ಈಶ್ವರಿ ವಿದ್ಯಾಲಯದಿಂದ ಉದ್ಭವ ಜ್ಯೋತಿರ್ಲಿಂಗ ದರ್ಶನದ ವ್ಯವಸ್ಥೆ.

ಚಳ್ಳಕೆರೆ

    ಮಹಾಶಿವರಾತ್ರಿ ಉತ್ಸವದ ನಿಮಿತ್ತ ನಗರ ಎಲ್ಲಾ ದೇವಸ್ಥಾನಗಳಲ್ಲಿ ಶಿವನಾಮಸ್ಮರಣೆ ಹಾಗೂ ಪೂಜಾ ಕಾರ್ಯಗಳು ಬರದಿಂದ ಸಾಗಿದ್ದು, ಭಕ್ತರು ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಮಾಡಿಕೊಳ್ಳುವ ಮೂಲಕ ಶಿವರಾತ್ರಿ ಹಬ್ಬವನ್ನು ಸಂಭ್ರಮ ಸಡಗರಗಳಿಂದ ಆಚರಿಸಿದರು. ನಗರದ ಎಲ್ಲಾ ದೇವಸ್ಥಾನಗಳಲ್ಲಿ ಭಕ್ತರು ದೇವರ ದರ್ಶನಕ್ಕೆ ಸರಥಿಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

   ನಗರದ ಬ್ರಹ್ಮ ಕುಮಾರಿ ಈಶ್ವರಿಯ ವಿದ್ಯಾ ನಿಲಯದಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳುವ ಜೊತೆಗೆ ಉದ್ಭವ ಶಿವರ್ಲಿಂಗ ದರ್ಶನ ಕಾರ್ಯಕ್ರಮವನ್ನು ಆಯೋಜಿಸಿದ್ದು, ಇಲ್ಲಿನ ಬಿಇಒ ಕಚೇರಿ ಆವರಣದಲ್ಲಿ ಫೆ.21 ಮತ್ತು 22 ಎರಡು ದಿನಗಳ ಕಾಲ ದಿನಕ್ಕೆ ಐದು ಬಾರಿ ಧ್ವನಿ ಮತ್ತು ಬೆಳಕಿನ ಚೈತನ್ಯ ದೃಶ್ಯದ ಮೂಲಕ ಶಿವಲಿಂಗ ದರ್ಶನದ ವ್ಯವಸ್ಥೆ ಮಾಡಿರುತ್ತಾರೆ.

   ಶಿವರಾತ್ರಿ ಹಬ್ಬದ ಸಂದೇಶಗಳನ್ನು ಸಾರಲು ಈಶ್ವರಿ ವಿದ್ಯಾಲಯ ಇಂದು ಹಲವಾರು ಲಿಂಗಗಳನ್ನು ಹೊತ್ತ ವಾಹನಗಳ ಮೆರವಣಿಗೆಯನ್ನು ಹಮ್ಮಿಕೊಂಡಿದ್ದು, ಮೆರವಣಿಗೆ ಇಲ್ಲಿನ ಈಶ್ವರಿ ವಿದ್ಯಾಲಯದಿಂದ ಪ್ರಾರಂಭವಾಗಿ ಚಿತ್ರದುರ್ಗ ರಸ್ತೆ, ನೆಹರೂ ವೃತ್ತ, ಬಳ್ಳಾರಿ ರಸ್ತೆ, ಪಾದಗಟ್ಟೆ, ಪಾವಗಡ ರಸ್ತೆ ಮೂಲಕ ಬೆಂಗಳೂರು ರಸ್ತೆಗೆ ಮೆರವಣಿಗೆ ಸಾಗಿದ್ದು, ದಾರಿಯುದ್ದಕ್ಕೂ ನೂರಾರು ಭಕ್ತರು ಕೈಯಲ್ಲಿ ಬಲೂನ್ ಹಿಡಿದು ಈಶ್ವರಿ ವಿದ್ಯಾಲಯದ ಸಂದೇಶ ಪ್ರತಿಯನ್ನು ಬಲೂನ್‍ಗೆ ಕಟ್ಟಿ ನಂತರ ಹಾರಿಬಿಟ್ಟರು. ಧಾರ್ಮಿಕ ಜಾಗೃತಿ ಹಿನ್ನೆಲೆಯಲ್ಲಿ ಹಮ್ಮಿಕೊಂಡ ಈ ಕಾರ್ಯಕ್ರಮ ವಿಶೇಷವಾಗಿತ್ತು.

   ಪ್ರತಿ ವರ್ಷದಂತೆ ಈ ವರ್ಷವೂ ದೊಡ್ಡೇರಿ ಕನ್ನೇಶ್ವರ ಆಶ್ರಮದ ಶ್ರೀದತ್ತಾವಧೂತ ಮಲ್ಲಪ್ಪ ಸ್ವಾಮೀಜಿಯವರ ನೇತೃತ್ವದಲ್ಲಿ ಶಿವರಾತ್ರಿ ಹಬ್ಬವನ್ನು ಸಾವಿರ ಸಂಖ್ಯೆಯ ಭಕ್ತರ ಸಮಕ್ಷಮದಲ್ಲಿ ಅತ್ಯಂತ ವೈಭವದಿಂದ ಆಚರಿಸಲಾಯಿತು. ಕರ್ನಾಟಕದ ರಾಜ್ಯ ವಿವಿಧ ಭಾಗಗಳಿಂದ ಬಂದಿದ್ದ ಭಕ್ತರು ಆಶ್ರಮದಲ್ಲಿ ಈಶ್ವರ ಲಿಂಗ ಪೂಜೆ ಸಂದರ್ಭ ಹಾಗೂ ಮೆರವಣಿಗೆಯಲ್ಲಿ ಭಕ್ತಿ ಭಾವದಿಂದ ಕುಣಿಯತೊಡಗಿದರು. ಆಶ್ರಮದ ಮೂಲೆ ಮೂಲೆಯಲ್ಲಿಯೂ ಶಿವನಾಮ ಸ್ಮರಣೆ ಎಲ್ಲರಲ್ಲೂ ಮೂಡಿಬಂತು.

  ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ವರ್ಷ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ನಗರದ ವೀರಭದ್ರಸ್ವಾಮಿ ದೇವಸ್ಥಾನ ಆವರಣ, ಸೂಜಿಮಲ್ಲೇಶ್ವರ ಸ್ವಾಮಿ ದೇವಸ್ಥಾನ, ಶ್ರೀರಾಮಮಂದಿರ, ಮದಕರಿನಗರ, ದೊಡ್ಡೇರಿ ಗೋಕರ್ಣೆಶ್ವರ, ನರಹರಿನಗರ ಶ್ರೀನರಹರಿ ಸೇವಾ ಪ್ರತಿಷ್ಠಾನದ ವತಿಯಿಂದ ಮಹಾ ಶಿವರಾತ್ರಿಯನ್ನು ಪೂಜೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಳೊಂದಿಗೆ ಆಚರಿಸಲಾಯಿತು.

  ತ್ಯಾಗರಾಜ ನಗರದ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದಲ್ಲೂ ಸಹ ನೂರಾರು ಸಂಖ್ಯೆಯ ಶಿವಭಕ್ತರ ಸಮಕ್ಷಮದಲ್ಲಿ ಶ್ರೀಸ್ವಾಮಿಗೆ ಪೂಜೆ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ತಾಲ್ಲೂಕಿನ ಲಕ್ಷ್ಮಿಪುರದ ಶ್ರೀಭವಾನಿ ಶಂಕರ ದೇವಸ್ಥಾನದಲ್ಲೂ ಸಹ ಶಿವರಾತ್ರಿ ಪ್ರಯುಕ್ತ ಹೋಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತು. ಗ್ರಾಮದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ವೇದಬ್ರಹ್ಮ ನಾಗಶಯನಗೌತಮ್ ಮತ್ತು ತಂಡ ಪೂಜಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಡಾ.ಅನಂತರಾಮ್ ಗೌತಮ್ ಶಿವರಾತ್ರಿ ಮಹಿಮೆ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap