ಬೆಂಗಳೂರು:
ರಾಜ್ಯದಲ್ಲಿ ಖಾಸಗಿ ಶಾಲೆಗಳು ನಿರ್ಮಿಸಿಕೊಂಡಿರುವ ಅದರದ್ದೆ ಆದ ನಿಯಮಾವಳಿಗಳಿಂದ ಚಿಕ್ಕ ಮಕ್ಕಳಿಗೆ ಆಗುತ್ತಿರುವ ತೊಂದರೆ ಅಷ್ಟಿಷ್ಟಲ್ಲಾ ಅಗಿನ್ನು ಎಲ್ ಕೆ ಜಿ ಗೆ ಸೇರಲು ಕೂಡ ಮಗುವಿಗೆ ಇಂಟರ್ವಿವ್ ನೆಪದಲ್ಲಿ ಮಕ್ಕಳಿಗೆ ಮಾನಸಿಕ ಹಿಂಸೆ ನೀಡುತ್ತಿರುವುದು ತಡವಾಗಿಯಾದರೂ ಬೆಳಕಿಗೆ ಬಂದಿದೆ.
ಇನ್ನು ಸರ್ಕಾರ ವಿಧಿಸಿರುವ ಕಾನೂನಾಗಲಿ ,ನಿಯಮವಾಗಲಿ ಯಾವುದು ಸಹ ಇವರಿಗೆ ಲೆಕ್ಕಕ್ಕೆ ಬರುವುದಿಲ್ಲಾ ಏಕೆಂದರೆ ಇವರಿಗೆ ಬೇಕಾಗಿರುವುದು ದುಡ್ಡಷ್ಟೆ ಎಂದು ನೊಂದ ಪೋಷಕರು ತಮ್ಮ ಅಳಲನ್ನು ತೋಡಿಕೊಂದ್ದಾರೆ ,ಇನ್ನಾದರೂ ರಾಜ್ಯ ಸರ್ಕಾರ ಇದರ ಕಡೆ ಗಮನಕೊಡಬೇಕೆಂದು ಪೋಷಕರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಸಂದರ್ಶನದಲ್ಲಿ ಅವರು ಕೇಳುವ ಪ್ರಶ್ನಾವಳಿ ಹೀಗಿದೆ…!?
ನಾಲ್ಕೂವರೆ ವರ್ಷದ ಪುಟ್ಟ ಮಗುವನ್ನು ತಾಯಿ ನಗರದ ಪ್ರತಿಷ್ಠಿತ ಆಂಗ್ಲಮಾಧ್ಯಮ ಶಾಲೆಗೆ ಸೇರಿಸಲೆಂದು ಕರೆದುಕೊಂಡು ಹೋದರು. ಆಗ ಶಾಲೆಯ ಪ್ರಾಂಶುಪಾಲರು ಮಗುವನ್ನು ಸುಮಾರು ಮುಕ್ಕಾಲು ಗಂಟೆ ಕಾಲ ನಿರಂತರ ಸಂದರ್ಶನ ನಡೆಸಿದ ಘಟನೆ ನಡೆದಿದೆ.
ಇಂಗ್ಲಿಷ್ ಅಕ್ಷರಗಳು, ಸಂಖ್ಯೆಗಳು, ಆಕಾರಗಳು, ಬಣ್ಣಗಳು, ಪ್ರಾಣಿಗಳು ಇತ್ಯಾದಿಗಳ ಗುರುತು ಹಿಡಿಯುವಂತೆ ನಿರಂತರವಾಗಿ ಪ್ರಾಂಶುಪಾಲರು ಕೇಳುತ್ತಾ ಹೋಗುತ್ತಾರೆ .ಚಿಕ್ಕ ಮಕ್ಕಳಿಗೆ ಅಷ್ಟೊಂದು ಸಂದರ್ಶನ ಮಾಡಿದ್ದು ನೋಡಿ ಮಗುವಿನ ತಾಯಿ ರಚನಾ ಕಕ್ಕಾಬಿಕ್ಕಿಯಾದರು. ಸಾಮಾನ್ಯವಾಗಿ ನಮ್ಮ ಮಗ ಎಲ್ಲರ ಜೊತೆ ಮಾತನಾಡುತ್ತಾನೆ. ಆದರೆ ಶಾಲೆಗೆ ಹೋದಾಗ ಅಲ್ಲಿ ಭಯದಿಂದ ಅವನಿಗೆ ಮಾತೇ ಹೊರಬರಲಿಲ್ಲ.ಸಂದರ್ಶನ ಮುಗಿದ ಮೇಲೆ ಹೊರಗೆ ಕಾಯುತ್ತಿರಿ, ಆಮೇಲೆ ಪ್ರತ್ಯೇಕವಾಗಿ ಮಾತನಾಡುವುದಿದೆ ಎಂದರು ಎಂದು ರಚನಾ ಹೇಳುತ್ತಾರೆ.
ನಗರ ಪ್ರದೇಶಗಳಲ್ಲಿ ಶಿಕ್ಷಣ ವಾಣಿಜ್ಯೀಕರಣವಾಗುತ್ತಿದೆ ಎಂದು ಕೇಳಿಬರುತ್ತಿರುವ ಆರೋಪಗಳ ಮಧ್ಯೆ ಇಂದು ಮಕ್ಕಳು ಮೂರು ವರ್ಷಕ್ಕೆ ನರ್ಸರಿ ಶಾಲೆ ಮೆಟ್ಟಿಲು ಹತ್ತುವಾಗಲೇ ಎಲ್ಲವನ್ನೂ ತಿಳಿದುಕೊಂಡಿರಬೇಕೆಂದು ಶಾಲೆಗಳಲ್ಲಿ ಬಯಸುತ್ತಾರೆ. ಪೋಷಕರು ಎಲ್ಲ ಹೇಳಿಕೊಟ್ಟು ಮಕ್ಕಳನ್ನು ತಯಾರು ಮಾಡಿರಬೇಕು ಎಂದು ಬಯಸುತ್ತಾರೆ. ಇದು 2009ರ ಮಕ್ಕಳ ಮುಕ್ತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆಗೆ ವಿರುದ್ಧವಾಗಿದೆ ಎಂಬ ಮಾತು ಕೇಳಿಬರುತ್ತಿದೆ.
ಶಿಕ್ಷಣ ಹಕ್ಕು ಕಾಯ್ದೆ ಪ್ರಕಾರ ಮಗುವಿನ ಶಾಲಾ ಪ್ರವೇಶಾತಿ ವೇಳೆ ಸಂದರ್ಶನ ಮಾಡುವಂತಿಲ್ಲ. ಒಂದು ವೇಳೆ ಮಾಡಿ ಕಾನೂನು ಉಲ್ಲಂಘಿಸಿದರೆ ದಂಡ ವಿಧಿಸಲಾಗುತ್ತದೆ. ಮಕ್ಕಳ ಮೇಲೆ ತಾರತಮ್ಯ ತೋರಿಸದೆ, ಪಾರದರ್ಶಕವಾಗಿ ಶಾಲೆಗಳು ಮಕ್ಕಳ ಪ್ರವೇಶ ಪ್ರಕ್ರಿಯೆಯನ್ನು ಮಾಡಬೇಕು. ಮಕ್ಕಳು ಮತ್ತು ಪೋಷಕರನ್ನು ಸಂದರ್ಶನ ಮಾಡಿ ಅದರ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ಮಾಡಬಾರದು ಎಂದು ಹೇಳುತ್ತದೆ.
ಈಗ ಮುಂದಿನ ಶೈಕ್ಷಣಿಕ ವರ್ಷಕ್ಕೆ ಶಾಲೆಗಳಲ್ಲಿ ಪ್ರವೇಶ ಪ್ರಕ್ರಿಯೆ ಸಮಯ. ಇಂತಹ ಸಮಯದಲ್ಲಿ ಶಾಲೆಗಳು ನೀತಿ, ನಿಯಮಗಳನ್ನು ಹೆಚ್ಚಾಗಿ ಉಲ್ಲಂಘಿಸುತ್ತವೆ. ”ನಮ್ಮ ಬಳಿ ಶಾಲೆಯಲ್ಲಿ ಸಂದರ್ಶನ ಮಾಡುವಾಗ ಜಾತಿ, ಆದಾಯ, ಶಿಕ್ಷಣದ ಬಗ್ಗೆ ಕೇಳಿದರು.ಮತ್ತೊಬ್ಬ ಪೋಷಕರ ಮಗುವಿನಲ್ಲಿ ಪ್ರಶ್ನೆ ಕೇಳಿದಾಗ ಉತ್ತರಿಸದ್ದಕ್ಕೆ ಏನಾದರೂ ಸಮಸ್ಯೆಯಿದೆಯೇ ಎಂದು ಕೇಳಿದ್ದರಂತೆ. ಕಿವಿ, ಕಣ್ಣು, ಮಾತು ಎಲ್ಲವೂ ಸರಿಯಾಗಿ ಬರುತ್ತದೆ ಎಂದು ಸರ್ಟಿಫಿಕೇಟ್ ತನ್ನಿ ಎಂದರಂತೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ