ಕೊರೋನ‌ ವೈರಸ್ ಗೆ ವ್ಯಾಕ್ಸಿನ್ ಕಂಡುಹಿಡಿಯೋ ತಂಡದಲ್ಲಿ‌ ಕನ್ನಡಿಗ!!

ಹಾಸನ :

     ಕೊರೋನ‌ ವೈರಸ್ ಗೆ ವ್ಯಾಕ್ಸಿನ್ ಕಂಡುಹಿಡಿಯೋ ತಂಡದಲ್ಲಿ‌ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ತಾಲ್ಲೂಕಿನ ಕನ್ನಡಿಗ ಇದ್ದಾರೆ.

    ಹೌದು, ವಿಶ್ವ ಸಂಸ್ಥೆ ಯುರೋಪ್ ರಾಷ್ಟ್ರಗಳು ಒಗ್ಗೂಡಿ ಕೊರೋನ ವ್ಯಾಕ್ಸಿನ್ ಕಂಡು ಹಿಡಿಯಲು ಹತ್ತು ತಂಡ ರಚಿಸಿದ್ದು, ಯುರೋಪಿಯನ್ ಟಾಸ್ಕ್ ಫೋರ್ಸ್ ಫಾರ್ ಕೊರೊನಾ ವೈರಸ್ ಈ ತಂಡದಲ್ಲಿ ಕನ್ನಡಿಗ ಮಹದೇಶ ಪ್ರಸಾದ್ ಸ್ಥಾನ ಪಡೆದುಕೊಂಡಿದ್ದಾರೆ.

     ಜರ್ಮನಿಯಲ್ಲಿ ವಿಜ್ಞಾನಿಯಾಗಿದ್ದ ಮಹದೇಶ ಪ್ರಸಾದ್, ಯುರೋಪಿಯನ್ ಟಾಸ್ಕ್ ಫೋರ್ಸ್ ಫಾರ್ ಕೊರೊನ ವೈರಸ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಒಂದು ವರ್ಷದಿಂದ ಸಂಶೋಧನೆ ಸಂಬಂಧ ಬೆಲ್ಜಿಯಂನಲ್ಲಿ ನೆಲೆಸಿರೋ ಮಹದೇಶ್ ಪ್ರಸಾದ್, ವಿದೇಶದಲ್ಲಿರೋ‌ ವಿಜ್ಞಾನಿಗಳು ‌ಹಿಂದಿರುಗಿ ಎಂಬ ಪ್ರದಾನಿ ಕರೆ ಮೇರೆಗೆ ಭಾರತಕ್ಕೆ ಮರಳಿದ್ದರು.

     ಮೈಸೂರು ವಿಶ್ವವಿದ್ಯಾಲಯದ ಇತಿಹಾಸದಲ್ಲಿಯೇ ಅತ್ಯಂತ ಕಡಿಮೆ ಅವಧಿಯಲ್ಲಿ ಬಯೋಕೆಮಿಸ್ಟ್ರಿ ಪಿಹೆಚ್‍ಡಿ ಸ್ನಾತಕ ಪದವಿಗಳಿಸಿದ ಮೊಟ್ಟ ಮೊದಲ ಕಿರಿಯ ಎಂಬ ಹೆಗ್ಗಳಿಕೆ ಡಾ. ಮಹದೇಶ್ ಪ್ರಸಾದ್ ಅವರಿಗಿದೆ. ಕಿರಿಯ ವಯಸ್ಸಿನಲ್ಲಿಯೇ ಸಾಧನೆಗಾಗಿ ಸತತ 5 ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪುರಸ್ಕಾರಗಳನ್ನು ಮತ್ತು ಗೌರವಗಳನ್ನು ಪಡೆದ ಮೊದಲ ಕಿರಿಯ ವಿಜ್ಞಾನಿ ಎಂಬ ಹೆಗ್ಗಳಿಕೆಗೆ ಮಹದೇಶ್ ಪಾತ್ರರಾಗಿದ್ದಾರೆ.

     ಒಟ್ಟಿನಲ್ಲಿ ಮಾರಕ ಕೊರೊನಾ ವೈರಸ್ ನಿಂದ ಮುಕ್ತಿ ಪಡೆಯಲು ಔಷಧಿ ಕಂಡುಹಿಡಿಯುವ ತಂಡದಲ್ಲಿ ನಮ್ಮ  ಕನ್ನಡಿಗ ಮಹದೇಶ ಪ್ರಸಾದ್ ಇರುವುದು ಹೆಮ್ಮೆಯ ವಿಷಯವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link