ವಿಧಾನಸೌಧಕ್ಕೆ ಸಾರ್ವಜನಿಕರ ಭೇಟಿಗೆ ಮಧ್ಯಾಹ್ನ 3 ಗಂಟೆ ನಂತರವೇ ಅವಕಾಶ!!

ಬೆಂಗಳೂರು :

     ವಿಧಾನಸೌಧಕ್ಕೆ ಸಾರ್ವಜನಿಕರ ಭೇಟಿಗೂ ನಿರ್ಬಂಧ ವಿಧಿಸಿರುವ ಸರ್ಕಾರ, ಸಾರ್ವಜನಿಕರ ಪ್ರವೇಶಕ್ಕೆ ಮಧ್ಯಾಹ್ನ 3 ಗಂಟೆಯ ನಂತ್ರ ಮಾತ್ರವೇ ಅವಕಾಶ ನೀಡಿದೆ.

      ಈ ಕುರಿತಂತೆ  ಸರ್ಕಾರದ ಉಪ ಕಾರ್ಯದರ್ಶಿ ಹೆಚ್ ಎಸ್ ಚನ್ನಬಸಪ್ಪ ಅವರು ಸುತ್ತೋಲೆ ಹೊರಡಿಸಿದ್ದಾರೆ.

      ರಾಜ್ಯ ರಾಜಧಾನಿಯಲ್ಲಿ ಕೊರೊನಾ ವೈರಸ್ ಭೀತಿ ಹೆಚ್ಚಿರುವ ಕಾರಣ, ವೈರಾಣು ಮತ್ತಷ್ಟು ಜನರಿಗೆ ಹರಡದಂತೆ ಸರ್ಕಾರ ಅನೇಕ ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ವಿಧಾನಸೌಧಕ್ಕೆ ಇನ್ಮುಂದೆ ಸಾರ್ವಜನಿಕರು ಮಧ್ಯಾಹ್ನ 3 ಗಂಟೆ ನಂತ್ರವೇ ಪ್ರವೇಶ ಮಾಡಬಹುದಾಗಿದೆ. ಅದಕ್ಕೂ ಮೊದಲು ಅನಗತ್ಯವಾಗಿ ಬಂದವರಿಗೆ ಪ್ರವೇಶ ನಿಷಿದ್ಧವಾಗಿದೆ. ಹೀಗಾಗಿ ಮುಂದಿನ ಆದೇಶದವರೆಗೆ ವಿಧಾನ ಸೌಧ ಭೇಟಿಗೆ ಸಾರ್ವಜನಿಕರಿಗೆ 3 ಗಂಟೆ ನಂತ್ರವೇ ಅವಕಾಶ ಎಂಬುದನ್ನು ಮರೆಯಬೇಡಿ. ಈ ಸಮಯದಲ್ಲಿ ಮಾತ್ರವೇ ವಿಧಾನಸೌಧದ ಒಳಗಡೆ ಪ್ರವೇಶ ಮಾಡಲು ಅವಕಾಶವಿದೆ.

      ವಿಧಾನಸೌಧಕ್ಕೆ ಕೊರೊನಾ ಭೀತಿ ಎದುರಾಗಿದ್ದು, ಇದುವರೆಗೆ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಿದ್ದಂತ ವಿಧಾನಸೌಧ, ಕೊರೊನಾ ವೈರಾಣು ಸೋಂಕಿನ ಭೀತಿಯಿಂದಾಗಿ, ಷರತ್ತು ಬದ್ಧ ಪ್ರವೇಶಕ್ಕೆ ಮಾತ್ರವೇ ಅವಕಾಶ ನೀಡಿದೆ.  

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap