ಬೆಂಗಳೂರು:
ಪತಿಯ ಕಿರುಕುಳ ತಾಳದೆ ಹಿನ್ನಲೆ ಗಾಯಕಿ ಸುಶ್ಮಿತಾ ರಾಜೇ (26) ನಾಗರಬಾವಿಯಲ್ಲಿನ ಪತಿಯ ಮನೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ನಾಗರಭಾವಿಯಲ್ಲಿ ನಡೆದಿದೆ.
ಕನ್ನಡ ಚಿತ್ರರಂಗದ ಹಿನ್ನಲೆ ಗಾಯಕಿ ಸುಷ್ಮಿತಾ ರಾಜೇ ಎಂಬಿಎ ಪದವೀಧರೆಯಾಗಿದ್ದಾರೆ. ಸುಗಮ ಸಂಗೀತ, ಚಲನಚಿತ್ರ ಧಾರವಾಹಿಗಳ ಹಿನ್ನಲೆಯ ಗಾಯಕಿಯಾಗಿ ಸುಷ್ಮಿತಾ ರಾಜೇ ಗುರುತಿಸಿಕೊಂಡಿದ್ದ ಇವರು ಶರತ್ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದರು ಎನ್ನಲಾಗಿದೆ.
ಸುಶ್ಮಿತ ನೇಣಿಗೆ ಶರಣಾಗುವ ಮುನ್ನ ಡೆತ್ ನೋಟ್ ಬರೆದು ಸಹೋದರ ಸಚಿನ್ ಗೆ ವಾಟ್ಸ್ ಅಪ್ ಮಾಡಿದ್ದು, ತಪ್ಪದೇ ಅಮ್ಮನಿಗೆ ಇದನ್ನು ತೋರಿಸುವಂತೆ ಹೇಳಿದ್ದಾರೆ.
ಡೆತ್ ನೋಟ್ ನಲ್ಲಿ ಗಂಡ, ಗಂಡನ ಸಂಬಂಧಿಕರು ನಿರಂತರವಾಗಿ ನೀಡುತ್ತಿದ್ದ ದೈಹಿಕ, ಮಾನಸಿಕ ಕಿರುಕುಳ ತನ್ನ ಸಾವಿಗೆ ಕಾರಣ ಎಂದು ಬರೆಯಲಾಗಿದೆ ಎಂದು ತಿಳಿದುಬಂದಿದೆ.
ಸದ್ಯ ಗಂಡ ಶರತ್ ಹಾಗೂ ಆತನ ಮನೆಯವರು ಪರಾರಿಯಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
