ನವದೆಹಲಿ:
ಜಾಗತಿಕ ಮತ್ತು ದೇಶೀ ಷೇರು ಮಾರುಕಟ್ಟೆಗೂ ಸಹ ಡೆಡ್ಲಿ ಕೊರೊನಾ ವೈರಸ್ ಭೀತಿ ಕಾಡಲು ಶುರುವಾಗಿದ್ದು ಮುಂಬೈ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸಾವಿರದ 672.09 ಅಂಕ ಕುಸಿತ ಕಂಡುಬಂದು 34 ,025.31ರಲ್ಲಿ ವಹಿವಾಟು ನಡೆಸಿತು. ನಿಫ್ಟಿ 490.40 ಅಂಕ ಕುಸಿತ ಕಂಡು 9 , 968ರಲ್ಲಿ ವಹಿವಾಟು ನಡೆಸಿತು. 2018ರ ಮಾರ್ಚ್ 26ರ ನಂತರ ನಿಫ್ಟಿ 10 ಸಾವಿರದ ಕೆಳಗೆ ವಹಿವಾಟು ನಡೆಸಿರುವುದು ಇದೇ ಮೊದಲು.
ಇಂದಿನ ವಹಿವಾಟುಗಳಲ್ಲಿ ಇದುವರೆಗೆ 87 ಷೇರುಗಳ ಸೂಚ್ಯಂಕ ಏರಿಕೆ ಕಂಡು 924 ಕುಸಿತ ಕಂಡುಬಂತು.21 ಷೇರುಗಳ ಸಂವೇದಿ ಸೂಚ್ಯಂಕ ಬದಲಾಗಲಿಲ್ಲ. ಡಾಲರ್ ಎದುರು ರೂಪಾಯಿ ಮೌಲ್ಯ 61 ಪೈಸೆ ಇಳಿಕೆಯಾಗಿ 74 .25ಕ್ಕೆ ತಲುಪಿದೆ.ಎಸ್ ಅಂಡ್ ಪಿ ಸೆನ್ಸೆಕ್ಸ್ 2 ,707.39 ಅಂಕಗಳಷ್ಟು ಕುಸಿತ ಕಂಡುಬಂದು ಇಂದು ಬೆಳಗ್ಗೆ 32 ,990ರಲ್ಲಿ ವಹಿವಾಟು ನಡೆಸಿತು.
ಇತ್ತೀಚಿನ ವರದಿಯಂತೆ ಷೇರು ವಹಿವಾಟಿನಲ್ಲಿ ಸೆನ್ಸೆಕ್ಸ್ 2477 ಅಂಕ ಕುಸಿತ ಕಂಡುಬಂದು 33,174ರಲ್ಲಿ ನಿಫ್ಟಿ 756 ಅಂಕ ಕುಸಿತ ಕಂಡುಬಂದು 9,702ರಲ್ಲಿ ವಹಿವಾಟು ನಡೆಸತಿದೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ