ಹುಳಿಯಾರು:
ಹುಳಿಯಾರು ಹೋಬಳಿಯ ದಸೂಡಿ ಗ್ರಾಮದ ಅಡಕೆ ಮತ್ತು ತೆಂಗಿನ ತೋಟವೊಂದಕ್ಕೆ ಬೆಂಕಿ ತಗುಲಿ ಅಪಾರ ನಷ್ಟವಾದ ಘಟನೆ ಶನಿವಾರ ಜರುಗಿದೆ.ದಸೂಡಿಯ ಮೆಡಿಸಿನ್ ಸೌತೆ ಕಛೇರಿಯ ಸಮೀಪ ಬೆಂಗಳೂರಿನ ಹರೀಶ್ ಎಂಬುವವರಿಗೆ ಸೇರಿದ ತೋಟಕ್ಕೆ ಬೆಂಕಿ ತಗುಲಿದೆ. ಅಕ್ಕಪಕ್ಕದ ತೋಟದವರು ಬೆಂಕಿ ಗಮನಿಸಿ ದಸೂಡಿ ಗ್ರಾಮದ ಯುವಕರಿಗೆ ವಿಷಯ ಮುಟ್ಟಿಸಿದ್ದಾರೆ.ತಕ್ಷಣ ದಸೂಡಿಯ ಯುವಕರು ತೋಟಕ್ಕೆ ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರಾದರೂ ಅಷ್ಟರಲ್ಲಾಗಲೇ 60 ಅಡಿಕೆ ಮರಗಳು ಹಾಗೂ 13 ತೆಂಗಿನ ಮರಗಳು ಸುಟ್ಟು ಹೋಗಿ ಅಪಾರ ನಷ್ಟವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ