ಸವಲತ್ತು ಸದ್ಬಳಕೆ ಮಾಡಿಕೊಳ್ಳಿ: ವೆಂಕಟರಮಣಪ್ಪ

ಪಾವಗಡ :

    ಸರ್ಕಾರಿ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಶೈಕ್ಷಣಿಕ ಪ್ರಗತಿ ಸಾಧಿಸಬೇಕೆಂದು ಶಾಸಕ ವೆಂಕಟರಮಣಪ್ಪ ತಿಳಿಸಿದರು .ಪಟ್ಟಣದ ಶ್ರೀಮತಿ ಶ್ರೀ ವೈ.ಇ ರಂಗಯ್ಯ ಶೆಟ್ಟಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2019-20ನೇ ಸಾಲಿನ ರಾಜ್ಯ ನೀಡುವ ಉಚಿತ ಲ್ಯಾಪ್‍ಟಾಪ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಇಂದು ರಾಜ್ಯ ಸರ್ಕಾರ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹಲವಾರು ಸೌಲಭ್ಯಗಳನ್ನು ಕಲ್ಪಿಸುತ್ತಿದೆ ಇವುಗಳ ಸದ್ಬಳಕೆಯ ಜೋತೆಗೆ ನಿಮ್ಮ ಶೈಕ್ಷಣಿಕ ಪ್ರಗತಿಯು ಕೂಡ ಹೆಚ್ಚಾಗಿ ಪ್ರತಿ ವಿದ್ಯಾರ್ಥಿಯ ಉನ್ನತ ಸ್ಥಾನ ಅಲಂಕರಿಸುವಂತಾಗಬೇಕೆಂದರು.

    1984 ರಲ್ಲಿ ಇದೇ ಕಾಲೇಜ್ ನಿರ್ಮಾಣಕ್ಕಾಗಿ ರಂಗಯ್ಯ ಶೆಟ್ಟಿ 5 ಎಕರೆ ಜಮೀನು ನೀಡಿದಾನ ಮಾಡಿದ್ದು ಪರಿಣಾಮ ಇಂದು ಇಲ್ಲಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ಸಾಧ್ಯವಾಯಿತು, ಕಾಲೇಜಿನಲ್ಲಿ ಸಭಾಂಗಣ ನಿರ್ಮಾಣಕ್ಕೆ 10 ಲಕ್ಷ ಶಾಸಕರ ನಿಧಿಯಿಂದ ನೀಡುತ್ತೆನೆ ಹಾಗೂ ಇಲ್ಲಿನ ಶೂದ್ದಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಭದ್ರಮೇಲ್ದಂಡೆ ಯೋಜನೆಯ ನೀರು ಕಾಲೇಜಿಗೂ ನೀಡಲಿದ್ದೆವೆ ಆದರೆ ಕಾಲೇಜಿಲ್ಲಿಯೂ ಕೂಡ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ವಿದ್ಯಾರ್ಥಿಗಳ ಮೇಲೆ ಹೆಚ್ಚು ಗಮನಹರಿಸಿ ಉತ್ತಮ ಪಲಿತಾಂಶ ಬರುವ ನಿಟ್ಟಿನಲ್ಲಿ ಶ್ರಮವಹಿಸಿ ಎಂದರು.

    ಪ್ರಾಂಶುಪಾಲರಾದ ರಾಧಕೃಷ್ಣ ಮಾತನಾಡಿ ಪಾವಗಡ ತಾಲೂಕು ಒಂದು ಶಾಶ್ವತ ಬರಪೀಡಿತ ಪ್ರದೇಶವಾಗಿದ್ದು ಇತರೆ ಜಿಲ್ಲೆ ಮತ್ತು ತಾಲೂಕುಗಳಿಗೆ ಹೊಲಿಕೆ ಮಾಡಿದರೆ ನಮ್ಮ ಕಾಲೇಜ್ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಉತ್ತಮವಾಗಿದ್ದು ವಿದ್ಯಾರ್ಥಿಗಳಿಗೆ ಆಗತ್ಯ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಶುದ್ದಕುಡಿಯುವ ನೀರು, ಸಂಭಾಗಣ ಹಾಗೂ ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳಿಗೆ ಯಾವುದೇ ಸಂಘಸಂಸ್ಥೆಯಿಂದಾದರು ಮದ್ಯಾಹ್ನದ ಉಪಹಾರ ವ್ಯವಸ್ಥೆ ಕಲ್ಪಿಸುವಂತೆ ಶಾಸಕರಲ್ಲಿ ಮನವಿ ಮಾಡಿದರು.ಈ ಸಂದರ್ಭದಲ್ಲಿ ಮುಖಂಡರಾದ ಎ.ಶಂಕರರೆಡ್ಡಿ, ಉಪನ್ಯಾಸಕರಾದ ತಿಮ್ಮರಾಜು, ಶಶಿಧರ್, ಧನುಂಜಯ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

 

Recent Articles

spot_img

Related Stories

Share via
Copy link
Powered by Social Snap