ಬೆಂಗಳೂರು
ಟೌನ್ ಹಾಲ್ ಎದುರು ಇನ್ನು ಮುಂದೆ ಯಾವುದೇ ರೀತಿಯ ಪ್ರತಿಭಟನೆ ಮಾಡಲು ಅವಕಾಶವಿಲ್ಲ ಎಂದು ಬಿಬಿಎಂಪಿ ಮೇಯರ್ ಎಂ. ಗೌತಮ್ ಕುಮಾರ್ ಆದೇಶ ಹೊರಡಿಸಿದ್ದಾರೆ ಟೌನ್ ಹಾಲ್ ಎದುರು ಪ್ರತಿಭಟನೆ ನಡೆಸುವುದರಿಂದ ಟೌನ್ ಹಾಲ್ ಒಳಗೆ ನಡೆಯುವ ಕಾರ್ಯಕ್ರಮಗಳಿಗೆ ತೊಂದರೆಯಾಗುತ್ತದೆ ,ಮತ್ತು ಅಲ್ಲಿ ಯಾವುದೇ ಕಾರ್ಯಕ್ರಮಗಳು ನಡೆಯದಂತಾಗುತ್ತದೆ ಆದ್ದರಿಂದ ಟೌನ್ ಹಾಲ್ ಎದುರು ಪ್ರತಿಭಟನೆಗೆ ಅವಾಶವಿರುವುದಿಲ್ಲಾ ಎಂದಿದ್ದಾರೆ.
ಸಾಮಾನ್ಯವಾಗಿ ಎಲ್ಲಾ ಪ್ರತಿಭಟನೆಗಳು ಫ್ರೀಡಂ ಪಾರ್ಕ್ ಅಥವಾ ಟೌನ್ ಹಾಲ್ ಎದುರೇ ನಡೆಯುತ್ತಿವೆ ಏಕೆಂದರೆ ಶಕ್ತಿ ಕೇಂದ್ರ ವಿಧಾನ ಸೌಧಕ್ಕೆ ಹತ್ತಿರ ವಿರುವುದು ಕೇವಲ ಇವೆರಡು ಮಾತ್ರ. ಆದರೆ ಇನ್ನುಮುಂದೆ ಟೌನ್ ಹಾಲ್ ಎದುರು ಪ್ರತಿಭಟನೆಗೆ ಅವಕಾಶ ಕೊಡಬಾರದು ಎಂದು ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಮತ್ತು ಇದರ ಪ್ರತಿಯನ್ನು ಪೊಲೀಸ್ ಆಯುಕ್ತರಿಗೂ ನೀಡಲಾಗಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
