ಹುಚ್ಚಿಂಗದುರ್ಗ ಜಾತ್ರೆಯನ್ನು ರದ್ದುಗೊಳಿಸಲಾಗಿದೆ-ಶಾಸಕ

ಜಗಳೂರು:

    ಕೊರೋನಾ ವೈರಸ್ ಹಿನ್ನಲೆಯಲ್ಲಿ ಮುಂಜಾಗೃತವಾಗಿ ನನ್ನ ಕ್ಷೇತ್ರ ವ್ಯಾಪ್ತಿಯ ಕೊಣಚಗಲ್ ರಂಗಸ್ವಾಮಿ, ಅರಸಿಕರೆ ವ್ಯಾಪ್ತಿಯ ಹುಚ್ಚಿಂಗದುರ್ಗ ಜಾತ್ರೆಯನ್ನು ರದ್ದುಗೊಳಿಸಲಾಗಿದೆ ಎಂದು ಕ್ಷೇತ್ರದ ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು.ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ಶನಿವಾರ ಕರೋನಾ ವೈರಸ್ ಸಂಬಂಧ ಕರೆದಿದ್ದ ವೈದ್ಯರ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪೂಜೆ ಪುನಸ್ಕಾರಗಳು , ಪ್ರಾರ್ಥನೆಗಳನ್ನು ಮನೆಯಲ್ಲೇ ಮಾಡಬೇಕು:

     ಜಗಳೂರು ವಿಧಾನಸ ಭಾಕ್ಷೇತ್ರದಲ್ಲಿ ಕ್ಷೇತ್ರದಲ್ಲಿ ಯಾವುದೇ ಕೊರೋನಾ ವೈರಸ್ ಪ್ರಕರಣಗಳು ಕಂಡುಬಂದಿಲ್ಲ. ನಮ್ಮ ಸಾರ್ವಜನಿಕ ಆಸ್ಪತ್ರೆ ಸಶಕ್ತವಾಘಿದ್ದು ಎಲ್ಲಾ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೊರ ರಾಜ್ಯ, ವಿದೇಶಗಳಿಂದ ಬರುವ ವ್ಯಕ್ತಿಗಳ ಬಗ್ಗೆ ನಿಗವಹಿವಸಿವಂತೆ ಅಧಿಕಾರಿಗಳಲ್ಲಿ ಸೂಚಿಸಿದ್ದು. ಅಧಿಕಾರಿಗಳು ಸಹ ಮುಂಜಾಗೃತ ಕ್ರಮ ಕೈಗೊಂಡಿದ್ದಾರೆ. ಗುಂಪು ಗುಂಪಾಗಿ ಜನ ಸೇರಬಾರದು. ಪೂಜೆ ಪುನಸ್ಕಾರಗಳು , ಪ್ರಾರ್ಥನೆಗಳನ್ನು ಮನೆಯಲ್ಲೇ ಮಾಡಬೇಕು. ಸ್ವಚ್ಚತೆಗೆ ಆದ್ಯತೆ ನೀಡಬೇಕು ಎಂದರು.

    ಕ್ಷೇತ್ರದ ಜನರು ಜಗಳೂರು ಪಟ್ಟಣಕ್ಕೆ ಹಳ್ಳಿಗಳಿಂದ ವೃತಾಹ ಬರಬಾರದು. ಅವಶ್ಯ ವಿದ್ದಲ್ಲಿ ಮಾತ್ರ ಬರಬೇಕು. ಅಧಿಕಾರಿಗಳಲ್ಲಿ ಏನಾದರು ಕೆಲಸ ಆಗುವುದಿದ್ದರೇ ನನ್ನ ದೂರವಾಣಿಗೆ( 9902064989) ಸಂಪರ್ಕಿಸಿ.ಯಾವುದೇ ಸಮಸ್ಯೆಗಳು ಇದ್ದರೂ ಭಗೆ ಹರಿಸುತ್ತೇನೆ . ಜಾತ್ರಿ , ಗುಂಪು ಗುಂಪಾಗಿ ಸೇರಬಾರದು. ಸ್ವಚ್ಚತೆ ಕಾಪಾಡಿಕೊಳ್ಳಿ. ನನಗೆ ನಮ್ಮ ಕ್ಷೇತ್ರದ ಜನರ ಆರೋಗ್ಯ ಮುಖ್ಯ. ಕೊರೋನಾ ವೈರಸ್‍ಗೆ ಔಷಧ ಇಲ್ಲ. ಮುಂಜಾಗೃತವಾಗಿ ರೋಗ ಹರದಂತೆ ಕಾಪಾಡಿಕೊಳ್ಳುವದೇ ಮುಖ್ಯ.

    ಪ್ರಧಾನಮಂತ್ರಿ ನರೇಂದ್ರಮೋದಿಯವರು ರಾಷ್ಟ್ರಾಧ್ಯಂತ ಭಾನುವಾರ ಬೆಳೆಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರಿಗೆ ಒಂದು ದಿವಸ ಜನತಾಕಪ್ರ್ಯು ಘೋಷಿಸಿದ್ದು ಎಲ್ಲರೂ ಒಂದು ದಿವಸ ಮನೆಯಲ್ಲೇ ಇರುವ ಮೂಲಕ ಜನತಾ ಕಪ್ರ್ಯುವಿಗೆ ಕ್ಷೇತ್ರದ ಎಲ್ಲಾ ನಾಗರೀಕರು ಸಹಕಾರ ನೀಡಿ ಯಶಸ್ವಿಗೊಳಿಸುವಂತೆ ಶಾಸಕರು ಮನವಿ ಮಾಡಿದರು.

      ವೈದ್ಯರ ಕೊರೆತೆ ಇದ್ದರೂ ಸಹ ಇಲ್ಲಿನ ವೈದ್ಯರು ಹಗಲಿರುಳು ಶ್ರಮಿಸುತ್ತಿದ್ದಾರೆ. ಸಾರ್ವಜನಿಕರು ಸಹ ಸಹಕಾರ ನೀಡಬೇಕು. ವೈದ್ಯರ ನೇಮಕ, 10 ಲಕ್ಷ ರೂ ವೆಚ್ಚದ ಆರ್.ಓ.ಸಿಸ್ಟಂನ್ನು ಪಟ್ಟಣ ಪಂಚಾಯಿತಿ ವತಿಯಿಂದ ನೀಡುವುದು. ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡಲಾಗುವುದು ಎಂದು ಭರವಸೆ ನೀಡಿದರಲ್ಲದೇ ಈ ಸಂಬಂಧ ಜಿಲ್ಲಾ ವೈದ್ಯಾಧಿಕಾರಿಗೆ ದೂರವಾಣಿಯ ಮೂಲಕ ಚರ್ಚಿಸಿದರು. ಆಸ್ಪತ್ರೆಯನ್ನು ನಮ್ಮ ಮನೆ ಎಂದು ತಿಳಿದು ಕೆಲಸ ಮಾಡುವಂತೆ ಇಲ್ಲಿನ ಎಎನ್‍ಎಮ್ ಹಾಗೂ ಇಲ್ಲಿನ ಸಿಬ್ಬಂಧಿಗಳಿಗೆ ಎಚ್ಚರಿಕೆಯ ಜೊತೆಗೆ ಸೂಚನೆ ನೀಡಿದರು.

       ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ನೀರಜ್ ಮಾತನಾಡಿ ಕೊರೋನಾ ವೈರಸ್ ಡಿ.31 ಕ್ಕೆ ಚೀನಾದಲ್ಲಿ ಪ್ರಾರಂಭವಾಗಿ ಪ್ರಪಂಚದ ವಿವಿಧ ದೇಶಗಳ 2.40 ಲಕ್ಷ ಜನರಿಗೆ ಈ ರೋಗ ಪತ್ತೆಯಾಗಿದೆ. 3450 ಕ್ಕೂ ಅಧಿಕ ಜನ ಮರಣವನ್ನು ಹೊಂದಿದ್ದಾರೆ. ಇದಕ್ಕೆ ನಿಖರವಾದ ಔಷಧ ಇಲ್ಲಾ. ನಮ್ಮ ಜಿಲ್ಲೆಯ ಬನ್ನಿಕೋಡ್‍ನಲ್ಲಿ ಹಕ್ಕಿ ಜ್ವರ ಬಂದಿದೆ. ಕೋಳಿ ಜ್ವರ ಇದೆ ಎಂಬುದು ದೃಢವಾಗಿದೆ. ಹಂದಿ ಜ್ವg ಔಷದ ಲಭ್ಯವಿದೆ. ಮುಂಜಾಗೃತವಾಗಿ ಇಲ್ಲಿ ಎಲ್ಲಾ ಕ್ರಮಗಳನ್ನು ಕೈಗೊಳ್ಳಳಾಗಿದೆ. ಇದುವರೆಗೆ ಕೋರೋನಾ ವೈರಸ್ ಪ್ರಕರಣಗಳು ಬಂದಿಲ್ಲವೆಂದು ಸ್ಪಷ್ಟ ಪಡಿಸಿದರು.

     ತಹಶಿಲ್ದಾರ್ ಹುಲ್ಲಮನೆ ತಿಮ್ಮಣ್ಣ ಮಾತನಾಡಿ ನಮ್ಮಲ್ಲಿ ಕೋರೋನಾ ವೈರಸ್ ಮೂರು ಹಂತದಲ್ಲಿ ಕಂಡು ಬರುತ್ತದೆ. ನಮ್ಮಲ್ಲಿ ಎರಡನೇ ಹಂತದಲ್ಲಿ ನಾವು ಇದ್ದೇವೆ. ನಮಗೆ ನಾವೇ ಮುಂಜಾಗೃತವಾಗಿ ಭಾನುವಾರ ಪ್ರಧಾನ ಮಂತ್ರಿ ಕರೇ ನೀಡಿರುವ ಒಂದು ದಿವಸದ 14 ಗಂಟೆ ಜನತಾ ಕಪ್ರ್ಯುವಿಗೆ ಸಹಕಾರ ನೀಡಿ ರೋಗ ಹರಡದಂತೆ ನಮ್ಮನ್ನೆ ನಾವು ರಕ್ಷಣೆ ಮಾಡಿಕೊಳ್ಳಬೇಕೆಂದು ಅವರು ಜನತೆಗೆ ಕರೇ ನೀಡಿದರು.

    ಈ ಸಂದರ್ಭದಲ್ಲಿ ತಾಲ್ಲೂಕು ಕಾರ್ಯನಿರ್ವಾಹಕಾಧಿಕಾರಿ ಮಲ್ಲನಾಯ್ಕ್, ಸಿಪಿಐ ದುರುಗಪ್ಪ, ತಾಲ್ಲೂಕು ವೈದ್ಯಾಧಿಕಾರಿ ನಾಗರಾಜು,ಮುಖ್ಯಾಧಿಕಾರಿ ರಾಜು ಬಣಕಾರ, ವೈದ್ಯರುಗಳಾದ ಮಲ್ಲಪ್ಪ , ಕಲ್ಪನಾ, ಮಂಜುನಾಥ್, ಸಂಜಯ್,ಹಿರಿಯ ಎಎನ್‍ಎಮ್ ಮೀನಾಕ್ಷಮ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link