ಕ್ರಿಕೆಟ್ ಗೆ ಗುಡ್ ಬೈ ಹೇಳಿದ ಪ್ರಜ್ಞಾನ್ ಓಜಾ

ನವದೆಹಲಿ :

     ಭಾರತ ಕ್ರಿಕೆಟ್ ತಂಡದ ಎಡಗೈ ಸ್ಪಿನ್ನರ್ ಪ್ರಜ್ಞಾನ್ ಓಜಾ ಅವರು ಎಲ್ಲಾ ಮಾದರಿಯ ಕ್ರಿಕೆಟ್‌ ಗೆ  ನಿವೃತ್ತಿ ಘೋಷಿಸಿದ್ದಾರೆ. ನವೆಂಬರ್ 2018 ರಲ್ಲಿ ಬಿಹಾರದ ಪ್ರಥಮ ದರ್ಜೆ ಪಂದ್ಯ ಓಜಾ ಅವರ ಕೊನೆಯ ಪಂದ್ಯವಾಗಿತ್ತು.  33 ರ ಹರೆಯದ ಓಜಾ ಪ್ರಥಮ ದರ್ಜೆಕ್ರಿಕೆಟ್ ನಲ್ಲಿ  ಹೈದರಾಬಾದ್ ಮತ್ತು ಬಂಗಾಳ ಪರ ಆಡಿದ್ದಾರೆ.

     ಓಜಾ 2008 ರಲ್ಲಿ ಬಾಂಗ್ಲಾದೇಶ ವಿರುದ್ಧದ ಏಷ್ಯಾಕಪ್‌ ಪಂದ್ಯದ ಮೂಲಕ ಕ್ರಿಕೆಟ್ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು. ಅಲ್ಲದೆ ವಿಶ್ವ ಟಿ 20 ಪಂದ್ಯಾವಳಿಯಲ್ಲಿ ಸಹ ಬಾಂಗ್ಲಾ ವಿರುದ್ಧ ಅವರ ಮೊದಲ ಅಂತರಾಷ್ಟ್ರೀಯ ಟಿ 20 ಪಂದ್ಯವಾಗಿತ್ತು. , ಅ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳನ್ನು ಗಳಿಸುವ ಮೂಲಕ ಪಂದ್ಯಶ್ರೇಷ್ಠರೂ ಆಗಿದ್ದರು.

  ಇನ್ನು ಅವರು ತಮ್ಮ ವೃತ್ತಿ ಜೀವನದಲ್ಲಿ ಒಟ್ಟು 18 ಏಕದಿನ ಮತ್ತು ಆರು ಟಿ 20 ಐಗಳನ್ನು ಆಡಿದರೂ ಟೆಸ್ಟ್ ಕ್ರಿಕೆಟ್ ನಲ್ಲಿ ಅವರು ಅಪೂರ್ವ ಸಾಧನೆ ಮಾಡಿದ್ದಾರೆ. 2009 ರಲ್ಲಿ ಶ್ರೀಲಂಕಾ ವಿರುದ್ಧ  ಭಾರತದಲ್ಲಿ ನಡೆದಿದ್ದ ಪಂದ್ಯದಲ್ಲಿ ಪಾದಾರ್ಪಣೆ ಓಜಾ ಅವರು 100 ಕ್ಕೂ ಹೆಚ್ಚು ವಿಕೆಟ್ ಗಳನ್ನು ಪಡೆದಿದ್ದಾರೆ. ಭಾರತದ ಪರವಾಗಿ ಅವರು ಆಡಿದ ಕೊನೆಯ ಪಂಧ್ಯ ವೆಸ್ಟ್ ಇಂಡೀಸ್ ವಿರುದ್ಧವಾಗಿತ್ತು  ಭಾರತದ ಇನ್ನಿಂಗ್ಸ್ ಗೆಲುವಿನಲ್ಲಿ ಅವರು ಒಟ್ಟು ಹತ್ತು ವಿಕೆಟ್ ಗಳನ್ನು ಪಡೆದ್ದರು. ವಿಶೇಷವೆಂದರೆ ಇದುವೇ ಸಚಿನ್ ತೆಂಡೂಲ್ಕರ್ ಅವರ ವಿದಾಯದ ಟೆಸ್ಟ್ ಪಂದ್ಯವಾಗಿತ್ತು.  ಓಜಾ 24 ಟೆಸ್ಟ್ ಪಂದ್ಯಗಳಲ್ಲಿ 113 ವಿಕೆಟ್ ಗಳಿಸಿ ಟೆಸ್ಟ್ ವೃತ್ತಿಜೀವನವನ್ನು ಮುಗಿಸಿದ್ದಾರೆ.

    ಐಪಿಎಲ್‌ನ ಆರಂಭಿಕ ವರ್ಷಗಳಲ್ಲಿ ಅವರು ಯಶಸ್ಸನ್ನು ಕಂಡರು, 2009ರಲ್ಲಿ ಆಗಿನ  ಡೆಕ್ಕನ್ ಚಾರ್ಜರ್ಸ್‌ನೊಂದಿಗೆ  ಗುರುತಿಸಿಕೊಂಡಿದ್ದ ಆಟಗಾರ ಬಳಿಕ ಮುಂಬೈ ಇಂಡಿಯನ್ಸ್‌ನೊಂದಿಗೆ ಪ್ರಶಸ್ತಿ ಗೆದ್ದ ತಂಡದಲ್ಲಿದ್ದರು.  2010 ರ ಆವೃತ್ತಿಯಲ್ಲಿ ಅವರು ಹೆಚ್ಚಿನ ಸಂಖ್ಯೆಯ ವಿಕೆಟ್‌ಗಳನ್ನು ಪಡೆದಿದ್ದಕ್ಕಾಗಿ ಪರ್ಪಲ್ ಕ್ಯಾಪ್ ಗೆದ್ದು ಬೀಗಿದ್ದರು. 2015 ರಲ್ಲಿ ಇವರು ಕಡೆಯ ಬಾರಿಗೆ ಐಪಿಎಲ್  ಪಂದ್ಯವನ್ನಾಡಿದ್ದರು.

“ಭಾರತೀಯ ಕ್ರಿಕೆಟಿಗನಾಗಿದೇಶವನ್ನು ಉನ್ನತ ಮಟ್ಟದಲ್ಲಿ ಪ್ರತಿನಿಧಿಸುವ ಅವಕಾಶ, ನಾನೊಬ್ಬ ಯುವಕನಾಗಿ ನನ್ನ ಕನಸಾಗಿತ್ತು. ನನ್ನವೃತ್ತಿಜೀವನವು ಅನೇಕ ಏರಿಳಿತಗಳಿಗೆ ಸಾಕ್ಷಿಯಾಗಿದೆ. ಕಾಲಾನಂತರದಲ್ಲಿ, ಒಬ್ಬ ಕ್ರೀಡಾಪಟುವಿನ ಪರಂಪರೆ ಅವನ ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಫಲಿತವಾಗಿರುವುದಿಲ್ಲ ಆದರೆ  ನನಗೆ ಸಂಘಟನೆಯು ನೀಡಿರುವ ನಂಬಿಕೆ ಮತ್ತು ಮಾರ್ಗದರ್ಶನ ದೊಡ್ಡರು. ತಂಡದ ಸದಸ್ಯರು, ತರಬೇತುದಾರರು, ತರಬೇತುದಾರರು ಮತ್ತು ಅಭಿಮಾನಿಗಳಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು” ಓಜಾ ಟ್ವಿಟರ್‌ನಲ್ಲಿ ಹಂಚಿಕೊಂಡ ಹೇಳಿಕೆಯಲ್ಲಿ ತಿಳಿಸಿದ್ದಾರೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link