ಸಾಂವಿಧಾನಿಕ ಸಂಸ್ಥೆಗಳ ಮೇಲಿನ ದಾಳಿ ದೇಶದ ಬೆಳವಣಿಗೆಗೆ ಮಾರಕ

ತುಮಕೂರು

     ಕಳೆದ ಎಪ್ಪತ್ತು ವರ್ಷಗಳಲ್ಲಿ ಗಳಿಸಿದ್ದನ್ನು ಕಳೆದುಕೊಳ್ಳುವ ಆತಂಕದಲ್ಲಿ ದೇಶವಿದ್ದು, ಪ್ರತಿನಿತ್ಯ ಸಾಂವಿಧಾನಿಕ ಸಂಸ್ಥೆಗಳ ಮೇಲೆ ದಾಳಿ ನಡೆಯುತ್ತಿದೆ ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಅಭಿಪ್ರಾಯಪಟ್ಟರು.

    ನಗರದ ಬಾಲಭವನದಲ್ಲಿ ಅಪೆಕ್ಸ್ ಬ್ಯಾಂಕ್ ಹಾಗೂ ಡಿಸಿಸಿ ಬ್ಯಾಂಕ್ ಸಹಯೋಗದಲ್ಲಿ ನಡೆದ ಸಮುದಾಯದತ್ತ ಸಿನಿಮಾ ಬಯಲಾಟದ ಭೀಮಣ್ಣ ಚಿತ್ರಯಾತ್ರೆ ಉದ್ಘಾಟಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದ 70 ವರ್ಷಗಳಲ್ಲಿ ಭಾರತ ಯಾವ ಸಾಧನೆಯನ್ನು ಮಾಡಿಲ್ಲ ಎಂದರೆ ಒಪ್ಪುವುದಿಲ್ಲ, ಸ್ವಾತಂತ್ರ್ಯ ನಂತರ ದೇಶವನ್ನು ಒಗ್ಗೂಡಿಸುವ ಮೂಲಕ ದೇಶವನ್ನು ಕಟ್ಟಲು ಸಾಧ್ಯವಾಗಿದ್ದು ಸಂವಿಧಾನದಿಂದ ಎನ್ನುವುದನ್ನು ಅರಿಯಬೇಕು ಎಂದರು.

    ದೇಶ ಹಾಗೂ ನಾವು ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ನೀಡುವ ಶಕ್ತಿ ಇರುವುದು ಸಂವಿಧಾನಕ್ಕೆ ಮಾತ್ರ, ಭಾರತದಲ್ಲಿ ಪ್ರಜಾ ಪ್ರಭುತ್ವ ವಿರೋಧಿಗಳನ್ನು ಎದುರಿಸಲು ಸಂವಿಧಾನದ ಅರಿವು ಅವಶ್ಯಕವಾಗಿದ್ದು, ಗ್ರಾಮೀಣ ಪ್ರದೇಶದ ಅವಿದ್ಯಾವಂತರಿಗೆ ಹಾಗೂ ಯುವ ಸಮೂಹಕ್ಕೆ ಸಂವಿಧಾನದ ಅರಿವು ಮೂಡಿಸಬೇಕಿದೆ, ಸ್ವಾತಂತ್ರ್ಯ ಬಂದ ಎಪ್ಪತ್ತು ವರ್ಷಗಳಲ್ಲಿ ಸರ್ಕಾರಗಳು ಸಂವಿಧಾನವನ್ನು ಜನರಿಗೆ ತಲುಪಿಸುವ ಕೆಲಸ ಮಾಡಲಿಲ್ಲ ಎಂದು ಅಭಿಪ್ರಾಯಪಟ್ಟರು.

   ಸಿನಿಮಾಗಳ ಮೂಲಕವೂ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಜನರ ಪ್ರಜ್ಞೆಯನ್ನು ಹೆಚ್ಚಿಸುವ ಕೆಲಸವನ್ನು ಮಾಡಬೇಕಿದೆ, ಈ ನಿಟ್ಟಿನಲ್ಲಿ ಬರಗೂರು ರಾಮಚಂದ್ರಪ್ಪ ಅವರ ಬಯಲಾಟದ ಭೀಮಣ್ಣ ಸಂವಿಧಾನದ ಆಶಯಗಳನ್ನು ತಿಳಿಸುವ ಮೂಲಕ ಜನರನ್ನು ತಿದ್ದುವ ಕೆಲಸವನ್ನು ಮಾಡುತ್ತಿದ್ದಾರೆ, ಉತ್ತಮ ಚಿತ್ರಗಳನ್ನು ನಾಡಿಗೆ ನೀಡುವ ಕೆಲಸವನ್ನು ಬರಗೂರು ಮಾಡಲಿ ಎಂದು ಆಶಿಸಿದರು.

   ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರು ಮಾತನಾಡಿ, ತಂತ್ರಜ್ಞಾನ ಹೆಚ್ಚಿದಂತೆ ಚಿತ್ರಗಳನ್ನು ನೋಡುವವರ ಸಂಖ್ಯೆ ಕಡಿಮೆಯಾಗಿದೆ, ಮನರಂಜನೆಯೊಂದಿಗೆ ನೀತಿಪಾಠವನ್ನು ಸಿನಿಮಾ ಹೇಳುತ್ತಿತ್ತು, ಇಂದಿನ ಸಿನಿಮಾಗಳು ಹಣ ಸಂಪಾದನೆ?ಗೆ ಸೀಮಿತವಾಗಿವೆ ಎಂದು ಅಭಿಪ್ರಾಯಪಟ್ಟರು.

   ಗ್ರಾಮೀಣ ಜನರ ಉತ್ತಮ ಜೀವನಕ್ಕೆ ಪೂರಕವಾಗಿರುವ ಸಿನಿಮಾಗಳಿಗೆ ಪೆÇ್ರೀತ್ಸಾಹ ನೀಡಬೇಕಿರುವುದು ನಮ್ಮೆಲ್ಲರ ಜವಾಬ್ದಾರಿ, ಸಹಕಾರ ಸಂಸ್ಥೆಗಳು ಸಹ ಇಂತಹ ಸಿನಿಮಾಗಳಿಗೆ ಪೆÇ್ರೀತ್ಸಾಹ ನೀಡಬೇಕು, ಗ್ರಾಮೀಣರ ಬದುಕು ಹಸನು ಮಾಡುವ ಪ್ರಯತ್ನಕ್ಕೆ ನಮ್ಮೆಲ್ಲರ ಬೆಂಬಲ ಇರುತ್ತದೆ, ಬರಗೂರು ಮೇಷ್ಟ್ರು ಮುಂದಿನ ದಿನಗಳಲ್ಲಿ ಇಂತಹ ಸಿನಿಮಾಗಳನ್ನು ಸಾಕಷ್ಟು ತರಲಿ ಎಂದು ಆಶಿಸಿದರು.
ಸಾಹಿತಿ ಹಾಗೂ ಚಿತ್ರ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಮಾತನಾಡಿ, ಇಂದು ರಾಜ್ಯದಲ್ಲಿ ಕಲಾತ್ಮಕ ಚಿತ್ರಗಳ ಬಿಡುಗಡೆಗೆ ತೊಂದರೆ ಎದುರಾಗುತ್ತಿದ್ದು, ಹೊಸ ಪ್ರಯೋಗಕ್ಕೆ ಸರಿಯಾದ ಭೂಮಿಕೆ ಇಲ್ಲದಂತಾಗಿದ್ದು, ಪ್ರಯೋಗಾತ್ಮಕ ಚಿತ್ರಗಳನ್ನು ನೋಡಲು ಜನರು ಚಿತ್ರಮಂದಿರಗಳ ಕಡೆ ಬರುತ್ತಿಲ್ಲ, ಜನರ ಅಭಿರುಚಿ ಬದಲಾಗಿದೆ, ರಾಜ್ಯದಲ್ಲಿರುವ ಪ್ರಯೋಗಾತ್ಮಕ ಪ್ರೇಕ್ಷಕರಿಗೆ ಚಿತ್ರಮಂದಿರದ ಸಮಸ್ಯೆ ಎದುರಾಗಿದೆ ಎಂದು ಹೇಳಿದರು.

     ಪ್ರಯೋಗಾತ್ಮಕ ಚಿತ್ರಗಳು ಪ್ರಶಸ್ತಿಗೆ ಸೀಮಿತವಾಗಬೇಕೆ, ಪ್ರಯೋಗಾತ್ಮಕ ಚಿತ್ರಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕಿದೆ ಅದಕ್ಕಾಗಿ ಸಮುದಾಯದತ್ತ ಚಿತ್ರಯಾತ್ರೆ ಪ್ರಾಂಭಿಸಿದ್ದು, ಈ ಪರ್ಯಾಯ ಪ್ರದರ್ಶನದ ಮೂಲಕ ಹೊಸ ಅಭಿರುಚಿಯ ಪ್ರೇಕ್ಷಕರನ್ನು ಸೃಷ್ಟಿಸುವ ಕೆಲಸವನ್ನು ಈ ಚಿತ್ರಯಾತ್ರೆ ಮೂಲಕ ಹಮ್ಮಿಕೊಳ್ಳಲಾಗಿದೆ ಎಂದರು.

   ಜನರಿಗೆ ಪ್ರಯೋಗಾತ್ಮಕ ಸಿನಿಮಾ ತಲುಪಿಸುವುದರಿಂದ ನಿರ್ಮಾಪಕರಿಗೂ ಹಣ ಬರುತ್ತದೆ, ಆದರೆ ಬಯಲಾಟದ ಭೀಮಣ್ಣ ಚಿತ್ರವನ್ನು ಜನರಿಗೆ ತಲುಪಿಸುವ ಪ್ರಯೋಗಕ್ಕೆ ಪ್ರಾಯೋಜನೆ ನೀಡಲು ಮುಂದೆ ಬಂದವರು ಕೆ.ಎನ್.ರಾಜಣ್ಣ ಅವರು ಮಾತ್ರ, ಅಪೆಕ್ಸ್ ಬ್ಯಾಂಕ್, ಡಿಸಿಸಿ ಬ್ಯಾಂಕ್ ಗೆ ಮತ್ತೊಂದು ಆಯಾಮ ನೀಡಿದ್ದಾರೆ, ಬ್ಯಾಂಲ್ ಎಂದರೆ ಬರೀ ಆರ್ಥಿಕತೆ ಅಲ್ಲ ಅದಕ್ಕೊಂದು ಸಾಂಸ್ಕೃತಿಕ ಆಯಾಮವನ್ನು ನೀಡಿದ್ದಾರೆ ಎಂದರು.

   ಭಾರತ ಹಾಗೂ ಸಿನಿಮಾ ಎರಡು ಒಕ್ಕೂಟ ವ್ಯವಸ್ಥೆಯೇ, ಸಿನಿಮಾ ಒಕ್ಕೂಟ ಕಲೆಯಾಗಿದೆ ಆದರೆ ಇಂದು ಸಿನಿಮಾ ಅರ್ಥಮಾಡಿಕೊಳ್ಳಲು ಬಾರದವರು ಸಿನೆಮಾವನ್ನು ನಿರ್ಣಯಿಸುತ್ತಿದ್ದಾರೆ, ಸಿನಿಮಾ ಎಂದರೆ ಮರ ಸುತ್ತುವುದಲ್ಲ, ಫೈಟ್ ಮಾಡುವುದಲ್ಲ ಇಂದು ನಮ್ಮ ಅಭಿರುಚಿ ಬದಲಾಗಿದೆ, ಸಮಾಜ, ಧರ್ಮ, ಸಾಂಸ್ಕೃತಿಕ ಕ್ಷೇತ್ರದಲ್ಲಿಯೂ ಈ ಬದಲಾವಣೆ ಆಗಿದ್ದು, ಕಟ್ಟುವ ಕ್ರಿಯೆಗೆ ಬದಲಾಗಿ ಕೆಡುವುವ ಕ್ರಿಯೆಗೆ ಜನರು ಚಪ್ಪಾಳೆ ಕಟ್ಟುತ್ತಾರೆ ಎಂದರು.

     ಬಯಲಾಟದ ಭೀಮಣ್ಣ ಸಂವಿಧಾನದ ಆಶಯಗಳಿಗೆ ಬದ್ಧವಾಗಿದೆ, ಸಂವಿಧಾನವನ್ನು ನೋಡು ಎನ್ನುವಂತಾಗಿದೆ, ನಾಟಕ ಮಾಡಿದರೆ ಜೈಲಿಗೆ, ನಾನೇನಾದ್ರು ಮಾತನಾಡಿದರೆ ಜೈಲಿಗೆ ಕಳುಹಿಸುತ್ತಾರೆ ಎನ್ನುವ ಭಯವಿದೆ. ಸರ್ಕಾರ ಜಿಲ್ಲೆಗೊಂದರಂತೆ ಮಿನಿ ಚಿತ್ರ ಮಂದಿರ ನಿರ್ಮಾಣ ಮಾಡಿ, ಕನ್ನಡ ಚಿತ್ರಗಳನ್ನು ಪ್ರದರ್ಶಿಸಿದರೆ ಕನ್ನಡ ಸಿನಿಮಾಗಳು ಉಳಿಯುತ್ತವೆ ಎಂದು ಅಭಿಪ್ರಾಯಪಟ್ಟರು.

   ಕಾರ್ಯಕ್ರಮದಲ್ಲಿ ರಾಜ್ಯ ರೆಡ್ ಕ್ರಾಸ್ ಸಂಸ್ಥೆ ಸಭಾಪತಿ ಎಸ್. ನಾಗಣ್ಣ, ಚಲನಚಿತ್ರ ಕಲಾವಿದರಾದ ಸುಂದರ್ ರಾಜ್, ಪ್ರಮೀಳಾ ಜೋಷಾಯ್, ಹನುಮಂತೇಗೌಡ, ರಂಜಿತ್, ಶಿವಲಿಂಗಪ್ರಸಾದ್, ಸಂಕಲನಕಾರ ಸುರೇಶ್ ಅರಸ್, ಛಾಯಾಗ್ರಾಹಕ ನಾಗರಾಜ್ ಅದವಾನಿ, ಸಹ ನಿರ್ದೇಶಕ ನಟರಾಜ್ ಶಿವು, ಗೋಪಿ ಚಿತ್ರಯಾತ್ರೆ ಸಂಚಾಲಕ ಸಮಿತಿಯ ಡಾ. ನಾಭೂಷಣ ಬಗ್ಗನಡು, ಡಾ. ಓ .ನಾಗರಾಜು, ಡಿಸಿಸಿ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಕುಬೇಂದ್ರ ನಾಯ್ಕ್, ರಾಜ್ಯ ಸಹಕಾರಿ ಮಹಾಮಂಡಲದ ಅಧ್ಯಕ್ಷ ಎನ್.ಗಂಗಣ್ಣ, ಕ್ರಿಬ್ಕೋ ಸಂಸ್ಥೆ ನಿರ್ದೇಶಕ ಆರ್.ರಾಜೇಂದ್ರ ಸೇರಿದಂತೆ ಇತರರು ಭಾಗವಹಿಸಿದ್ದರು.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap