ಬೆಂಗಳೂರು :
ಬೈಕ್ ಶೋ ರೂಂಗೆ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿ, ಕಟ್ಟಡದ ಒಳಗಿದ್ದ ಪೀಠೋಪಕರಣಗಳು, ದಾಖಲಾತಿಗಳು ಸುಟ್ಟು ಕರಕಲಾಗಿರುವ ಘಟನೆ ನಗರದ ಇನ್ ಫ್ಯಾಂಟ್ರಿ ರಸ್ತೆಯಲ್ಲಿರುವಂತ ಜ್ಯೋತಿ ಕಾಂಫ್ಲೆಕ್ಸ್ ನಲ್ಲಿ ನಡೆದಿದೆ.
ಅಗ್ನಿಯ ಕೆನ್ನಾಲಿಗೆಗೆ ತಗುಲಿ ಶೋ ರೂಂನಲ್ಲಿದ್ದಂತ ಹೊಸ ಬೈಕ್ ಗಳು ಸುಟ್ಟು ಕರಕಲಾಗಿದ್ದು, ಕಾಂಫ್ಲೆಕ್ಸ್ ನಲ್ಲಿದ್ದ ಅನೇಕ ಅಂಗಡಿಗಳಿಗೆ ಬೆಂಕಿ ತಗುಲಿದೆ. ಬೆಂಕಿ ಕಂಡ ಕೂಡಲೇ ಕಟ್ಟಡದ ಒಳಗಿದ್ದ ಎಲ್ಲರೂ ಗಾಬರಿಯಿಂದ ಹೊರ ಓಡಿ ಬಂದಿದ್ದಾರೆ.
ಶೋರೂಮ್‌ನಲ್ಲಿ ಎಲೆಕ್ಟ್ರಿಕ್ ವಾಹನವನ್ನು ಚಾರ್ಜ್ ಮಾಡಲಾಗುತ್ತಿತ್ತು. ಓವರ್ ಚಾರ್ಜ್ ಆಗಿ ಈ ಘಟನೆ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.
ಐದಾರು ಮಹಡಿ ಕಟ್ಟಡ ಇದಾಗಿದ್ದು, ಸ್ಥಳಕ್ಕೆ ಆಗಮಿಸಿರುವ 2 ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ.
ಕಳೆದ ಹಲವು ದಿನಗಳ ಹಿಂದಷ್ಟೇ ನಗರದಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಈ ಬಳಿಕ ಮತ್ತೆ ಇಂದು ಸಿಲಿಕಾನ್ ಸಿಟಿಯಲ್ಲಿ ಬೆಂಕಿ ಅವಘಡ ಸಂಭವಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ