ಚಳ್ಳಕೆರೆ :ಅಸ್ಸಾಂ ಮೂಲದ ವ್ಯಕ್ತಿಗೆ ಸೋಂಕು  

ಚಳ್ಳಕೆರೆ

    ಕೊರೋನಾ ವೈರಾಣು ನಿಯಂತ್ರಣ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಹಗಲು ರಾತ್ರಿ ಕಾರ್ಯನಿರ್ವಹಿಸುವ ಮೂಲಕ ಈ ಭಾಗದಲ್ಲಿ ಭಯಾನಕ ವೈರಾಣು ವ್ಯಾಪಿಸದಂತೆ ಜಾಗೃತೆವಹಿಸುವ ಸಂದರ್ಭದಲ್ಲಿ ಅಸ್ಸಾಂ ರಾಜ್ಯದಿಂದ ಬಂದ ವ್ಯಕ್ತಿಯೊಬ್ಬ ಇಲ್ಲಿ ಓಡಾಡುತ್ತಿದ್ದು, ಕೂಡಲೇ ಅವನನ್ನು ವಶಕ್ಕೆ ಪಡೆದು ಇಲ್ಲಿನ ಸಾರ್ವಜನಿಕ ಆಸ್ಪತ್ರೆ ಹೈಸೋಲೇಟೆಡ್ ವಾರ್ಡ್‍ಗೆ ದಾಖಲಿಸಲಾಗಿದೆ.

   ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಭಾನುವಾರ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಅಸ್ಸಾಂ ರಾಜ್ಯದಿಂದ ಬಂದ ವ್ಯಕ್ತಿಯ ಬಗ್ಗೆ ಆಡಳಿತಾಧಿಕಾರಿ ಡಾ.ಬಸವರಾಜು, ಡಾ.ಸತೀಶ್ ಆದಿಮನಿಯವರಿಂದ ಮಾಹಿತಿ ಪಡೆದರು.

    ಈ ಸಂದರ್ಭದಲ್ಲಿ ಸೂಚನೆ ನೀಡಿದ ಶಾಸಕರು ಸಾರ್ವಜನಿಕರ ಸಹಕಾರದಿಂದ ಈ ವ್ಯಕ್ತಿಯನ್ನು ಇಲ್ಲಿಗೆ ಕರೆತರಲು ಸಾಧ್ಯವಾಗಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ಜಾಗೃತಗೊಂಡು ಚಿಕಿತ್ಸೆ ನೀಡಿ ಜಾಗೃತವಹಿಸಿದ್ದಾರೆ. ಕೂಡಲೇ ಈ ವ್ಯಕ್ತಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸುವಂತೆ ಸಲಹೆ ನೀಡಿದರು. ಪ್ರತಿನಿತ್ಯವೂ ಆಡಳಿತಾಧಿಕಾರಿ ಹಾಗೂ ಎಲ್ಲಾ ವೈದ್ಯರು ಸಿಬ್ಬಂದಿ ವರ್ಗ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ಮೂಲಕ ಕೊರೋನಾ ವೈರಾಣುವಿನಿಂದ ಚಳ್ಳಕೆರೆ ನಗರವನ್ನು ಮುಕ್ತಪಡಿಸಬೇಕೆಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link