ಮಧುಗಿರಿ
ಮಧುಗಿರಿಯ ತಹಸೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಎಲ್. ಎಂ. ನಂದೀಶ್ ಮತ್ತೆ ವರ್ಗಾವಣೆಯಾಗಿದ್ದಾರೆ. ಇವರು ಬಹಳ ವಿವಾದಕ್ಕೀಡಾಗಿ ಹಲವು ಸಮಸ್ಯೆಗಳನ್ನು ಮೈ ಮೇಲೆ ಎಳೆದು ಕೊಂಡು ಸಾರ್ವಜನಿಕರ ನಗೆ ಪಾಟಲಿಗೆ ಗುರಿಯಾಗಿದ್ದರು. ಇವರ ಕರ್ತವ್ಯ ನಿಷ್ಟೆಯಿಂದ ಸರ್ಕಾರ ಇವರನ್ನು ಎರಡು ಬಾರಿ ವರ್ಗಾವಣೆ ಮಾಡಿತ್ತಾದರೂ ನ್ಯಾಯಾಲಯದ ಮೊರೆ ಹೋಗಿ ಮಧುಗಿರಿಯ ತಾಲ್ಲೂಕು ದಂಡಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಕಚೇರಿಯಲ್ಲಿ ಶಿಸ್ತು ಮತ್ತು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸದೆ ರೈತಾಪಿ ಹಾಗೂ ಬಡ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ಈಗ ಬಂದಿರುವ ನೂತನ ತಹಸೀಲ್ದಾರ್ ಡಾ. ಜಿ. ವಿಶ್ವನಾಥ್ ಸಾರ್ವಜನಿಕರ ಮತ್ತು ರೈತರ ಅನುಕೂಲತೆಗೆ ಸ್ಪಂದಿಸುವರೆ ಎಂಬುದನ್ನು ಕಾದು ನೋಡಬೇಕಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ