ಹುಳಿಯಾರು
ಕೊರೊನಾ ವೈರಸ್ ಭೀತಿಯ ಹಿನ್ನಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾಡಿದ ಮನವಿಯಂತೆ ‘ಜನತಾ ಕರ್ಫ್ಯೂ ` ವಿಗೆ ಹುಳಿಯಾರಿನಲ್ಲಿ ವ್ಯಾಪಕ ಬೆಂಬಲ ವ್ಯಕ್ತಯಾಯಿತು.
ವರ್ತಕರು ಹಾಗೂ ಖಾಸಗಿ ಬಸ್ ಮಾಲೀಕರು ಸ್ವಯಂ ಪ್ರೇರೀತವಾಗಿ ಅಂಗಡಿಗಳನ್ನು ಬಂದ್ ಮಾಡಿದ್ದರಿಂದ ಪಟ್ಟಣದಲ್ಲಿ ವ್ಯಾಪಾರ ವಹಿವಾಟು ಸಂಪೂರ್ಣ ಇಲ್ಲದಾಗಿತ್ತು. ಸದಾ ಟ್ರಾಫಿಕ್ ಜಾಂ ಉಂಟಾಗಿ ವಾಹನಗಳಿಂದ ಕೂಡಿರುತ್ತಿದ್ದ ರಾಜ್ ಕುಮಾರ್ ರಸ್ತೆ, ಬಿಎಚ್ ರಸ್ತೆ, ಪೇಟೆ ಬೀದಿ, ರಾಮ ಹಾಲ್ ರಸ್ತೆಗಳಲ್ಲಿ ವಾಹನ ಸಂಚಾರ ಇಲ್ಲದೆ ಸ್ತಬ್ದವಾಗಿತ್ತು.
ಅಲ್ಲದೆ ಸದಾ ಜನಜಂಗುಳಿಯಿಂದ ತುಂಬಿ ಹೋಗುತ್ತಿದ್ದ ಬಸ್ ನಿಲ್ದಾಣ, ಪೊಲೀಸ್ ಸ್ಟೇಷನ್ ಸರ್ಕಲ್, ರಾಮಗೋಪಾಲ್ ಸರ್ಕಲ್‍ಗಳಲ್ಲಿ ಜನರ ಓಡಾಟವಿಲ್ಲದೆ ಬಿಕೋ ಎನ್ನುತ್ತಿತ್ತು. ಹತ್ತನ್ನೆರಡು ಔಷಧಿ ಅಂಗಡಿಗಳ ಪೈಕಿ ಎರಡ್ಮೂರು ಮಾತ್ರ ತೆರೆದು ಸಾರ್ವಜನಿಕರ ಅಗತ್ಯ ಔಷಧಿಗಳಿಗೆ ನೆರವಾದರು. ದೇವಸ್ಥಾನಗಳು, ಚರ್ಚ್‍ಗಳು, ಮಸೀದಿಗಳು ಸಾಮೂಹಿಕ ಪ್ರಾರ್ಥನೆ ರದ್ದು ಮಾಡಿದ್ದು ವಿಶೇಷವಾಗಿತ್ತು.
ಸಾಮಾನ್ಯವಾಗಿ ಹುಳಿಯಾರು ಪಟ್ಟಣಕ್ಕೆ ಅಕ್ಕಪಕ್ಕದ ಹಳ್ಳಿಗಳ ಜನರು ಬರುತ್ತರಾದರೂ ಇಂದು ಮಾತ್ರ ಎಲ್ಲರೂ ತಮ್ಮತಮ್ಮ ಊರಿನಲ್ಲೇ ಇದ್ದು ಪ್ರಧಾನಿ ಕರೆಗೆ ಬೆಂಬಲ ನೀಡಿದರು. ಉಳಿದಂತೆ ಕೆಲ ಯುವಕರು ಆಗಾಗ ಬೈಕ್‍ನಲ್ಲಿ ಓಡಾಡುತ್ತಿದ್ದದ್ದು ಬಿಟ್ಟರೆ ಆಟೋ, ಟಾಟಾ ಏಸ್ ಮತ್ತಿತರ ವಾಹನಗಳ ಓಡಾಡ ಕಾಣದಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ