಲಾಗುತ್ತಿದೆ ಆದರೆ ಇದರ ಜೊತೆಗೆ ಉಲ್ಲಂಘನೆಗಳು ಹೆಚ್ಚಾಗುತ್ತಿವೆ ಇಂತಹುದೆ ಪ್ರಕರಣವೊಂದರಲ್ಲಿ ಪರವಾನಗಿ ಇಲ್ಲದೇ, ಹೆಲ್ಮೆಟ್ ಧರಿಸದೇ ಬೈಕ್ ಚಾಲನೆ ಮಾಡುತ್ತಿದ್ದ ಅಪ್ರಾಪ್ತ ಹುಡುಗನನ್ನು ಹಿಡಿದ ಪೊಲೀಸರು ಆತನಿಗೆ ಬರೋಬ್ಬರಿ 42,500 ರೂಪಾಯಿ ದಂಡ ವಿಧಿಸಿದ್ದಾರೆ.
ಭದ್ರಕ್ ಜಿಲ್ಲೆಯಲ್ಲಿ ಈ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ. ಡ್ರೈವಿಂಗ್ ಲೈಸೆನ್ಸ್ ಇಲ್ಲದ ಅಪ್ರಾಪ್ತನ ಕೈಗೆ ಬೈಕ್ ನೀಡಿದ್ದು, ಕೇಂದ್ರ ಸರ್ಕಾರದ ಮೋಟಾರ್ ವಾಹನ ಕಾಯ್ದೆ ಪ್ರಕಾರ ಅಪರಾಧವಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾನೂನು ಉಲ್ಲಂಘನೆ ಮಾಡಿದ ಆರೋಪಕ್ಕೆ ಬರೋಬ್ಬರಿ ದಂಡ ವಿಧಿಸಲಾಗಿದೆ.
ಇನ್ನು, ಅಪ್ರಾಪ್ತ ಯುವಕ ತನ್ನ ಇಬ್ಬರು ಸ್ನೇಹಿತರನ್ನು ಕೂರಿಸಿಕೊಂಡು ಹೆಲ್ಮೆಟ್ ಧರಿಸದೇ ಬೈಕ್ ಚಾಲನೆ ಮಾಡುತ್ತಿದ್ದನು. ಆದರೆ, ಅಪ್ರಾಪ್ತನಿಗೆ ತನ್ನ ಬೈಕ್ ನೀಡಿದ ಮಾಲೀಕನ ಹೆಸರಿನಲ್ಲಿಯೇ ದಂಡದ ರೆಸಿಪ್ಟ್ ನೀಡಲಾಗಿದೆ ಎಂದು ಸಂಚಾರಿ ಪೊಲೀಸ್ ಧನೇಶ್ವರ್ ನಾಯಕ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ