ಹೊಸದಿಲ್ಲಿ:
ನಮ್ಮ ದೇಶದ ಪ್ರಧಾನ ಮಂತ್ರಿಯವರು ಕಳೆದ ಐದು ವರ್ಷಗಳ ಅವಧಿಯಲ್ಲಿ ವಿದೇಶ ಭೇಟಿಗಳಿಗಾಗಿ ಖರ್ಚಾದ ಮೊತ್ತ ೆಷ್ಟು ಗೊತ್ತೇ…? ಕಳೆದ ಐದು ವರ್ಷದ ಅವಧಿಯಲ್ಲಿ ಮೋದಿ ವಿದೇಶ ಪ್ರವಾಸಕ್ಕಾಗಿ 446.52 ಕೋಟಿ ರೂ. ವೆಚ್ಚವಾಗಿದೆ ಎಂದು ಲೋಕಸಭೆಗೆ ವಿದೇಶಾಂಗ ಸಚಿವಾಲಯದ ಸಹಾಯಕ ಸಚಿವ ವಿ.ಮುರಳೀಧರನ್ ಮಾಹಿತಿ ನೀಡಿದ್ದಾರೆ. ಈ ಮೊತ್ತದಲ್ಲಿ ಅವರ ವಿಶೇಷ ವಿಮಾನದ ವೆಚ್ಚವೂ ಸೇರಿದೆ ಎಂದಿದ್ದಾರೆ.
ಅವರು ನೀಡಿದ ಮಾಹಿತಿ ಪ್ರಕಾರ, 2015-16ರಲ್ಲಿ 121.85 ಕೋಟಿ ರೂ., 78.52 ಕೋಟಿ ರೂ. 2016-17ರಲ್ಲಿ, 2017-18ರಲ್ಲಿ 99.90 ಕೋಟಿ ರೂ., 2018-19ರಲ್ಲಿ 100.02 ಕೋಟಿ ರೂ. ಸೇರಿದೆ. 2019-20ರಲ್ಲಿ 46.23 ಕೋಟಿ ರೂ. ವೆಚ್ಚವಾಗಿದೆ ಎಂದು ತಿಳಿಸಿದ್ದಾರೆ. ಸಚಿವರು ಒಟ್ಟಾರೆ ಖರ್ಚಿನ ಮಾಹಿತಿ ನೀಡಿದ್ದರೂ, ಯಾವ ಯಾವ ಕಾರಣಕ್ಕೆ ಅದನ್ನು ಮಾಡಲಾಗಿದೆ ಎಂದು ತಿಳಿಸಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
