ದೆಹಲಿ :
ನಿಮ್ಮ ಪ್ಯಾನ್ ಕಾರ್ಡ್‌ನಲ್ಲಿ ಯಾವುದೇ ರೀತಿಯ ತಪ್ಪು ಸಂಭವಿಸಿದಲ್ಲಿ, ಅದನ್ನು ನವೀಕರಿಸಲು ಮಾ.31 ರ ಡೆಡ್ ಲೈನ್ ನೀಡಲಾಗಿದೆ.
ಹೌದು, ಪ್ಯಾನ್ ಕಾರ್ಡ್ ಹಣಕಾಸಿನ ವಹಿವಾಟು ಮತ್ತು ತೆರಿಗೆ ರಿಟರ್ನ್ ಗಾಗಿ ಕಡ್ಡಾಯ ದಾಖಲೆಯಾಗಿದೆ. ಅನೇಕ ಜನರ ಪ್ಯಾನ್ ಕಾರ್ಡ್ ವಿವರಗಳನ್ನು ತಪ್ಪಾಗಿ ಮುದ್ರಿಸಲಾಗಿರುತ್ತದೆ. ಇದರಲ್ಲಿ, ಹೆಸರು, ತಂದೆಯ ಹೆಸರು ಅಥವಾ ಹುಟ್ಟಿದ ದಿನಾಂಕವನ್ನು ತಪ್ಪಾಗಿ ಮುದ್ರಿಸಿರಬಹುದು. ನಿಮ್ಮ ವಿಷಯದಲ್ಲೂ ಇದೇ ರೀತಿ ಸಂಭವಿಸಿದ್ದರೆ, ಅದನ್ನು ಕೂಡಲೇ ಸರಿಪಡಿಸಿ. ನೀವು ಅದನ್ನು ಸರಿ ಮಾಡದಿದ್ದರೆ, ನಿಮಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಸಾಧ್ಯವಾಗುವುದಿಲ್ಲ. ಐಟಿಆರ್ ಕೂಡ ಸಾಧ್ಯವಾಗದಿರಬಹುದು.
ಈ ಎಲ್ಲಾ ಕೆಲಸಗಳನ್ನು ಮುಗಿಸಲು ಮಾರ್ಚ್ 31, 2020 ಕೊನೆಯ ದಿನಾಂಕವಾಗಿದ್ದು, 31ರೊಳಗೆ ಆಧಾರ್‌ನೊಂದಿಗೆ ಪ್ಯಾನ್ ಲಿಂಕ್ ಮಾಡದಿದ್ದರೆ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್) ನಿಷ್ಕ್ರಿಯಗೊಂಡು ಪ್ರಯೋಜನಕ್ಕೆ ಬಾರದಂತೆ ಆಗಲಿದೆ ಎಂದು ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ.
ವಾಸ್ತವವಾಗಿ, ಒಂದು ವೇಳೆ ಆಧಾರ್‌ನೊಂದಿಗೆ ಪ್ಯಾನ್ ಲಿಂಕ್(Pan-Aadhaar Linking) ಮಾಡಿಲ್ಲದಿದ್ದರೆ, ಪ್ಯಾನ್ ಕಾರ್ಡ್ ರದ್ದುಗೊಳ್ಳುತ್ತದೆ. ಏತನ್ಮಧ್ಯೆ, ನಿಮ್ಮ ಪ್ಯಾನ್ ಕಾರ್ಡ್‌ನಲ್ಲಿ ಯಾವುದೇ ರೀತಿಯ ತಪ್ಪು ಸಂಭವಿಸಿದಲ್ಲಿ, ಅದನ್ನು ನವೀಕರಿಸಲು ಖಚಿತಪಡಿಸಿಕೊಳ್ಳಿ. ಇಲ್ಲದಿದ್ದರೆ ಹಲವು ರೀತಿಯ ಸಮಸ್ಯೆಗಳು ಎದುರಾಗಬಹುದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ