ಹುಳಿಯಾರು:
ಹುಳಿಯಾರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸಭೆಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಬಿ.ಆರ್.ಚಂದ್ರಿಕಾ ನಡೆಸಿದರು.
ಈ ಸಭೆಯಲ್ಲಿ ಪ್ರತಿ ಆಸ್ಪತೆಗಳಲ್ಲೂ ದೊರೆಯುವ ಸೌಲಭ್ಯಗಳು, ಸಿಗುವ ಔಷಧಿಗಳು, ಲಭ್ಯವಿರುವ ವೈದ್ಯರ ಬಗ್ಗೆ ಸೂಚನ ಫಲಕ ಹಾಕುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರಲ್ಲದೆ ಆಸ್ಪತ್ರೆಯ ಆವರಣದ ನೈರ್ಮಲ್ಯ ಕಾಪಾಡುವಂತೆಯೂ ಆಸ್ಪತ್ರೆಗೆ ಬರುವ ರೋಗಿಗಳೊಂದಿಗೆ ಸೌಜನ್ಯದಿಂದ ವರ್ತಿಸುವಂತೆಯೂ ತಿಳಿಸಿದರಲ್ಲದೆ ಫಿಲ್ಡ್ ವರ್ಕನಲ್ಲಿರುವ ಎಎನ್‍ಎಂಗಳ ಬಗ್ಗೆ ಸಿಕ್ಕಾಪಟ್ಟೆ ದೂರುಗಳು ಬರುತ್ತಿದ್ದು ಮನೆಮನೆಗೆ ಸರಿಯಾಗಿ ಭೇಟಿ ನೀಡಿ ಆರೋಗ್ಯ ಮಾಹಿತಿ ಕೊಡದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಹುಳಿಯಾರಿನಲ್ಲಿ ಪ್ರತ್ಯೇಕ ಹೆರಿಗೆ ಆಸ್ಪತ್ರೆಯಿದ್ದರೂ ಹೆರಿಗೆಗಳಾಗದಿರುವ ಬಗ್ಗೆ ಗರಂ ಆದ ಡಿಎಚ್‍ಓ ಆಶಾ ಅವರು ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರ ಸಹಕಾರ ಪಡೆದು ಸರ್ಕಾರಿ ಆಸ್ಪತ್ರೆಯಲ್ಲಿ ಸಿಗುವ ಹೆರಿಗೆ ಸೌಲಭ್ಯ, ಇಲ್ಲಿ ಹೆರಿಗೆ ಮಾಡಿಸಿಕೊಂಡರೆ ಸಿಗುವ ಸರ್ಕಾರಿ ಸೌಲಭ್ಯ ಹಾಗೂ ರಾತ್ರಿ ಪಾಳಯದಲ್ಲಿ ನಿತ್ಯ ವೈದ್ಯರು ಲಭ್ಯವಿರುವ ಮಾತಿಗಳನ್ನು ಗರ್ಭಿಣಿಯರಿಗೆ ತಿಳಿಸಿ ಶೇ.99 ರಷ್ಟು ಹೆರಿಗೆಗಳು ಇಲ್ಲೇ ಆಗುವಂತೆ ಮಾಡವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಡಿಟಿಓ ಸನತ್ ಕುಮಾರ್, ಟಿಎಚ್‍ಓ ಡಾ.ರವಿಕುಮಾರ್ 15 ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ